ಸಾಮಾನ್ಯವಾಗಿ ಅನೈತಿಕ ಸಂಬಂಧ ಅಥವಾ ಅಕ್ರಮ ಸಂಬಂಧಗಳ (Illicit Relationship) ಕರಾಳ ಮುಖಗಳು ಹೇಗೆ ಇರುತ್ತವೆ ಅಂದ್ರೆ, ಗಂಡನ ಕೈಗೆ ಸಿಕ್ಕಿಬಿದ್ದು ಪ್ರಿಯಕರ ಒದೆ ತಿನ್ನುವುದು ಅಥವಾ ಸಂಬಂಧ ಬೇಡ ಅಂದಿದ್ದಕ್ಕೆ ಪ್ರಿಯಕರನೇ ಪ್ರಿಯತಮೆಯ ಮೇಲೆ ಹಲ್ಲೆ ಮಾಡುವುದು. ಆದರೆ, ಇಲ್ಲೊಂದು ಕಡೆ ಸೀನ್ ಉಲ್ಟಾ ಆಗಿದೆ!

“ನನಗೆ ನೀನು ಬೇಡ, ನಿನ್ನ ಸಹವಾಸವೂ ಬೇಡ” ಎಂದು ಅನೈತಿಕ ಸಂಬಂಧಕ್ಕೆ ಫುಲ್ ಸ್ಟಾಪ್ ಇಟ್ಟ ಯುವಕನ ಮೇಲೆ ಮಹಿಳೆಯೇ ರೌಡಿಗಳ ಗ್ಯಾಂಗ್ ಕಟ್ಟಿಕೊಂಡು ಬಂದು ದಾಳಿ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ನಡೆದಿದೆ. ತಡವಾಗಿ ಬೆಳಕಿಗೆ ಬಂದಿರುವ ಈ ಘಟನೆ ಈಗ ಊರೆಲ್ಲಾ ಚರ್ಚೆಯಾಗುತ್ತಿದೆ.
Illicit Relationship – ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
ಕಾರ್ತಿಕ್ ಎಂಬ ಯುವಕ ಹಾಗೂ ದೀಪಾ ಎಂಬ ಮಹಿಳೆಯ ನಡುವೆ ಕಳೆದ ಕೆಲವು ಸಮಯದಿಂದ ಅನೈತಿಕ ಸಂಬಂಧವಿತ್ತು. ಆದರೆ ದಿನ ಕಳೆದಂತೆ, ಮನೆಯವರ ಮತ್ತು ಹಿರಿಯರ ಬುದ್ಧಿವಾದ ಕೇಳಿದ ಕಾರ್ತಿಕ್, ಬದಲಾಗಲು ನಿರ್ಧರಿಸಿದ್ದ. “ಇನ್ನು ಮುಂದೆ ಈ ಅಕ್ರಮ ಸಂಬಂಧ ಬೇಡವೇ ಬೇಡ” ಎಂದು ತೀರ್ಮಾನಿಸಿ, ದೀಪಾಳ ಸಹವಾಸದಿಂದ ಸಂಪೂರ್ಣವಾಗಿ ದೂರವಿದ್ದ. ಆದರೆ, ಕಾರ್ತಿಕ್ ತನ್ನಿಂದ ದೂರವಾಗುತ್ತಿರುವುದನ್ನು ದೀಪಾಳಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಆಕ್ರೋಶಗೊಂಡ ಆಕೆ, ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದಳು.
ಸಿನಿಮಾ ಸ್ಟೈಲ್‌ನಲ್ಲಿ ಸ್ಕೆಚ್!
ಡಿಸೆಂಬರ್ 13ರಂದು ಮುಸ್ಸಂಜೆ ಕಾರ್ತಿಕ್ ಅಂಗಡಿಯೊಂದರ ಬಳಿ ನಿಂತಿದ್ದ. ಇದೇ ಸಮಯಕ್ಕಾಗಿ ಕಾಯುತ್ತಿದ್ದ ದೀಪಾ, ಒಂದು ಕಾರಿನಲ್ಲಿ ರೌಡಿಗಳ ಗ್ಯಾಂಗ್ (Gang Attack) ಕಟ್ಟಿಕೊಂಡು ಅಲ್ಲಿಗೆ ಎಂಟ್ರಿ ಕೊಟ್ಟಿದ್ದಳು. ದೀಪಾ ಕಾರಿನಲ್ಲೇ ಕುಳಿತಿದ್ದರೆ, ಆಕೆಯ ಸುಪಾರಿ ಪಡೆದಿದ್ದ ರೌಡಿಗಳು ಲಾಂಗ್ ಮತ್ತು ಮಚ್ಚುಗಳನ್ನು ಹಿಡಿದು ಕಾರ್ತಿಕ್ ಮೇಲೆ (Illicit Relationship) ಮುಗಿಬಿದ್ದಿದ್ದಾರೆ.
ಸಾರ್ವಜನಿಕರೇ ರಿಯಲ್ ಹೀರೋಗಳು
ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುತ್ತಿದ್ದನ್ನು ಕಂಡ ಸ್ಥಳೀಯರು ಸುಮ್ಮನೆ ನಿಲ್ಲಲಿಲ್ಲ. ತಕ್ಷಣವೇ ಗ್ಯಾಂಗ್ ವಿರುದ್ಧ ತಿರುಗಿಬಿದ್ದಿದ್ದಾರೆ. ಜನರ ಆಕ್ರೋಶಕ್ಕೆ ಹೆದರಿದ ದೀಪಾ ಮತ್ತು ಆಕೆಯ ಗ್ಯಾಂಗ್, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಅದೃಷ್ಟವಶಾತ್ ಕಾರ್ತಿಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. Read this also : ಮಕ್ಕಳಿಗಾಗಿ ಅಂದು ಕ್ಷಮಿಸಿದ್ದ, ಇಂದು ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಪತ್ನಿ : 15 ವರ್ಷದ ಸಂಸಾರ ಧೂಳಿಪಟ…!

ದೀಪಾ ಆ್ಯಂಡ್ ಗ್ಯಾಂಗ್ ಅಂದರ್
ಘಟನೆಗೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ (Illicit Relationship) ದೂರು ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಹಲ್ಲೆಗೆ ಸ್ಕೆಚ್ ಹಾಕಿ ಎಸ್ಕೇಪ್ ಆಗಿದ್ದ ದೀಪಾ ಹಾಗೂ ಆಕೆಯ ಇಬ್ಬರು ಸಹಚರರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಕೃತ್ಯದಲ್ಲಿ ಇನ್ಯಾರೆಲ್ಲಾ ಶಾಮೀಲಾಗಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
