ಪ್ರೀತಿ ಎಂಬ ಎರಡಕ್ಷರದ ಸೆಳೆತಕ್ಕೆ ಸಿಲುಕಿ ಮನೆ ಬಿಟ್ಟು ಹೋಗುವ ಮಕ್ಕಳ ನಿರ್ಧಾರ ಪೋಷಕರ ಪಾಲಿಗೆ ಎಷ್ಟೊಂದು ನೋವು ತರುತ್ತದೆ ಎಂಬುದು ಈ ಘಟನೆಯನ್ನು ನೋಡಿದರೆ ಅರ್ಥವಾಗುತ್ತದೆ. ತನ್ನ ಆಸೆಗಾಗಿ ಮನೆಯವರನ್ನು ಬಿಟ್ಟು ಹೋದ ಮಗಳನ್ನೇ ‘ನಮ್ಮ ಪಾಲಿಗೆ ಇವಳು ಸತ್ತಿದ್ದಾಳೆ’ ಎಂದು ಘೋಷಿಸಿದ ಪೋಷಕರು, ಆಕೆಯ ಪ್ರತಿಕೃತಿಯನ್ನು ತಯಾರಿಸಿ ಊರೆಲ್ಲಾ ಮೆರವಣಿಗೆ ಮಾಡಿ ಅಂತ್ಯಸಂಸ್ಕಾರ ಮಾಡಿದ ಆಘಾತಕಾರಿ (Viral News) ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ.

Viral News – ಏನಿದು ಅಸಲಿ ಘಟನೆ?
ವಿದಿಶಾದ ಛುನಾ ವಾಲಿಗಾಲಿ ಎಂಬ ಪ್ರದೇಶದ ನಿವಾಸಿಯಾದ 23 ವರ್ಷದ ಯುವತಿ ಕವಿತಾ ಕುಶ್ವಾಹ್, ಕಳೆದ ಕೆಲ ದಿನಗಳ ಹಿಂದೆ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಮಗಳು ಕಾಣುತ್ತಿಲ್ಲ ಎಂದು ಗಾಬರಿಗೊಂಡ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದರು. ಕೊನೆಗೆ ಪೊಲೀಸರ ಮೊರೆ ಹೋದ ನಂತರ ತಿಳಿದ ಅಸಲಿ ಸತ್ಯವೇನೆಂದರೆ, ಮಗಳು ತಾನು ಪ್ರೀತಿಸಿದ ಹುಡುಗನ ಜೊತೆ ಓಡಿ ಹೋಗಿ ರಹಸ್ಯವಾಗಿ ಮದುವೆಯಾಗಿದ್ದಾಳೆ ಎಂಬುದು.
ಅವಮಾನ ತಡೆಯಲಾರದೆ ‘ನಕಲಿ ಶವಯಾತ್ರೆ’!
ಮಗಳ ಈ ನಿರ್ಧಾರದಿಂದ ಇಡೀ ಕುಟುಂಬ ಸಮಾಜದಲ್ಲಿ ತಲೆ ತಗ್ಗಿಸುವಂತಾಯಿತು. ಮನೆಯಿಂದ ಹೊರಗೆ ಬರಲಾಗದಷ್ಟು ಮುಜುಗರ ಅನುಭವಿಸಿದ ಕುಶ್ವಾಹ್ ಕುಟುಂಬದವರು, ಅಂತಿಮವಾಗಿ ಒಂದು ಕಠಿಣ ನಿರ್ಧಾರಕ್ಕೆ ಬಂದರು. ತಮ್ಮ ಮಗಳು ಸತ್ತಿದ್ದಾಳೆ ಎಂದು ಭಾವಿಸಿ ಆಕೆಗೆ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದರು. Read this also : ಅಪ್ಪನಿಗೆ ಹೆದರಿ 8ನೇ ಮಹಡಿಯಿಂದ ಹಾರಿದ ಯುವತಿ: ಹೈದರಾಬಾದ್ ನಲ್ಲಿ ನಡೆದ ಭೀಕರ ದುರಂತ!
ಈ ವಿಚಿತ್ರ ಅಂತ್ಯಸಂಸ್ಕಾರ ನಡೆದದ್ದು ಹೀಗೆ:
- ಗೋಧಿ ಹಿಟ್ಟಿನ ಪ್ರತಿಕೃತಿ: ಮಗಳ ಪ್ರತಿಕೃತಿಯನ್ನು ಗೋಧಿ ಹಿಟ್ಟಿನಿಂದ ತಯಾರಿಸಲಾಯಿತು.
- ಬಿದಿರಿನ ಚಟ್ಟ: ಸತ್ತವರನ್ನು (Viral News) ಕೊಂಡೊಯ್ಯುವ ರೀತಿಯಲ್ಲೇ ಬಿದಿರಿನ ಚಟ್ಟವನ್ನು ಸಿದ್ಧಪಡಿಸಿ, ಅದರ ಮೇಲೆ ಪ್ರತಿಕೃತಿಯನ್ನು ಇಡಲಾಯಿತು.
- ವಾದ್ಯ-ಗೋಷ್ಠಿ: ನಗರದ ಪ್ರಮುಖ ರಸ್ತೆಗಳಲ್ಲಿ ವಾದ್ಯ ಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಿ, ಮಗಳ ಶವಯಾತ್ರೆಯನ್ನು ನಾಟಕೀಯವಾಗಿ ನಡೆಸಲಾಯಿತು.
- ಚಿತೆಗೇರಿಸಿದ ಪೋಷಕರು: ಸ್ಮಶಾನಕ್ಕೆ ಕೊಂಡೊಯ್ದು ಸಕಲ ವಿಧಿವಿಧಾನಗಳೊಂದಿಗೆ ಆ ಪ್ರತಿಕೃತಿಗೆ ಬೆಂಕಿ ಹಚ್ಚಿ ಅಂತ್ಯಸಂಸ್ಕಾರ ಪೂರೈಸಿದರು.
“ನಮ್ಮ ಕನಸುಗಳು ಧ್ವಂಸವಾದವು” – ಸೋದರನ ಅಳಲು
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕವಿತಾಳ ಸಹೋದರ ರಾಜೇಶ್ ಕುಶ್ವಾಹ್, “ನಾವು ಆಕೆಯನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದೆವು. ಅವಳು ಸುಶಿಕ್ಷಿತಳು, ಅವಳ ಎಲ್ಲಾ ಆಸೆಗಳನ್ನು ನಾವು ಈಡೇರಿಸಿದ್ದೆವು. ಆದರೆ ಅವಳು ಇಡೀ ಕುಟುಂಬದ ಕನಸುಗಳನ್ನು ನುಚ್ಚುನೂರು ಮಾಡಿದಳು. ಹಾಗಾಗಿ ಅವಳ ಮೇಲಿನ ಆಸೆಯನ್ನು ಬಿಡಲು ನಾವು ಈ ರೀತಿ ಮಾಡಿದ್ದೇವೆ” ಎಂದು ಭಾವುಕರಾಗಿ ನುಡಿದರು. ತಂದೆ ರಂಬಾಬು ಕುಶ್ವಾಹ್ ಕೂಡ ಕಣ್ಣೀರು ಹಾಕುತ್ತಾ, “ಇದು ನಮ್ಮ ಜೀವನದ ಅತ್ಯಂತ ನೋವಿನ ಕ್ಷಣ” ಎಂದು ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ವಿಡಿಯೋ ಇಲ್ಲಿದೆ ನೋಡಿ : Click Here
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ಕಿಡಿ
ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral News) ಆಗುತ್ತಿವೆ. ನೆಟ್ಟಿಗರು ಈ ಬಗ್ಗೆ ಪರ-ವಿರೋಧ ಚರ್ಚೆಗಳನ್ನು ನಡೆಸುತ್ತಿದ್ದಾರೆ. “ಪೋಷಕರ ನೋವು ನ್ಯಾಯಯುತವಾಗಿದೆ” ಎಂದು ಕೆಲವರು ಹೇಳುತ್ತಿದ್ದರೆ, “ಇಷ್ಟು ಕಠಿಣ ನಿರ್ಧಾರ ಬೇಕಿತ್ತಾ?” ಎಂದು ಇನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ.

