ರಾಜಸ್ಥಾನದ ಬನ್ಸ್ವಾರ ಜಿಲ್ಲೆಯ ಆನಂದಪುರಿ ಭಾಗದಿಂದ ಬಂದಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೇವಲ 16 ಜನರು ಕೂರಬಹುದಾದ ಜೀಪಿನಲ್ಲಿ ಬರೋಬ್ಬರಿ 60ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣವನ್ನು ಕೈಯಲ್ಲಿ (Rajasthan Viral Video) ಹಿಡಿದು ಪ್ರಯಾಣಿಸುತ್ತಿರುವ ದೃಶ್ಯ ಎದೆಝಲ್ಲೆನಿಸುವಂತಿದೆ.

Rajasthan Viral Video – ಏನಿದು ಘಟನೆ? ಮೈ ಜುಂ ಎನಿಸುವ ದೃಶ್ಯಗಳು!
ವೈರಲ್ ಆಗಿರುವ ವಿಡಿಯೋದಲ್ಲಿ, ಜೀಪಿನ ಒಳಗಿನ ಸೀಟುಗಳು ಭರ್ತಿಯಾಗಿರುವುದು ಮಾತ್ರವಲ್ಲದೆ, ಜನರು ಜೀಪಿನ ಬೋನೆಟ್, ಮೇಲ್ಛಾವಣಿ (ರೂಫ್), ಸ್ಟೆಪ್ನಿ ಮತ್ತು ಚಾಲಕನ ಬಾಗಿಲಿಗೂ ಜೋತುಬಿದ್ದಿರುವುದು ಕಂಡುಬಂದಿದೆ. ಟ್ರಕ್‌ನಲ್ಲಿ ಹುಲ್ಲು ತುಂಬಿದಂತೆ ಜನರನ್ನು ತುರುಕಲಾಗಿದ್ದು, ಚಾಲಕನಿಗೆ ರಸ್ತೆ ಸರಿಯಾಗಿ ಕಾಣಿಸುತ್ತಿದೆಯೇ ಎಂಬ ಅನುಮಾನ ಮೂಡುವಂತಿದೆ.
ಈ ಅಪಾಯಕಾರಿ ಪ್ರಯಾಣದಲ್ಲಿ ವಯಸ್ಸಾದವರು, ಮಹಿಳೆಯರು ಮತ್ತು ಪುಟ್ಟ ಮಕ್ಕಳೂ ಸೇರಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತಿದೆ. ಇಷ್ಟೆಲ್ಲಾ ಜನರಿದ್ದರೂ ಚಾಲಕ ಮಾತ್ರ ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿರುವುದು (Rajasthan Viral Video) ವಿಡಿಯೋದಲ್ಲಿ ಸೆರೆಯಾಗಿದೆ. Read this also : ಮೈದುನನ ಮದುವೆಯಲ್ಲಿ ವಿದೇಶಿ ಅತ್ತಿಗೆಯ (Bollywood Dance) ‘ಬಾಲಿವುಡ್’ ಮ್ಯಾಜಿಕ್: ಡ್ಯಾನ್ಸ್ ನೋಡಿ ನೆಟ್ಟಿಗರು ಫಿದಾ…!
ಅಪಾಯಕಾರಿ ಪ್ರಯಾಣಕ್ಕೆ ಅಸಲಿ ಕಾರಣವೇನು?
ವರದಿಗಳ ಪ್ರಕಾರ, ಬನ್ಸ್ವಾರದ ಈ ಭಾಗವು ಬುಡಕಟ್ಟು ಜನಾಂಗದವರು ಹೆಚ್ಚಾಗಿರುವ ಪ್ರದೇಶವಾಗಿದೆ. ಇಲ್ಲಿ ಸರಿಯಾದ ಸಾರಿಗೆ ವ್ಯವಸ್ಥೆ ಮತ್ತು ಸರ್ಕಾರಿ ಬಸ್‌ಗಳ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ, ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗಾಗಿ ಅನಿವಾರ್ಯವಾಗಿ ಇಂತಹ ಖಾಸಗಿ ವಾಹನಗಳನ್ನೇ ಅವಲಂಬಿಸಿದ್ದಾರೆ. ಸಾರಿಗೆ ಸೌಲಭ್ಯದ ಕೊರತೆಯಿಂದಾಗಿ ಜನರು ದಿನನಿತ್ಯ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಂಚರಿಸುತ್ತಿದ್ದಾರೆ.
ಎಚ್ಚೆತ್ತುಕೊಂಡ ಅಧಿಕಾರಿಗಳು: ದಂಡದ ಸುರಿಮಳೆ
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮತ್ತು ಸಾರಿಗೆ ಇಲಾಖೆ ತಕ್ಷಣ ಕಾರ್ಯಾಚರಣೆಗೆ ಇಳಿದಿದೆ. ಸಂಚಾರಿ ಪೊಲೀಸರು ಮತ್ತು ಸಾರಿಗೆ ಇಲಾಖೆಯ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿವೆ. ನಿಯಮ ಉಲ್ಲಂಘಿಸಿದ ಹಲವಾರು ಓವರ್‌ಲೋಡ್ ವಾಹನಗಳಿಗೆ ಭಾರಿ ಮೊತ್ತದ ದಂಡ (Challan) ವಿಧಿಸಲಾಗಿದೆ ಎಂದು ಹೇಳಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಸಾರಿಗೆ ಅಧಿಕಾರಿ (DTO) ಪಂಕಜ್ ಶರ್ಮಾ, “ಸಾರಿಗೆ ಸೌಲಭ್ಯಗಳ ಕೊರತೆ ಇರುವುದು ನಿಜ. (Rajasthan Viral Video) ಆದರೆ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸಂಚಾರಿ ನಿಯಮಗಳನ್ನು ಗಾಳಿಗೆ ತೂರುವವರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ,” ಎಂದು ತಿಳಿಸಿದ್ದಾರೆ.
