ಮನೆಯಲ್ಲಿ ಮಕ್ಕಳಿದ್ದರೆ ಆ ಸಂಭ್ರಮವೇ ಬೇರೆ. ಅದರಲ್ಲೂ ಆ ಮನೆಗೆ ಮತ್ತೊಂದು ಪುಟ್ಟ ಮಗುವಿನ (Newborn Baby) ಆಗಮನವಾಗುತ್ತಿದೆ ಎಂದರೆ, ಅಲ್ಲಿನ ಮೊದಲ ಮಗುವಿನ ಖುಷಿಗಂತೂ ಪಾರವೇ ಇರುವುದಿಲ್ಲ. ಅಮ್ಮ ಆಸ್ಪತ್ರೆಯಿಂದ ಪುಟ್ಟ ಪಾಪುವನ್ನು ಕರೆತರುವ ಕ್ಷಣಕ್ಕಾಗಿ ಮಕ್ಕಳು ಕಾತರದಿಂದ ಕಾಯುತ್ತಿರುತ್ತಾರೆ. ಸದ್ಯ ಅಂತಹದ್ದೇ ಒಂದು ಮನಸೆಳೆಯುವ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Video – ಅಮ್ಮನ ಬಳಿ ಪ್ರಶ್ನೆಗಳ ಸುರಿಮಳೆಗೈದ ಪುಟ್ಟ ಹುಡುಗ!
ಸಾಮಾನ್ಯವಾಗಿ ಅಣ್ಣಂದಿರಿಗೆ ತನ್ನ ತಂಗಿ ಅಥವಾ ತಮ್ಮನ ಮೇಲೆ ಎಲ್ಲಿಲ್ಲದ ಪ್ರೀತಿ. ಈ ವಿಡಿಯೋದಲ್ಲಿರುವ ಪುಟ್ಟ ಹುಡುಗ ಕೂಡ ತನ್ನ ನವಜಾತ ಸಹೋದರಿಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದಾನೆ. ಅಮ್ಮನ ಮಗ್ಗುಲಲ್ಲಿ ಮಲಗಿರುವ ಪುಟ್ಟ ಕಂದಮ್ಮನನ್ನು ನೋಡುತ್ತಿದ್ದಂತೆ ಈ ಪೋರನಿಗೆ ಆಶ್ಚರ್ಯವೋ ಆಶ್ಚರ್ಯ!
ಕ್ಯೂಟ್ ರಿಯಾಕ್ಷನ್ ನೀಡುತ್ತಲೇ ಅಮ್ಮನ ಬಳಿ ಸಾಲು ಸಾಲು ಪ್ರಶ್ನೆಗಳನ್ನು ಕೇಳಲು ಶುರು ಮಾಡಿದ್ದಾನೆ. ಅಮ್ಮ ಬೆಡ್ ಮೇಲೆ ಮಲಗಿರುವುದನ್ನು ಕಂಡು, “ಅಮ್ಮ ನೀನು ನೈಟ್ ಸೂಟ್ ಧರಿಸಿದ್ದೀಯಾ?” ಎಂದು ಮುಗ್ಧವಾಗಿ ಕೇಳಿದ್ದಾನೆ. ಅಷ್ಟಕ್ಕೇ ನಿಲ್ಲದ ಈತ, ಪಕ್ಕದಲ್ಲಿದ್ದ ಮಗುವನ್ನು ನೋಡಿ “ಇದು ನಿಜವಾದ ಮಗುವೇ ಅಥವಾ ಆಟಿಕೆಯೇ?” ಎಂದು ಕೇಳಿ ಎಲ್ಲರ ಮುಖದಲ್ಲಿ ನಗು ತರಿಸಿದ್ದಾನೆ.
“ನನ್ನ ತಂಗಿ ಎಷ್ಟು ಮುದ್ದಾಗಿದ್ದಾಳೆ!”
ಮಗು ನಿಜವಾದದ್ದು ಎಂದು ತಿಳಿದ ಮೇಲೆ ಆ ಪುಟ್ಟ ಹುಡುಗನ ಮುಖದಲ್ಲಿನ ಸಡಗರ ಅಷ್ಟಿಷ್ಟಲ್ಲ. “ಇದು ಗಂಡು ಮಗುವೋ ಅಥವಾ ಹೆಣ್ಣು ಮಗುವೋ?” ಎಂದು ವಿಚಾರಿಸಿದ್ದಾನೆ. ಹೆತ್ತವರು ಇದು “ಹೆಣ್ಣು ಮಗು” ಎಂದು ಹೇಳುತ್ತಿದ್ದಂತೆ, ತನ್ನ ಪುಟ್ಟ ತಂಗಿಯನ್ನು (Video) ನೋಡಿ ಆತ ಸಂಭ್ರಮಿಸಿದ ರೀತಿ ನೆಟ್ಟಿಗರ ಮನ ಗೆದ್ದಿದೆ. Read this also : ಬೋಳು ತಲೆಯನ್ನೇ ಮೀನು ಸಾಕುವ ತೊಟ್ಟಿ ಮಾಡಿದ ಕಿಲಾಡಿ ತಾತ: ವಿಡಿಯೋ ನೋಡಿ!
ವೈರಲ್ ವಿಡಿಯೋದ ಹಿಂದಿದೆ ಒಬ್ಬ ತಾಯಿಯ ತ್ಯಾಗ
ಈ ವಿಡಿಯೋವನ್ನು ರಿಚಾ ಅಗರ್ವಾಲ್ (Richa Agarwal) ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ (baniya2bengali) ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಅವರು ನೀಡಿರುವ ಶೀರ್ಷಿಕೆ ಎಲ್ಲರ ಗಮನ ಸೆಳೆಯುತ್ತಿದೆ. “ಒಬ್ಬ ತಾಯಿಯ ನೋವು ಅಗೋಚರವಾಗಿರುತ್ತದೆ. ಆಕೆಯ ತ್ಯಾಗವನ್ನು ಎಲ್ಲರೂ ಸಾಮಾನ್ಯ ಎಂಬಂತೆ (Video) ಪರಿಗಣಿಸುತ್ತಾರೆ” ಎಂದು ಬರೆಯುವ ಮೂಲಕ ತಾಯ್ತನದ ಮಹತ್ವವನ್ನು ಸಾರಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ : Click Here
ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?
ಈ ಹೃದಯಸ್ಪರ್ಶಿ ವಿಡಿಯೋ (Video) ಈಗಾಗಲೇ 12 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಸಾವಿರಾರು ಜನರು ಮೆಚ್ಚುಗೆ ಸೂಚಿಸಿದ್ದಾರೆ. ವಿಡಿಯೋ ನೋಡಿದ ಬಳಕೆದಾರರೊಬ್ಬರು, “ಈ ಹುಡುಗ ಅಮ್ಮನ ಬಗ್ಗೆ ಎಷ್ಟೊಂದು ಕಾಳಜಿ ವಹಿಸುತ್ತಿದ್ದಾನೆ, ಇವನು ಖಂಡಿತವಾಗಿಯೂ ಜೀವನದಲ್ಲಿ ಒಳ್ಳೆಯ ಮಗ ಮತ್ತು ಜವಾಬ್ದಾರಿಯುತ ಅಣ್ಣನಾಗುತ್ತಾನೆ” ಎಂದು ಕಾಮೆಂಟ್ ಮಾಡಿದ್ದಾರೆ.

Munde ಜೀವನದಲ್ಲಿ ಅತ್ಯುತ್ತಮ ಅಣ್ಣಾ ನಾಗುತಾನೆ