“ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ” ಅನ್ನೋ ಗಾದೆ ಮಾತು ನೆನಪಿದೆ ಅಲ್ವಾ? ಪ್ರಾಣಿಗಳು ತಮ್ಮ ಪಾಡಿಗೆ ತಾವು ಸುಮ್ಮನಿದ್ದರೂ, ನಾವು ಸುಮ್ಮನೆ ಅವುಗಳನ್ನು ಕೆಣಕಲು ಹೋದರೆ ಏನಾಗುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಉತ್ತರ ಪ್ರದೇಶದಲ್ಲಿ ವೃದ್ಧರೊಬ್ಬರು ಸುಮ್ಮನೆ ಹೋಗುತ್ತಿದ್ದ ಎತ್ತಿಗೆ ಕಲ್ಲು ಹೊಡೆದು, ಈಗ ಆಸ್ಪತ್ರೆ ಪಾಲಾಗಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ (Viral Video) ವೈರಲ್ ಆಗ್ತಿದೆ.

Viral Video – ಘಟನೆ ನಡೆದಿದ್ದು ಎಲ್ಲಿ?
ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ (Bulandshahr) ಡಿಸೆಂಬರ್ 16, ಮಂಗಳವಾರದಂದು ಈ ಆಘಾತಕಾರಿ ಘಟನೆ ನಡೆದಿದೆ. ಇಲ್ಲಿನ ಬೀದಿಯೊಂದರಲ್ಲಿ ನಡೆದಿರೋ ಈ ಹೈಡ್ರಾಮಾ ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಸಲಿಗೆ ಅಲ್ಲಿ ಆಗಿದ್ದೇನು?
ವೈರಲ್ ಆಗಿರುವ ವಿಡಿಯೋದಲ್ಲಿ ಕಾಣುವಂತೆ, ಒಂದು ಎತ್ತು (Bull) ರಸ್ತೆಯಲ್ಲಿ ಪಾಪ ತನ್ನ ಪಾಡಿಗೆ ತಾನು ಶಾಂತವಾಗಿ ನಡೆದುಕೊಂಡು ಹೋಗುತ್ತಿರುತ್ತದೆ. ಅಷ್ಟರಲ್ಲಿ ಮನೆಯಿಂದ ಹೊರಬಂದ ವೃದ್ಧರೊಬ್ಬರು, ದಾರಿಯಲ್ಲಿ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ಆ ಎತ್ತಿನ ಕಡೆಗೆ ಜೋರಾಗಿ ಎಸೆಯುತ್ತಾರೆ. ತನಗೆ ಕಲ್ಲು ತಗುಲಿದ ತಕ್ಷಣ ಸಿಟ್ಟಿಗೆದ್ದ ಆ ಹೋರಿ, ಕ್ಷಣಾರ್ಧದಲ್ಲಿ ತಿರುಗಿ (Viral Video) ಬಿದ್ದು ಆ ವೃದ್ಧರನ್ನು ಅಟ್ಟಾಡಿಸಲು ಶುರು ಮಾಡಿದೆ. ವೃದ್ಧರು ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ, ಕೋಪಗೊಂಡ ಎತ್ತು ಅವರನ್ನು ಬಿಡದೆ ನೆಲಕ್ಕೆ ಕೆಡವಿ ದಾಳಿ ಮಾಡಿದೆ. Read this also : ಹಾವು ಮತ್ತು ಸಿಂಹದ ನಡುವೆ ಭೀಕರ ಕಾಳಗ: ವಿಷದ ನಾಗರಹಾವಿಗೆ ಬಲಿಯಾದ ‘ಸಮೃದ್ಧಿ’ ಸಿಂಹ!
ಸ್ಥಳೀಯರ ಸಮಯ ಪ್ರಜ್ಞೆ
ಎತ್ತು ವೃದ್ಧರ ಮೇಲೆ ದಾಳಿ ಮಾಡುವುದನ್ನು ಕಂಡ ತಕ್ಷಣ, ಅಕ್ಕಪಕ್ಕದ ಜನ ಓಡಿ ಬಂದು ಎತ್ತನ್ನು ಓಡಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾಳಿಗೊಳಗಾದ ವೃದ್ಧರನ್ನು ಮೇಘರಾಜ್ ಸಿಂಗ್ (Meghraj Singh) ಎಂದು ಗುರುತಿಸಲಾಗಿದ್ದು, ಸದ್ಯ ಅವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ (Viral Video) ಎಂದು ವರದಿಯಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ನೆಟ್ಟಿಗರು ಏನಂತಾರೆ?
ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಮಂದಿ ತರಹೇವಾರಿ ಕಮೆಂಟ್ಸ್ ಮಾಡ್ತಿದ್ದಾರೆ. “ಕರ್ಮ ಯಾರನ್ನೂ ಬಿಡಲ್ಲ”, “ಪಾಪದ ಪ್ರಾಣಿಗೆ ತೊಂದರೆ ಕೊಟ್ರೆ ಹೀಗೇ ಆಗೋದು” ಅಂತೆಲ್ಲಾ ಕಮೆಂಟ್ ಮಾಡುವ ಮೂಲಕ ಕೆಲವರು ಎತ್ತಿನ ಪರ ಮಾತನಾಡಿದರೆ, ಇನ್ನೂ ಕೆಲವರು ತಮಾಷೆಯಾಗಿ (Viral Video) ಪ್ರತಿಕ್ರಿಯಿಸುತ್ತಿದ್ದಾರೆ.
