ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರತದ ಬಗ್ಗೆ ಏನೇನೋ ಚರ್ಚೆಗಳಾಗುತ್ತವೆ. ಕೆಲವೊಮ್ಮೆ ನೆಗೆಟಿವ್ ಸುದ್ದಿಗಳೇ ಹೆಚ್ಚಾಗಿ ಕಾಣಿಸುತ್ತವೆ. ಆದರೆ, ವಾಸ್ತವದಲ್ಲಿ ಭಾರತೀಯರ ಪ್ರೀತಿ, ಆತಿಥ್ಯ ಮತ್ತು ಸಂಸ್ಕಾರ ಹೇಗಿರುತ್ತೆ ಅನ್ನೋದಕ್ಕೆ ಇಲ್ಲೊಂದು ಬೆಸ್ಟ್ ಉದಾಹರಣೆ ಸಿಕ್ಕಿದೆ. ಅಮೆರಿಕ ಮೂಲದ (American Woman) ಮಹಿಳೆಯೊಬ್ಬರು ಭಾರತೀಯರ ಪ್ರೀತಿಗೆ ಕರಗಿ ಹೋಗಿದ್ದು, ಕಣ್ಣೀರು ಹಾಕುತ್ತಲೇ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಇಲ್ಲಿದೆ ಪೂರ್ತಿ ವಿವರ.

American Woman – ಗುಜರಾತ್‌ನಲ್ಲಿ ನಡೆದ ಹೃದಯಸ್ಪರ್ಶಿ ಘಟನೆ
ಅಮೆರಿಕದಲ್ಲಿ ಹುಟ್ಟಿ ಬೆಳೆದ ಟಾನ್ಯಾ ಸಂಘಾನಿ (Tanya Sanghani) ಪ್ರಸ್ತುತ ಭಾರತ ಪ್ರವಾಸದಲ್ಲಿದ್ದಾರೆ. ಇವರು ಗುಜರಾತ್‌ನ ಮಧುಬನ್ ರೆಸಾರ್ಟ್ ಮತ್ತು ಸ್ಪಾದಲ್ಲಿ (Madhuban Resort and Spa) ಉಳಿದುಕೊಂಡಿದ್ದರು. ಸಾಮಾನ್ಯವಾಗಿ ಹೋಟೆಲ್ ಅಂದಮೇಲೆ ಅಲ್ಲಿನ ಸಿಬ್ಬಂದಿ ಬಂದು ಕೆಲಸ ಮುಗಿಸಿ ಹೋಗುತ್ತಾರೆ. ಆದರೆ, ಟಾನ್ಯಾ ಅವರಿಗೆ ಅಲ್ಲಿ ಸಿಕ್ಕಿದ್ದು ಬರೀ ಸೇವೆಯಲ್ಲ, ಮನೆಯವರಂತಹ ಪ್ರೀತಿ. ಪ್ರವಾಸದ ಸಮಯದಲ್ಲಿ ಟಾನ್ಯಾ ಅವರ ಆರೋಗ್ಯ ಹದಗೆಟ್ಟಿತ್ತು. ಈ ಸಮಯದಲ್ಲಿ ಹೋಟೆಲ್ ಸಿಬ್ಬಂದಿ ಸುಮ್ಮನೆ ಕೂರಲಿಲ್ಲ. ಕೇವಲ ರೂಮ್ ಸರ್ವಿಸ್ ಮಾಡದೆ, ಟಾನ್ಯಾ ಅವರ ಚೇತರಿಕೆಗೆ ಬೇಕಾದ ಎಲ್ಲಾ ಸಹಾಯವನ್ನೂ ಮಾಡಿದ್ದಾರೆ.
American Woman – ವಿಡಿಯೋದಲ್ಲಿ ಟಾನ್ಯಾ ಕಣ್ಣೀರು ಹಾಕುತ್ತಾ ಹೀಗೆ ಹೇಳಿದ್ದಾರೆ
ಈ ಬಗ್ಗೆ ಟಾನ್ಯಾ ಒಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ “ಭಾರತದಲ್ಲಿನ ಸೇವೆಯ ಹಿಂದಿರೋ ಸತ್ಯ” (The truth about the service in India) ಎಂದು ಕ್ಯಾಪ್ಷನ್ ನೀಡಿದ್ದಾರೆ.
“ನಾನೀಗ ಭಾರತದ ಹೋಟೆಲ್ ಒಂದರಲ್ಲಿದ್ದೇನೆ. ನಂಬಿ, ನಾನೀಗ ನನ್ನ ಕೈಯಲ್ಲಿರುವ ಸ್ಪೂನ್ ಮತ್ತು ಫೋರ್ಕ್ ನೋಡಿ ಅಳುತ್ತಿದ್ದೇನೆ. ಯಾಕಂದ್ರೆ ರೂಮ್ ಸರ್ವಿಸ್ ಹುಡುಗ ಅಷ್ಟು ಪ್ರೀತಿಯಿಂದ ಇದನ್ನು ನನಗೆ ತಲುಪಿಸಿದ. ನನಗೆ ತುಂಬಾ ಹುಷಾರಿರಲಿಲ್ಲ. ಆಗ ಹೋಟೆಲ್ ಸಿಬ್ಬಂದಿಯೊಬ್ಬರು ನನಗೋಸ್ಕರ ಗಾಡಿ ಓಡಿಸಿಕೊಂಡು ಹೋಗಿ ಔಷಧಿ (Medicine) ತಂದುಕೊಟ್ಟರು. ಭಾರತೀಯರು ನಿಜಕ್ಕೂ ತುಂಬಾ ಒಳ್ಳೆಯವರು (Indians are so nice).” Read this also : ಬೇಟೆಯಾಡಲು ಬಂದ ಚಿರತೆಗೇ ‘ನೀರು ಕುಡಿಸಿದ’ ಶ್ವಾನ! ಸಿಸಿಟಿವಿಯಲ್ಲಿ ಸೆರೆಯಾಯ್ತು ರೋಚಕ ದೃಶ್ಯ..!

American Woman – ನೆಟ್ಟಿಗರ ಮೆಚ್ಚುಗೆಯ ಮಹಾಪೂರ
ಈ ವಿಡಿಯೋ ಈಗ ‘ಎಕ್ಸ್’ (ಹಿಂದಿನ ಟ್ವಿಟರ್) ನಲ್ಲಿ ವೈರಲ್ ಆಗಿದ್ದು, ಸಾವಿರಾರು ಜನ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬರು ಕಮೆಂಟ್ ಮಾಡಿ, “ಭಾರತದ ನಿಜವಾದ ಗುರುತು ಇರುವುದೇ ಇಲ್ಲಿನ ಜನರ ನಡವಳಿಕೆಯಲ್ಲಿ. ಯಾವುದೇ ಸ್ವಾರ್ಥವಿಲ್ಲದೆ, ಕಾಯಿಲೆ ಬಿದ್ದವರಿಗೆ ಸಹಾಯ ಮಾಡುವುದೇ ನಿಜವಾದ ಮಾನವೀಯತೆ,” ಎಂದು ಬರೆದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಮತ್ತೊಬ್ಬರು, “ಇದು ಹೋಟೆಲ್ ಮ್ಯಾನೇಜ್‌ಮೆಂಟ್‌ನ ಒಳ್ಳೆಯ ನಿರ್ಧಾರ. ಇನ್ನೂ ಒಳ್ಳೆಯ ಮನುಷ್ಯರು ಭೂಮಿಯ ಮೇಲಿದ್ದಾರೆ,” ಎಂದು ಹೇಳಿದರೆ, ಇನ್ನೊಬ್ಬರು “ನೀವು ಹಳ್ಳಿ ಕಡೆಗೆ ಹೋದಷ್ಟು ಜನ ಇನ್ನೂ ಹೆಚ್ಚು ಸಹಾಯ ಮಾಡುತ್ತಾರೆ, ಭಾರತೀಯರು ಯಾವಾಗಲೂ ಹೀಗೆ,” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
