ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ಫಾಲೋವರ್ಸ್ ಗಳಿಸಬೇಕು ಎನ್ನುವ ಹುಚ್ಚು ಯುವಜನತೆಯನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ನೋಡಿ. ಕೇವಲ ಒಂದು ಇನ್‌ಸ್ಟಾಗ್ರಾಮ್ ರೀಲ್ಸ್ (Instagram Reels) ಮಾಡುವುದಕ್ಕಾಗಿ ಕೇರಳದ ಇಬ್ಬರು ವಿದ್ಯಾರ್ಥಿಗಳು ಮಾಡಿದ ಕೆಲಸ ಈಗ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

Reel – ಘಟನೆ ನಡೆದದ್ದು ಹೇಗೆ?
ಕೇರಳದ ಕಣ್ಣೂರು ಜಿಲ್ಲೆಯ ತಲಶ್ಶೇರಿ ಮತ್ತು ಮಾಹೆ ನಡುವೆ ಈ ಘಟನೆ ನಡೆದಿದೆ. ಎರ್ನಾಕುಲಂನಿಂದ ಪುಣೆಗೆ ಹೊರಟಿದ್ದ ಎಕ್ಸ್‌ಪ್ರೆಸ್ ರೈಲು ಹಳಿಗಳ ಮೇಲೆ ವೇಗವಾಗಿ ಚಲಿಸುತ್ತಿತ್ತು. ಈ ವೇಳೆ ಇಬ್ಬರು ಪ್ಲಸ್ ಟೂ (ಪಿಯುಸಿ) ವಿದ್ಯಾರ್ಥಿಗಳು ರೈಲ್ವೆ ಹಳಿಗಳ ಬಳಿ ರೀಲ್ಸ್ ಚಿತ್ರೀಕರಿಸುತ್ತಿದ್ದರು. ವಿಡಿಯೋ ಇನ್ನಷ್ಟು ‘ಕ್ರೇಜಿ’ ಆಗಿರಲಿ ಎಂದು ಈ ಹುಡುಗರು ಚಲಿಸುತ್ತಿದ್ದ ರೈಲಿಗೆ ಕೆಂಪು ದೀಪ (Red Light) ತೋರಿಸಿದ್ದಾರೆ! Read this also : ಎರಡನೇ ಮದುವೆಗೆ ಅನುಮತಿ ಕೇಳಲು ಬಂದ ಪತಿಗೆ ಕೋರ್ಟ್ ಆವರಣದಲ್ಲೇ ಪತ್ನಿ, ಮಕ್ಕಳಿಂದ ‘ಧರ್ಮದೇಟು’!
ಗಾಬರಿಯಾದ ಲೋಕೋ ಪೈಲಟ್!
ರೈಲ್ವೆ ಸಂಕೇತಗಳ ಪ್ರಕಾರ ಕೆಂಪು ದೀಪವೆಂದರೆ ಅದು ‘ಅಪಾಯ’ದ ಸಂಕೇತ. ಹಳಿಗಳ ಮೇಲೆ ಯಾರೋ ಕೆಂಪು ದೀಪ ತೋರಿಸುತ್ತಿರುವುದನ್ನು ಕಂಡ ರೈಲ್ವೆ ಚಾಲಕ (Loco Pilot), ಮುಂದೆ ಯಾವುದೋ ದೊಡ್ಡ ಅನಾಹುತ ಕಾಯುತ್ತಿದೆ ಎಂದು ಭಾವಿಸಿ ತಕ್ಷಣವೇ ಎಮರ್ಜೆನ್ಸಿ ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ. ರೈಲು ನಿಂತ ಮೇಲೆ ವಿಷಯ ತಿಳಿದ ಚಾಲಕ ಮತ್ತು ಪ್ರಯಾಣಿಕರು ಅಕ್ಷರಶಃ ಶಾಕ್ ಆಗಿದ್ದಾರೆ. (Reel) ಅಲ್ಲಿ ಯಾವುದೇ ಅಪಾಯವಿರಲಿಲ್ಲ, ಬದಲಾಗಿ ಇಬ್ಬರು ಹುಡುಗರು ಕೇವಲ ವಿಡಿಯೋ ಮಾಡಲು ಇಂತಹ ಸಾಹಸಕ್ಕೆ ಕೈಹಾಕಿದ್ದರು!
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಪೊಲೀಸರ ಅತಿಥಿಯಾದ ‘ರೀಲ್ಸ್ ಸ್ಟಾರ್ಸ್’
ಘಟನೆಯ ಬಗ್ಗೆ ಲೋಕೋ ಪೈಲಟ್ ತಕ್ಷಣವೇ ಆರ್‌ಪಿಎಫ್ (RPF) ಮತ್ತು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು (Reel) ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಅವರ ಬಳಿಯಿದ್ದ ಮೊಬೈಲ್ ಮತ್ತು ಚಿತ್ರೀಕರಿಸಿದ್ದ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯಕ್ಕೆ ವಿದ್ಯಾರ್ಥಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆಯಾದರೂ, ರೈಲ್ವೆ ಸಂಚಾರಕ್ಕೆ ಅಡ್ಡಿಪಡಿಸಿದ ಮತ್ತು ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ತನಿಖೆ ಮುಂದುವರಿದಿದೆ.

