HomeNationalಮುಂಬೈನಲ್ಲಿ (Mumbai) ಬೆಚ್ಚಿಬೀಳಿಸುವ ಘಟನೆ: ಹೊಸ ವರ್ಷದ ಪಾರ್ಟಿಗೆ ಕರೆದು ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿದ...

ಮುಂಬೈನಲ್ಲಿ (Mumbai) ಬೆಚ್ಚಿಬೀಳಿಸುವ ಘಟನೆ: ಹೊಸ ವರ್ಷದ ಪಾರ್ಟಿಗೆ ಕರೆದು ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿದ ಯುವತಿ!

ಹೊಸ ವರ್ಷ ಅಂದರೇನೇ ಸಂಭ್ರಮ, ಸಡಗರ. ಎಲ್ಲರೂ ಪಾರ್ಟಿ, ಮೋಜು-ಮಸ್ತಿನಲ್ಲಿದ್ದರೆ ಮುಂಬೈನ ಸಾಂತಾಕ್ರೂಜ್‌ನಲ್ಲಿ ಮಾತ್ರ ಮೈ ನಡುಗಿಸುವಂತ ಘಟನೆಯೊಂದು ನಡೆದಿದೆ. ಮದುವೆಗೆ ನಿರಾಕರಿಸಿದ ಪ್ರಿಯಕರನ ಮೇಲೆ ಯುವತಿಯೊಬ್ಬಳು ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ಆತನ ಗುಪ್ತಾಂಗವನ್ನೇ ಕತ್ತರಿಸಿದ ಘಟನೆ ಇಡೀ (Mumbai) ನಗರವನ್ನೇ ಬೆಚ್ಚಿಬೀಳಿಸಿದೆ.

Mumbai Santacruz shocking incident where a woman attacked her lover after he refused to marry her

Mumbai – ಪಾರ್ಟಿಗೆಂದು ಕರೆದು ಮಾಡಿದ್ದೇನು?

ಮುಂಬೈನ ಈಸ್ಟ್ ಸಾಂತಾಕ್ರೂಜ್‌ನ ಕಲಿನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 42 ವರ್ಷದ ವ್ಯಕ್ತಿಗೆ 25 ವರ್ಷದ ಯುವತಿಯೊಂದಿಗೆ ಕಳೆದ ಏಳು ವರ್ಷಗಳಿಂದ ಪ್ರೇಮ ಸಂಬಂಧವಿತ್ತು. ಯುವತಿಗೆ ಕೇವಲ 19 ವರ್ಷವಿದ್ದಾಗಲೇ ಇವರಿಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು. ಹೊಸ ವರ್ಷದ ಸಂಭ್ರಮಾಚರಣೆಯ ನೆಪದಲ್ಲಿ ಯುವತಿ ತನ್ನ ಬಾಯ್‌ಫ್ರೆಂಡ್‌ನನ್ನು ತನ್ನ ಮನೆಗೆ ಆಹ್ವಾನಿಸಿದ್ದಾಳೆ. ತನ್ನ ಪ್ರೇಯಸಿಯ ಆಹ್ವಾನದ ಮೇರೆಗೆ ಯಾವುದನ್ನೂ ಯೋಚಿಸದ ಆತ ಖುಷಿಯಿಂದಲೇ ಮನೆಗೆ ಬಂದಿದ್ದಾನೆ. ಆದರೆ ಮುಂದೇನು ಕಾದಿದೆ ಎಂಬ ಸಣ್ಣ ಸುಳಿವು ಕೂಡ ಆತನಿಗಿರಲಿಲ್ಲ.

Mumbai – ಮದುವೆ ವಿಚಾರಕ್ಕೆ ಶುರುವಾದ ಜಗಳ

ಮನೆಗೆ ಬಂದ ವ್ಯಕ್ತಿಯ ಬಳಿ ಯುವತಿ ಮತ್ತೆ ಮದುವೆಯ ಪ್ರಸ್ತಾಪ ಇಟ್ಟಿದ್ದಾಳೆ. “ನಾವಿಬ್ಬರೂ ಹಲವು ವರ್ಷಗಳಿಂದ ಜೊತೆಯಲ್ಲಿದ್ದೇವೆ, ಈಗ ಮದುವೆಯಾಗೋಣ” ಎಂದು ಹಠ ಹಿಡಿದಿದ್ದಾಳೆ. ಆದರೆ ಆತ ಮಾತ್ರ ಎಂದಿನಂತೆ ಮದುವೆಗೆ ನಿರಾಕರಿಸಿದ್ದಾನೆ. ಇದರಿಂದ ತೀವ್ರ ಆಕ್ರೋಶಗೊಂಡ ಯುವತಿ, ತಾನು ಮೊದಲೇ ಸಿದ್ಧಪಡಿಸಿಕೊಂಡಿದ್ದ ಹರಿತವಾದ ಆಯುಧವನ್ನು ತೆಗೆದುಕೊಂಡು ಆತನ ಖಾಸಗಿ ಭಾಗದ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾಳೆ. Read this also : “ಬಾಯಿಗೆ ಉ**ಚ್ಚೆ ಹೊಯ್ತೀನಿ!” – ಮೀರತ್‌ನಲ್ಲಿ ಲಗಾಮಿಲ್ಲದ ಮಹಿಳಾ ಪೊಲೀಸ್ ದರ್ಪ, ವಿಡಿಯೋ (Video) ವೈರಲ್!

Mumbai Santacruz shocking incident where a woman attacked her lover after he refused to marry her

ಪರಾರಿಯಾದ ಯುವತಿ, ಆಸ್ಪತ್ರೆಗೆ ಸೇರಿದ ಸಂತ್ರಸ್ತ

ಹಲ್ಲೆಯಿಂದಾಗಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿದ್ದರೂ ಸಹ, ಆ ವ್ಯಕ್ತಿ ಹೇಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಹೊರಬಂದಿದ್ದಾನೆ. ಕೂಡಲೇ ತನ್ನ ಸಹೋದರನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಸಹೋದರ, ಗಾಯಾಳುವನ್ನು ಮುಂಬೈನ ವಿ.ಎನ್ ದೇಸಾಯಿ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಿದ್ದಾರೆ. ಸದ್ಯ ಆತನಿಗೆ ಚಿಕಿತ್ಸೆ ಮುಂದುವರಿದಿದೆ. ಘಟನೆ ನಡೆದ ನಂತರ ಆರೋಪಿ ಯುವತಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಇತ್ತ (Mumbai) ವಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಯುವತಿಗಾಗಿ ಬಲೆ ಬೀಸಿದ್ದಾರೆ.

ಪ್ರೀತಿಯಲ್ಲಿ ಇರಲಿ ಎಚ್ಚರ!

ಪ್ರೀತಿ-ಪ್ರೇಮದ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಹಿಂಸಾತ್ಮಕ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ (Mumbai) ಸಂಗತಿ. ಏಳು ವರ್ಷಗಳ ಸುದೀರ್ಘ ಸಂಬಂಧ ಈ ಮಟ್ಟದ ಕ್ರೌರ್ಯಕ್ಕೆ ಸಾಕ್ಷಿಯಾದದ್ದು ಮಾತ್ರ ದುರಂತವೇ ಸರಿ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular