ಪ್ರೀತಿ ಎಂಬುದು ಸುಂದರ ಅನುಭವ ಎನ್ನುತ್ತಾರೆ. ಆದರೆ ಅದೇ ಪ್ರೀತಿ ಕೆಲವೊಮ್ಮೆ ಜೀವವನ್ನೇ ಬಲಿ ತೆಗೆದುಕೊಳ್ಳುವಷ್ಟು ಕಠೋರವಾಗುತ್ತದೆ ಎಂಬುದಕ್ಕೆ ತೆಲಂಗಾಣದ (Telangana) ಭದ್ರಾಂದ್ರಿ ಕೊತ್ತಗುಡೆಂ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಮೂರು ವರ್ಷಗಳ ಕಾಲ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಯುವಕ, ಮದುವೆ ವಿಷಯ ಬಂದಾಗ ಕೈಕೊಟ್ಟಿದ್ದಲ್ಲದೆ, ಆಕೆಯ ವ್ಯಕ್ತಿತ್ವಕ್ಕೆ ಕಳಂಕ ಹಚ್ಚಿದ ಪರಿಣಾಮ ಯುವತಿಯೊಬ್ಬಳು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ.

Telangana – ಏನಿದು ಘಟನೆ? ಅಸಲಿಗೆ ನಡೆದಿದ್ದೇನು?
ಭದ್ರಾಂದ್ರಿ ಕೊತ್ತಗುಡೆಂ ಜಿಲ್ಲೆಯ ಅಶ್ವಪುರಂನ ನಂದಕಿಶೋರ್ ಮತ್ತು ಸರಸ್ವತಿ ಎಂಬುವವರು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಡಿಗ್ರಿ ಮುಗಿಸಿದ್ದ ಸರಸ್ವತಿ ಹೈದರಾಬಾದ್‌ನ ಕಾಲ್ ಸೆಂಟರ್ ಒಂದರಲ್ಲಿ ಟೆಲಿಕಾಲರ್ ಆಗಿ ಕೆಲಸ ಮಾಡುತ್ತಿದ್ದರೆ, ನಂದಕಿಶೋರ್ ಅಲ್ಲಿಯೇ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದನು. ಇಬ್ಬರ ನಡುವೆ ಎಲ್ಲವೂ ಚೆನ್ನಾಗಿಯೇ ಇತ್ತು ಎಂದು ಕುಟುಂಬದವರು ಭಾವಿಸಿದ್ದರು.
ಮದುವೆ ವಿಚಾರಕ್ಕೆ ಶುರುವಾದ ಕಿರಿಕ್
ಹೊಸ ವರ್ಷದ ಸಂಭ್ರಮಕ್ಕಾಗಿ ಇಬ್ಬರೂ ತಮ್ಮೂರಿಗೆ (ಅಶ್ವಪುರಂ) ಬಂದಿದ್ದರು. ಈ ವೇಳೆ ಸರಸ್ವತಿ ಮದುವೆಯ ಪ್ರಸ್ತಾಪ ಎತ್ತಿದ್ದಾಳೆ. ಆದರೆ, ನಂದಕಿಶೋರ್ ಮದುವೆಗೆ ಒಪ್ಪದೆ ತಗಾದೆ ತೆಗೆದಿದ್ದಾನೆ. ಅಷ್ಟೇ ಅಲ್ಲದೆ, “ನೀನು ಬೇರೆ ಯುವಕನ ಜೊತೆ ತಿರುಗಾಡುತ್ತಿದ್ದೀಯಾ” ಎಂದು ಆಕೆಯ ಚಾರಿತ್ರ್ಯದ ಬಗ್ಗೆ ಇಲ್ಲಸಲ್ಲದ ಆರೋಪ (Telangana) ಮಾಡಿ ಅಸಭ್ಯವಾಗಿ ಬೈದಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ಸರಸ್ವತಿ ಶನಿವಾರ ಹೈದರಾಬಾದ್‌ಗೆ ವಾಪಸ್ ತೆರಳಿದ್ದಾಳೆ. Read this also : ಪ್ರೀತಿಯ ಹೆಸರಲ್ಲಿ ಯುವಕನ ಹುಚ್ಚಾಟ, ಕಿರುಕುಳ ತಾಳಲಾರದೆ 17 ವರ್ಷದ ಬಾಲಕಿ ಆತ್ಮ**ತ್ಯೆ…!
ಹಾಸ್ಟೆಲ್‌ನಲ್ಲೇ ನೇಣಿಗೆ ಶರಣಾದ ಸರಸ್ವತಿ
ಭಾನುವಾರ ಹೈದರಾಬಾದ್‌ನ (Telangana) ಮೀರ್‌ಪೇಟ್‌ನಲ್ಲಿರುವ ತನ್ನ ಹಾಸ್ಟೆಲ್ ರೂಮಿನಲ್ಲಿ ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಷಯ ತಿಳಿದು ಕುಟುಂಬಸ್ಥರು ದಿಕ್ಕು ತೋಚದಂತಾಗಿದ್ದಾರೆ. “ನನ್ನ ತಂಗಿ ಅಷ್ಟು ಹೇಡಿಯಲ್ಲ, ಅವಳ ಸಾವಿಗೆ ನಂದಕಿಶೋರ್ ಮಾತ್ರವಲ್ಲದೆ, ಆಕೆಯ ರೂಮ್‌ಮೇಟ್ ಕೂಡ ಕಾರಣ ಇರಬಹುದು” ಎಂದು ಸರಸ್ವತಿಯ ತಂಗಿ ಗಂಭೀರ ಆರೋಪ ಮಾಡಿದ್ದಾರೆ.

ನ್ಯಾಯಕ್ಕಾಗಿ ರಸ್ತೆಯಲ್ಲೇ ಶವವಿಟ್ಟು ಪ್ರತಿಭಟನೆ
ತಮ್ಮ ಮಗಳ ಸಾವಿಗೆ ಕಾರಣನಾದ ನಂದಕಿಶೋರ್‌ನನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ, ಸರಸ್ವತಿಯ ಪೋಷಕರು ಮತ್ತು ಸಂಬಂಧಿಕರು ಆತನ ಮನೆಯ ಮುಂದೆ ಶವವಿಟ್ಟು ಆಂದೋಲನ ನಡೆಸಿದರು. ಅಶ್ವಪುರಂನಲ್ಲಿ ಈ ಘಟನೆಯಿಂದಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. ಯುವತಿಯ ಸಾವಿಗೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ ಬಳಿಕ ಕುಟುಂಬಸ್ಥರು (Telangana) ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಗಮನಿಸಿ : ಪ್ರೀತಿ ಹೆಸರಿನಲ್ಲಿ ಮೋಸ ಮಾಡುವವರು ಮತ್ತು ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ. ನೋವಿದ್ದಾಗ ಆಪ್ತರೊಂದಿಗೆ ಹಂಚಿಕೊಳ್ಳಿ ಅಥವಾ ವೃತ್ತಿಪರ ಸಹಾಯ ಪಡೆಯಿರಿ.
