ಸೋಶಿಯಲ್ ಮೀಡಿಯಾ ಯುಗದಲ್ಲಿ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇತ್ತೀಚೆಗೆ ತೆಲಂಗಾಣದ ಕರೀಂನಗರದಲ್ಲಿ ನಡೆದ ಘಟನೆಯಂತೂ ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ. ಮಾಡಿದ ಸಾಲವನ್ನು ತೀರಿಸಲು ಸ್ವತಃ ಪತಿಯೇ ತನ್ನ ಪತ್ನಿಯನ್ನು ಬಳಸಿಕೊಂಡು 100ಕ್ಕೂ ಹೆಚ್ಚು ಪುರುಷರಿಗೆ ಹನಿಟ್ರ್ಯಾಪ್ (Honeytrap) ಮಾಡಿರುವ ಘೋರ ದಂಧೆ ಬೆಳಕಿಗೆ ಬಂದಿದೆ.

Honeytrap – ದಂಧೆ ನಡೆಯುತ್ತಿದ್ದುದು ಹೇಗೆ?
ಬಂಧಿತ ಮಹಿಳೆ ಲಲಿತಾ ಎಂಬಾಕೆ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಮೂಲಕ ಶ್ರೀಮಂತ ಪುರುಷರನ್ನು ಸಂಪರ್ಕಿಸುತ್ತಿದ್ದಳು. ಸಿಹಿ ಮಾತುಗಳಿಂದ ಅವರ ವಿಶ್ವಾಸ ಗಳಿಸಿ, ನಂತರ ತನ್ನ ಮನೆಗೆ ಆಹ್ವಾನಿಸುತ್ತಿದ್ದಳು. ಆದರೆ ಅಲ್ಲಿ ನಡೆಯುತ್ತಿದ್ದಿದ್ದೇ ಬೇರೆ ಆಟ! ಸಂತ್ರಸ್ತರಿಗೆ ತಿಳಿಯದಂತೆ ಮನೆಯೊಳಗೆ ಗುಪ್ತ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಲಲಿತಾ ಪುರುಷರೊಂದಿಗೆ ಇರುವ ಖಾಸಗಿ ಕ್ಷಣಗಳನ್ನು ಆಕೆಯ ಪತಿಯೇ ರಹಸ್ಯವಾಗಿ ರೆಕಾರ್ಡ್ ಮಾಡುತ್ತಿದ್ದ. ನಂತರ ಇದೇ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಶುರುವಾಗುತ್ತಿತ್ತು.
100ಕ್ಕೂ ಅಧಿಕ ಸಂತ್ರಸ್ತರು, ಕೋಟಿ ಕೋಟಿ ಹಣ ಸುಲಿಗೆ!
ಕಳೆದ ಮೂರು ವರ್ಷಗಳಿಂದ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿತ್ತು. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು 100ಕ್ಕೂ ಹೆಚ್ಚು ಪುರುಷರು ಈ ಜಾಲಕ್ಕೆ ಬಲಿಯಾಗಿದ್ದಾರೆ. ದಂಪತಿಗಳು ಈ ಸುಲಿಗೆ ಹಣದಿಂದಲೇ ಸುಮಾರು ₹65 ಲಕ್ಷ ಮೌಲ್ಯದ ನಿವೇಶನ, ₹10 ಲಕ್ಷದ ಕಾರು ಸೇರಿದಂತೆ ಐಷಾರಾಮಿ ಜೀವನ ನಡೆಸುತ್ತಿದ್ದರು. ಹಣ ನೀಡದಿದ್ದರೆ (Honeytrap) ವಿಡಿಯೋವನ್ನು ಕುಟುಂಬಸ್ಥರಿಗೆ ಕಳುಹಿಸುವುದು ಅಥವಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವ ಬೆದರಿಕೆ ಹಾಕುತ್ತಿದ್ದರು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಲಾರಿ ಮಾಲೀಕರೊಬ್ಬರು ನೀಡಿದ ಧೈರ್ಯದ ದೂರು ಈ ದಂಧೆಯನ್ನು ಬಯಲಿಗೆಳೆಯಿತು. ಲಲಿತಾ ಪೀಡನೆಗೆ ಒಳಗಾಗಿದ್ದ ಅವರು ಈಗಾಗಲೇ ₹13 ಲಕ್ಷ ಪಾವತಿಸಿದ್ದರು. ಆದರೂ ಮತ್ತೆ ₹5 ಲಕ್ಷಕ್ಕೆ ಬೇಡಿಕೆ ಇಟ್ಟು, ಜೀವ (Honeytrap) ಬೆದರಿಕೆ ಹಾಕಿದಾಗ ಅವರು ಪೊಲೀಸರ ಮೊರೆ ಹೋದರು. ಪೊಲೀಸರು ಕಾರ್ಯಾಚರಣೆ ನಡೆಸಿ ದಂಪತಿಯನ್ನು ಬಂಧಿಸಿದಾಗ ಅವರ ಬಳಿಯಿದ್ದ ಫೋನ್‌ಗಳು, ಚೆಕ್‌ಬುಕ್ ಮತ್ತು ಹನಿಟ್ರ್ಯಾಪ್‌ಗೆ ಬಳಸುತ್ತಿದ್ದ ಡಿಜಿಟಲ್ ಪುರಾವೆಗಳು ಪತ್ತೆಯಾಗಿವೆ. Read this also : ಮದುವೆ ಹೆಸರಲ್ಲಿ ₹1.7 ಕೋಟಿ ಲೂಟಿ! ಹೆಂಡತಿಯನ್ನೇ ‘ಅಕ್ಕ’ ಎಂದ ವಂಚಕ ವಿಜಯ್ ಗೌಡನ ಅಸಲಿ ಮುಖವಾಡ ಕಳಚಿದ ಟೆಕ್ಕಿ..!

ಪೊಲೀಸರ ಮನವಿ
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮಾಡಿಕೊಂಡಿದ್ದ ಸಾಲ ಮತ್ತು ಇಎಂಐ ಕಟ್ಟಲು ಈ ದಂಪತಿ ಇಂತಹ ದಾರಿ ಹಿಡಿದಿದ್ದರು ಎಂದು ತಿಳಿದುಬಂದಿದೆ. ಈ ಜೋಡಿಯಿಂದ ಮೋಸಹೋಗಿರುವ ಇನ್ನುಳಿದವರು ಧೈರ್ಯವಾಗಿ ಮುಂದೆ ಬಂದು (Honeytrap) ದೂರು ನೀಡುವಂತೆ ಪೊಲೀಸರು ತಿಳಿಸಿದ್ದಾರೆ. ದೂರುದಾರರ ಹೆಸರು ಮತ್ತು ಗೌಪ್ಯತೆಯನ್ನು ಕಾಪಾಡುವುದಾಗಿ ಇಲಾಖೆ ಭರವಸೆ ನೀಡಿದೆ.
