ಬೀದಿಗಳಲ್ಲಿ ಅಲೆದಾಡುವ ಬಿಷ್ಯದ ದನಗಳು ಅಥವಾ ಗೂಳಿಗಳಿಂದ ಸಾಮಾನ್ಯ ಜನರಿಗೆ ಎಷ್ಟು ಅಪಾಯವಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಇಲ್ಲಿದೆ. ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದ ಈ ಘಟನೆ ನೋಡಿದರೆ ಎಂಥವರಿಗೂ ಒಮ್ಮೆ ಎದೆ ಝಲ್ಲೆನ್ನಿಸುವುದು ಗ್ಯಾರಂಟಿ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಮೇಲೆ (Bull Attack) ಗೂಳಿಯೊಂದು ಏಕಾಏಕಿ ದಾಳಿ ನಡೆಸಿ, ಆಕೆಯನ್ನು ಚೆಂಡಿನಂತೆ ಮೇಲಕ್ಕೆ ಎಸೆದ ಭೀಕರ ವಿಡಿಯೋ ಈಗ ವೈರಲ್ ಆಗಿದೆ.

Bull Attack – ಏನಿದು ಘಟನೆ? ಎಲ್ಲಾಗಿದ್ದು?
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕಾಂಡ್ಲಾ ಮಾರುಕಟ್ಟೆ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಅಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯ ಸಮೀಪ ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ಭಾರಿ ಗಾತ್ರದ ಗೂಳಿಯೊಂದು ಇದ್ದಕ್ಕಿದ್ದಂತೆ ರೊಚ್ಚಿಗೆದ್ದಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಮಹಿಳೆಯ ಮೇಲೆರಗಿದ ಗೂಳಿ, ತನ್ನ ಹರಿತವಾದ ಕೊಂಬುಗಳಿಂದ ಆಕೆಯನ್ನು ಅಮಾನವೀಯವಾಗಿ ಮೇಲಕ್ಕೆತ್ತಿ ನೆಲಕ್ಕೆ ಅಪ್ಪಳಿಸಿದೆ. ಈ ದಾಳಿಯ ರಭಸಕ್ಕೆ ಮಹಿಳೆ ಗಾಳಿಯಲ್ಲಿ ಹಾರಿ ಬಿದ್ದಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಲೈವ್ ದೃಶ್ಯ
ಈ ಹಾರರ್ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಗೂಳಿ ಮಹಿಳೆಯನ್ನು ಗುಮ್ಮುವುದು ಮತ್ತು ಆಕೆ ಕೆಳಗೆ ಬೀಳುವುದನ್ನು ಸ್ಪಷ್ಟವಾಗಿ ಕಾಣಬಹುದು. (Bull Attack) ಮಹಿಳೆಯ ಚೀರಾಟ ಕೇಳಿ ತಕ್ಷಣವೇ ಎಚ್ಚೆತ್ತ ಸ್ಥಳೀಯರು ಮತ್ತು ವಾಹನ ಸವಾರರು, ಓಡಿ ಬಂದು ಗೂಳಿಯನ್ನು ಓಡಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. Read this also : ಸೀರೆಯುಟ್ಟು ಬೈಕ್‌ನಲ್ಲಿ ಧೂಳೆಬ್ಬಿಸಿದ ಯುವತಿ! ಈ ‘ದೇಸಿ ಡ್ರಿಫ್ಟ್’ ನೋಡಿದ್ರೆ ನೀವು ಶಾಕ್ ಆಗ್ತೀರಾ, ವೈರಲ್ ಆದ ವಿಡಿಯೋ…!

ದಾಳಿಯಿಂದಾಗಿ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದರು. ಆದರೆ, ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸುಸಜ್ಜಿತ ಆಸ್ಪತ್ರೆಗೆ (Bull Attack) ರವಾನಿಸಲಾಗಿದೆ. ಸದ್ಯ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಸ್ಥಳೀಯರ ಆಕ್ರೋಶ
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Bull Attack) ಆಗುತ್ತಿದ್ದಂತೆ, ಸ್ಥಳೀಯಾಡಳಿತದ ವಿರುದ್ಧ ಜನರು ಮತ್ತು ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಂಡ್ಲಾ ಪಟ್ಟಣದಲ್ಲಿ ಬೀದಿ ಪಶುಗಳ ಹಾವಳಿ ಮಿತಿಮೀರಿದೆ, ಇದರಿಂದ ದಿನನಿತ್ಯದ ಓಡಾಟಕ್ಕೆ ಭಯಪಡುವಂತಾಗಿದೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದರೂ, ಅಧಿಕಾರಿಗಳು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪ. ಈಗಲಾದರೂ ಎಚ್ಚೆತ್ತುಕೊಂಡು, ಜನನಿಬಿಡ ಮಾರುಕಟ್ಟೆಗಳಲ್ಲಿ ತಿರುಗಾಡುವ ಬೀದಿ ದನಗಳನ್ನು ನಿಯಂತ್ರಿಸಲು ಆಡಳಿತ ವ್ಯವಸ್ಥೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
