HomeStateLocal News : ತೆರಿಗೆ ಪಾವತಿಸದಿದ್ದರೆ ಸೌಲಭ್ಯ ಕಡಿತ; ಲೇಔಟ್ ಮಾಲೀಕರಿಗೆ ತಿರುಮಣಿ ಪಿಡಿಒ ಸೂಚನೆ…!

Local News : ತೆರಿಗೆ ಪಾವತಿಸದಿದ್ದರೆ ಸೌಲಭ್ಯ ಕಡಿತ; ಲೇಔಟ್ ಮಾಲೀಕರಿಗೆ ತಿರುಮಣಿ ಪಿಡಿಒ ಸೂಚನೆ…!

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಿರುಮಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಲೇಔಟ್‌ಗಳಲ್ಲಿ ನಿವೇಶನ ಹೊಂದಿರುವ ಮಾಲೀಕರು ಬಾಕಿ ಇರುವ ಆಸ್ತಿ ತೆರಿಗೆಯನ್ನು ಕೂಡಲೇ ಪಾವತಿಸಬೇಕು, (Local News) ತಪ್ಪಿದಲ್ಲಿ ಮೂಲಭೂತ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮೂರ್ತಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Gudibande Taluk Thirumani Gram Panchayat issues 15-day property tax payment warning to layout owners in Chikkaballapur district - Local News

Local News – 15 ದಿನಗಳ ಗಡುವು

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಲವು ಲೇಔಟ್‌ಗಳ ಮಾಲೀಕರು ಕಳೆದ ಹಲವು ವರ್ಷಗಳಿಂದ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವುದು ಪಂಚಾಯಿತಿಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಂದಾಯ ವಸೂಲಾತಿಗೆ ಮುಂದಾಗಿರುವ ಪಂಚಾಯಿತಿ ಆಡಳಿತವು, ತೆರಿಗೆ ಪಾವತಿದಾರರಿಗೆ 15 ದಿನಗಳ (Local News) ಕಾಲಮಿತಿ ನಿಗದಿಪಡಿಸಿದೆ.

ಸೌಲಭ್ಯಗಳಿಗೆ ಕತ್ತರಿ

ನಿಗದಿತ ಅವಧಿಯೊಳಗೆ ಕಂದಾಯ ಪಾವತಿಸದ ನಿವೇಶನದಾರರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮುಖ್ಯವಾಗಿ ಮನೆ ನಿರ್ಮಾಣಕ್ಕೆ ಅನುಮತಿ, ಕುಡಿಯುವ ನೀರಿನ ಸಂಪರ್ಕ ಹಾಗೂ ವಿದ್ಯುತ್ ಸಂಪರ್ಕಕ್ಕಾಗಿ ನೀಡಲಾಗುವ ನಿರಾಕ್ಷೇಪಣಾ ಪತ್ರಗಳನ್ನು ತಡೆಹಿಡಿಯಲಾಗುವುದು. ಅಲ್ಲದೆ, ಸರ್ಕಾರಿ ಕೆಲಸ ಕಾರ್ಯಗಳಿಗೆ ಅಗತ್ಯವಿರುವ ದಾಖಲೆಗಳನ್ನು ನೀಡಲು ಪಂಚಾಯಿತಿ ನಿರಾಕರಿಸಲಿದೆ ಎಂದು ಎಚ್ಚರಿಸಲಾಗಿದೆ.  Read this also : ಭಾರತದ ಶಿಲ್ಪಕಲಾ ಪರಂಪರೆಗೆ ಜಕಣಾಚಾರಿಯವರ ಕೊಡುಗೆ ಅಪಾರ : ಹರ್ಷ

Gudibande Taluk Thirumani Gram Panchayat issues 15-day property tax payment warning to layout owners in Chikkaballapur district - Local News

ಡಿಜಿಟಲ್ ಪಾವತಿಗೆ ಅವಕಾಶ

ತೆರಿಗೆ ಪಾವತಿಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ನಿವೇಶನದಾರರು ಮೊಬೈಲ್ ಮೂಲಕ ಫೋನ್-ಪೇ ಅಥವಾ ಇತರ ಆನ್‌ಲೈನ್ ಮಾದರಿಗಳಲ್ಲಿ ತೆರಿಗೆ ಪಾವತಿಸಬಹುದಾಗಿದೆ. ಇದರಿಂದ ಸಾರ್ವಜನಿಕರ ಸಮಯ ಮತ್ತು ಶ್ರಮ ಉಳಿತಾಯವಾಗಲಿದೆ ಎಂದು ಪಿಡಿಒ ಮಾಹಿತಿ ನೀಡಿದರು. ಗ್ರಾಮದ ಸಮಗ್ರ ಅಭಿವೃದ್ಧಿ ಹಾಗೂ ಮೂಲಭೂತ (Local News) ಸೌಕರ್ಯಗಳ ಒದಗಣೆಗಾಗಿ ಸಾರ್ವಜನಿಕರು ಮತ್ತು ಲೇಔಟ್ ಮಾಲೀಕರು ತೆರಿಗೆ ಪಾವತಿಸುವ ಮೂಲಕ ಸಹಕರಿಸಬೇಕು ಎಂದು ತಿರುಮಣಿ ಗ್ರಾಮ ಪಂಚಾಯಿತಿ ಈ ಮೂಲಕ ಮನವಿ ಮಾಡಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular