ರಕ್ಷಣೆ ನೀಡಬೇಕಾದ ಕೈಗಳೇ ಭಕ್ಷಕನಾಗಿ ಬದಲಾದಾಗ ಸಮಾಜ ತಲೆತಗ್ಗಿಸುವಂತಾಗುತ್ತದೆ. ರಾಜಸ್ಥಾನದ ಧೌಲ್ಪುರ್ ಜಿಲ್ಲೆಯಲ್ಲಿ ಇಡೀ ಪೊಲೀಸ್ ಇಲಾಖೆಯೇ ನಾಚಿಕೆಯಿಂದ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಕೆಲಸ ಕೊಡಿಸುವ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದ ಪೊಲೀಸ್ ಕಾನ್ಸ್ಟೇಬಲ್ (Rajasthan Constable) ರಾಜೇಂದ್ರ ಸಿಸೋಡಿಯಾನನ್ನು ಕೊನೆಗೂ ಪೊಲೀಸರು ಕಂಬಿಯ ಹಿಂದೆ ತಳ್ಳಿದ್ದಾರೆ. ಆದರೆ ಈತನ ಬಂಧನದ ಕಥೆ ಯಾವುದೋ ಥ್ರಿಲ್ಲರ್ ಸಿನಿಮಾಗಿಂತ ಕಡಿಮೆಯಿಲ್ಲ!

Rajasthan Constable : ಏನಿದು ಆಘಾತಕಾರಿ ಅತ್ಯಾಚಾರ ಪ್ರಕರಣ?
ಈ ಘಟನೆ ನಡೆದಿರುವುದು ಡಿಸೆಂಬರ್ 15 ರಂದು. ರಾಜಸ್ಥಾನದ ಧೌಲ್ಪುರ್ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅಮಾನವೀಯ ಕೃತ್ಯ ನಡೆದಿತ್ತು. ಆರೋಪಿ ಬೇರೆ ಯಾರೂ ಅಲ್ಲ, ಸ್ವತಃ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದ ರಾಜೇಂದ್ರ. ಈ ವಿಷಯ ತಿಳಿಯುತ್ತಿದ್ದಂತೆ (Rajasthan Constable) ಸಾರ್ವಜನಿಕರ ಆಕ್ರೋಶ ಕಟ್ಟೆಯೊಡೆದಿತ್ತು.
ಉದ್ಯೋಗದ ಆಸೆ ತೋರಿಸಿ ಬಾಲಕಿಯನ್ನು ಬಲಿಪಶು ಮಾಡಿದ ಕಾನ್ಸ್ಟೇಬಲ್
ಧೌಲ್ಪುರ ಎಸ್ಪಿ ವಿಕಾಸ್ ಸಂಗ್ವಾನ್ ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ರಾಜೇಂದ್ರ ಮೊದಲು ಆಸ್ಪತ್ರೆಯಲ್ಲಿ ಸಂತ್ರಸ್ತೆಯ ತಂದೆಯನ್ನು ಭೇಟಿಯಾಗಿದ್ದ. ಬಾಲಕಿಯ ಕುಟುಂಬದ ಆರ್ಥಿಕ ಪರಿಸ್ಥಿತಿಯ ಲಾಭ ಪಡೆಯಲು ಸಂಚು ರೂಪಿಸಿದ್ದ ಈತ, ಆಕೆಗೆ ರೈಲ್ವೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. “ಪರೀಕ್ಷಾ ಫಾರ್ಮ್‌ಗಳನ್ನು ತುಂಬಬೇಕು, ಅಡ್ಮಿಟ್ ಕಾರ್ಡ್ ಕೊಡಬೇಕು” ಎಂದು ಹೇಳಿ ಬಾಲಕಿಯನ್ನು ತನ್ನ ಮನೆಗೆ ಬರುವಂತೆ ಪುಸಲಾಯಿಸಿದ್ದ.
ತಮ್ಮನನ್ನು ಮಾರುಕಟ್ಟೆಗೆ ಕಳುಹಿಸಿ ವಿಕೃತಿ ಮೆರೆದ ಆರೋಪಿ
ಡಿಸೆಂಬರ್ 15 ರಂದು ಬಾಲಕಿ ತನ್ನ ಚಿಕ್ಕ ತಮ್ಮನ ಜೊತೆಗೆ ಕಾನ್ಸ್ಟೇಬಲ್ ಮನೆಗೆ ಹೋಗಿದ್ದಳು. ಈ ವೇಳೆ ಪ್ಲಾನ್ ಮಾಡಿದ್ದ ಆರೋಪಿ, ಜೆರಾಕ್ಸ್ ಮಾಡಿಸುವ ನೆಪದಲ್ಲಿ ಬಾಲಕಿಯ ತಮ್ಮನನ್ನು ಮಾರುಕಟ್ಟೆಗೆ ಕಳುಹಿಸಿದ್ದಾನೆ. ಮನೆಯಲ್ಲಿ ಬಾಲಕಿ ಒಬ್ಬಳೇ ಇರುವುದನ್ನು ಗಮನಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. (Rajasthan Constable) ಕೃತ್ಯ ಎಸಗಿದ ಬಳಿಕ ಪೊಲೀಸರ ಕೈಗೆ ಸಿಗಬಾರದೆಂದು ಅಲ್ಲಿಂದ ಪರಾರಿಯಾಗಿದ್ದ. Read this also : ದೆಹಲಿಯಲ್ಲಿ ಟ್ರಾಫಿಕ್ ಪೊಲೀಸ್ ದರ್ಪ! ಕಾರಿನಲ್ಲಿದ್ದ ಚಾಲಕನಿಗೆ ಕಪಾಳಮೋಕ್ಷ; ವಿಡಿಯೋ ನೋಡಿ ನೆಟ್ಟಿಗರ ಆಕ್ರೋಶ…!
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಬುರ್ಖಾ ಮೊರೆ ಹೋದ ಕಿರಾತಕ!
ಘಟನೆ ನಡೆದ ನಂತರ ಆರೋಪಿ ತಲೆಮರೆಸಿಕೊಂಡಿದ್ದರಿಂದ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೆಚ್ಚಾಗಿತ್ತು. ತಕ್ಷಣವೇ ಆತನನ್ನು ಸೇವೆಯಿಂದ ವಜಾಗೊಳಿಸಲಾಯಿತು ಮತ್ತು ಈತನ ಸುಳಿವು ನೀಡಿದವರಿಗೆ 10,000 ರೂಪಾಯಿ ಬಹುಮಾನ ಘೋಷಿಸಲಾಯಿತು. ಆದರೆ, ಪೊಲೀಸರಿಗೆ ಚಳ್ಳೆಹಣ್ಣು (Rajasthan Constable) ತಿನ್ನಿಸಲು ಈ ಕಾನ್ಸ್ಟೇಬಲ್ ಮಾಡಿದ್ದ ಪ್ಲಾನ್ ಅಷ್ಟಿಷ್ಟಲ್ಲ.

ವೇಷ ಬದಲಿಸಿ ಬೇರೆ ಬೇರೆ ನಗರಗಳಲ್ಲಿ ಓಡಾಟ
ತನ್ನನ್ನು ಯಾರೂ ಗುರುತಿಸಬಾರದೆಂದು ಆರೋಪಿ ರಾಜೇಂದ್ರ ಆಗಾಗ ತನ್ನ ವೇಷವನ್ನು ಬದಲಿಸುತ್ತಿದ್ದ. ಆಗ್ರಾ, ಲಕ್ನೋ ಮತ್ತು ಗ್ವಾಲಿಯರ್‌ನಂತಹ ದೊಡ್ಡ ನಗರಗಳಲ್ಲಿ ಅಲೆದಾಡುತ್ತಿದ್ದ. ಕೆಲವು ಕಡೆ ಟ್ರ್ಯಾಕ್ ಸೂಟ್ ಧರಿಸಿ ತಾನೊಬ್ಬ ವಿಐಪಿ ಅಧಿಕಾರಿ ಎಂಬಂತೆ ಪೋಸ್ ನೀಡುತ್ತಿದ್ದ. ಇನ್ನು ಕೆಲವು ಕಡೆ ತಾನೊಬ್ಬ ಪೊಲೀಸ್ ಆಫೀಸರ್ ಎಂದು ಹೇಳಿಕೊಂಡು ಜನರ ಕಣ್ಣು ತಪ್ಪಿಸುತ್ತಿದ್ದ.
ಸಂಬಂಧಿಸಿದ ವಿಡಿಯೋ ಇಲ್ಲಿದೆ ನೋಡಿ : Click Here
ವೃಂದಾವನದಲ್ಲಿ ಬುರ್ಖಾ-ಲಿಪ್‌ಸ್ಟಿಕ್ ಧರಿಸಿ ಸಿಕ್ಕಿಬಿದ್ದಿದ್ದು ಹೇಗೆ?
ಪೊಲೀಸರ ತನಿಖಾ ತಂಡಕ್ಕೆ ಆರೋಪಿ ಉತ್ತರ ಪ್ರದೇಶದ ಬೃಂದಾವನದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಪೊಲೀಸರು (Rajasthan Constable)ಅಲ್ಲಿಗೆ ದಾಳಿ ಮಾಡಿದಾಗ ಅಚ್ಚರಿಯ ದೃಶ್ಯವೊಂದು ಎದುರಾಗಿತ್ತು. ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಕಾನ್ಸ್ಟೇಬಲ್ ಬುರ್ಖಾ ಧರಿಸಿದ್ದ, ಅಷ್ಟೇ ಅಲ್ಲದೆ ಗುರುತು ಸಿಗಬಾರದೆಂದು ತುಟಿಗೆ ಲಿಪ್‌ಸ್ಟಿಕ್ ಸಹ ಹಚ್ಚಿಕೊಂಡಿದ್ದ! ಒಬ್ಬ ಮಹಿಳೆಯಂತೆ ವೇಷ ಮರೆಸಿಕೊಂಡು ಓಡಾಡುತ್ತಿದ್ದ ಈತನನ್ನು ಪೊಲೀಸರು ಅಂತಿಮವಾಗಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
