ಇಂದಿನ ಕಾಲದಲ್ಲಿ ಹೆತ್ತವರೇ ದೈವ ಎಂದು ನಂಬುವವರ ನಡುವೆ, ಅದೇ ಹೆತ್ತವರನ್ನು ಶತ್ರುಗಳಿಗಿಂತ ಕಡೆಯಾಗಿ ಕಾಣುವವರೂ ಇದ್ದಾರೆ ಎಂಬುದು ಆಘಾತಕಾರಿ ವಿಚಾರ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಮನುಕುಲವೇ ತಲೆತಗ್ಗಿಸುವಂತಿದೆ. ತನ್ನ ಸುಖ-ಸಂತೋಷಕ್ಕಾಗಿ ತಂದೆ ಕಷ್ಟಪಟ್ಟು ಸಂಪಾದಿಸಿದ್ದ ಹಣವನ್ನೆಲ್ಲಾ ಖರ್ಚು ಮಾಡಿ, ಅಷ್ಟಕ್ಕೇ ನಿಲ್ಲದೆ ಆ ವೃದ್ಧ ತಂದೆಯ ಮೇಲೆ ಮಗಳೇ (Daughter) ಹಲ್ಲೆ ನಡೆಸಿರುವ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Daughter – ಏನಿದು ಘಟನೆ?
ವೈರಲ್ ಆಗಿರುವ ವಿಡಿಯೋದಲ್ಲಿ, ಮಗಳೊಬ್ಬಳು ತನ್ನ ತಂದೆಯೊಂದಿಗೆ ತೀವ್ರವಾಗಿ ಜಗಳವಾಡುತ್ತಿರುವುದನ್ನು ಕಾಣಬಹುದು. ಕೇವಲ ಮಾತಿನ ಚಕಮಕಿಯಷ್ಟೇ ಅಲ್ಲದೆ, ಆಕೆ ತನ್ನ ತಂದೆಯನ್ನು ಆವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಅಮಾನವೀಯವಾಗಿ ಹಲ್ಲೆ ನಡೆಸುತ್ತಿದ್ದಾಳೆ. ವರದಿಗಳ ಪ್ರಕಾರ, ಆ ತಂದೆ ತನ್ನ ಜೀವನದುದ್ದಕ್ಕೂ ಕಷ್ಟಪಟ್ಟು ಉಳಿಸಿದ್ದ 18 ಲಕ್ಷ ರೂಪಾಯಿ ಹಣವನ್ನು ಈಕೆ ತನ್ನ ಕೆಟ್ಟ ಹವ್ಯಾಸಗಳಿಗಾಗಿ ಪೂರ್ತಿ ಖರ್ಚು ಮಾಡಿದ್ದಾಳೆ. ಹಣದ ವಿಚಾರವಾಗಿ ಶುರುವಾದ ಈ ಕಿರಿಕ್, ಕೊನೆಗೆ ತಂದೆಯ ಮೇಲೆ ದೈಹಿಕ ಹಲ್ಲೆ ಮಾಡುವ ಹಂತಕ್ಕೆ ತಲುಪಿದೆ. Read this also : ‘ನನಗೆ 2ನೇ ಮದುವೆ ಮಾಡಿಸಿ’ ಅಂತ ವಾಟರ್ ಟ್ಯಾಂಕ್ ಏರಿದ ಭೂಪ! ಅಸಲಿ ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!
ತಂದೆಯ ಮೌನವೇ ಒಂದು ಕರುಣಾಜನಕ ಕಥೆ
ವಿಡಿಯೋದಲ್ಲಿ ಅತ್ಯಂತ ನೋವು ನೀಡುವ ದೃಶ್ಯವೆಂದರೆ, ಮಗಳು ಅಷ್ಟೊಂದು ಕೆಟ್ಟದಾಗಿ ನಿಂದಿಸುತ್ತಿದ್ದರೂ, ಹಲ್ಲೆ ಮಾಡುತ್ತಿದ್ದರೂ ಆ ತಂದೆ ಹತಾಶರಾಗಿ ಕಣ್ಣೀರು ಹಾಕುತ್ತಾ ಸುಮ್ಮನೆ ಕುಳಿತಿರುವುದು. ಮಗಳ ನಿರ್ದಯಿ ಮಾತುಗಳು ಮತ್ತು ಆಕೆಯ ಆಕ್ರೋಶ ಆ ವೃದ್ಧ ತಂದೆಯನ್ನು ಮಾನಸಿಕವಾಗಿ ಕುಗ್ಗಿಸಿವೆ. ಜನ್ಮ ನೀಡಿದ ಮಗಳೇ ತನಗೆ (Daughter) ನಪುಂಸಕನೆಂದು ನಿಂದಿಸುತ್ತಿರುವುದನ್ನು ಕೇಳಿ ಆ ತಂದೆ ಅನುಭವಿಸುತ್ತಿರುವ ನೋವು ಯಾರಿಗೂ ಬೇಡ ಎನ್ನುವಂತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ನೆಟ್ಟಿಗರ ಆಕ್ರೋಶದ ಕಟ್ಟೆಡೆದ ಕಮೆಂಟ್‌ಗಳು
ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದು, ನೆಟ್ಟಿಗರು ಈಕೆಯ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ: “ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಸಿಗಬೇಕು ನಿಜ, ಆದರೆ ಇಂತಹ ದೌರ್ಜನ್ಯಕ್ಕಲ್ಲ” ಎಂದು ಒಬ್ಬರು ಆಕ್ರೋಶ ಹೊರಹಾಕಿದ್ದಾರೆ. “ಈಕೆಯನ್ನ ಮದುವೆಯಾಗುವ ಗಂಡನ ಗತಿ ಏನು? ಇಂತಹವರು ಕುಟುಂಬದ ಜೊತೆ ಬದುಕಲು ಅರ್ಹರಲ್ಲ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. “ಇವಳು (Daughter) ಮದುವೆಯಾಗಿ ಇನ್ನೊಂದು ಕುಟುಂಬ ಹಾಳು ಮಾಡುವ ಬದಲು ಒಂಟಿಯಾಗಿರುವುದೇ ಒಳಿತು” ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ನಮ್ಮ ಮಾತು: ಪ್ರೀತಿಯಿಂದ ಸಾಕಿದ ಮಗಳೇ ತಂದೆಯ ಪಾಲಿಗೆ ಕಂಟಕವಾಗುವ ಇಂತಹ ಘಟನೆಗಳು ಸಮಾಜ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಯನ್ನು ಮೂಡಿಸುತ್ತಿವೆ. ಹಣದ ವ್ಯಾಮೋಹಕ್ಕೆ ಬಿದ್ದು ರಕ್ತ ಸಂಬಂಧಗಳನ್ನೇ ಮರೆಯುವುದು ನಿಜಕ್ಕೂ ದುರಂತ.

