ಸೋಷಿಯಲ್ ಮೀಡಿಯಾದಲ್ಲಿ (Social Media) ನಾವು ದಿನನಿತ್ಯ ನೂರಾರು ವಿಡಿಯೋಗಳನ್ನು ನೋಡುತ್ತೇವೆ. ಅದರಲ್ಲಿ ಹೆಚ್ಚಿನವು ಕೃತಕವಾಗಿ ಅಥವಾ ಕೇವಲ ಲೈಕ್ಸ್‌ಗಾಗಿ ಮಾಡಿದಂತಿರುತ್ತವೆ. ಆದರೆ, ಅಪರೂಪಕ್ಕೊಮ್ಮೆ ಕೆಲವು ವಿಡಿಯೋಗಳು ನಮ್ಮ ಕಣ್ಣಂಚಲ್ಲಿ ನೀರು ತರಿಸುತ್ತವೆ, ಮನಸ್ಸಿಗೆ ಹಿತವೆನಿಸುತ್ತವೆ. ಯಾವುದೇ ಆಡಂಬರವಿಲ್ಲದ, ಕೇವಲ ಪರಿಶುದ್ಧ ಪ್ರೀತಿಯನ್ನು ತೋರಿಸುವ ವಿಡಿಯೋವೊಂದು (Viral Video) ಇದೀಗ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ.

Viral Video – ಏನಿದು ಘಟನೆ?
ಇದು ರೈಲ್ವೆ ಸ್ಟೇಷನ್‌ವೊಂದರಲ್ಲಿ ನಡೆದ ದೃಶ್ಯ. ವಯಸ್ಸಾದ ದಂಪತಿಗಳಿಬ್ಬರ ನಡುವಿನ ಮೌನ ಪ್ರೇಮದ ಕಥೆ. ಜಾಗೃತಿ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಜಾಗೃತಿ ಅವರ ತಾಯಿ ಮೊದಲ ಬಾರಿಗೆ ಒಂಟಿಯಾಗಿ ಪ್ರಯಾಣಿಸುತ್ತಿದ್ದಾರೆ. ಅವರು ಬೆಂಗಳೂರಿನಲ್ಲಿರುವ (Bangalore) ತಮ್ಮ ಮಗನ ಮನೆಗೆ ಹೋಗುತ್ತಿದ್ದಾರೆ. ತನ್ನ ಮಗನನ್ನು ನೋಡುವ ಉತ್ಸಾಹ ಒಂದೆಡೆಯಾದರೆ, ಮನೆಯನ್ನು ಮತ್ತು ಗಂಡನನ್ನು ಬಿಟ್ಟು ಹೋಗುವ ಸಣ್ಣ ಬೇಸರ ಆ ತಾಯಿಯ ಮುಖದಲ್ಲಿ ಎದ್ದು ಕಾಣುತ್ತಿದೆ. ಆದರೆ ಇಲ್ಲಿ ಎಲ್ಲರ ಗಮನ ಸೆಳೆದಿದ್ದು ಆ ತಂದೆಯ ವರ್ತನೆ.
ಮಾತಿಗಿಂತ ಮೌನವೇ ಶ್ರೇಷ್ಠ!
ವಿಡಿಯೋದಲ್ಲಿ ಜಾಗೃತಿ ಕ್ಯಾಮೆರಾವನ್ನು ತಮ್ಮ ತಂದೆಯ ಕಡೆ ತಿರುಗಿಸಿ, ತಮಾಷೆಯಾಗಿ ಪ್ರಶ್ನೆ ಕೇಳುತ್ತಾರೆ. “ಅಮ್ಮ ಇಲ್ಲದೆ ನೀವು ಮನೆಯಲ್ಲಿ ಹೇಗಿರ್ತೀರಾ? ಅಮ್ಮನ ನೆನಪಾಗಲ್ವಾ?” ಎಂದು ಕೇಳುತ್ತಾರೆ. ಆದರೆ, ಆ ತಂದೆಯ ಕಡೆಯಿಂದ ಯಾವುದೇ ಉತ್ತರ ಬರುವುದಿಲ್ಲ. ನಗುವಿಲ್ಲ, ಜೋಕ್ಸ್ ಇಲ್ಲ, ಯಾವುದೇ ನಾಟಕೀಯ ಮಾತುಗಳಿಲ್ಲ. ಕೇವಲ ಒಂದು ಆಳವಾದ ಮೌನ. ಆ ಮೌನದಲ್ಲೇ ಸಾವಿರ ಅರ್ಥಗಳಿದ್ದವು. ಪ್ಲಾಟ್‌ಫಾರ್ಮ್‌ಗೆ ಬಂದಾಗಿನಿಂದ ರೈಲು ಹತ್ತುವವರೆಗೂ ಅವರು ತಮ್ಮ ಹೆಂಡತಿಯ ಕೈಯನ್ನು ಬಿಡುವುದೇ ಇಲ್ಲ. ಅವರ ಕಣ್ಣುಗಳಲ್ಲಿ ಹೆಂಡತಿಯ ಬಗ್ಗೆ (Viral Video) ಇರುವ ಕಾಳಜಿ ಮತ್ತು ಪ್ರೀತಿ ಸ್ಪಷ್ಟವಾಗಿ ಕಾಣುತ್ತಿತ್ತು.
Read this also : 68ರ ಇಳಿಹರೆಯದಲ್ಲೂ 18ರ ಉತ್ಸಾಹ! ಸ್ಕೇಟ್ ಬೋರ್ಡಿಂಗ್ ಮಾಡಿ ನೆಟ್ಟಿಗರ ಹುಬ್ಬೇರಿಸಿದ ‘ಸೂಪರ್ ಅಜ್ಜಿ’ – ವೈರಲ್ ವಿಡಿಯೋ ನೋಡಿ
ಕುಟುಂಬದ ಆಧಾರ ಸ್ತಂಭ ‘ಅಮ್ಮ’
ಈ ವಿಡಿಯೋದ ಜೊತೆಗೆ ಜಾಗೃತಿ ಅವರು ಬರೆದುಕೊಂಡ ಸಾಲುಗಳು ಕೂಡ ಅಷ್ಟೇ ಅರ್ಥಪೂರ್ಣವಾಗಿವೆ. “ಅಮ್ಮ ನಮ್ಮ ಮನೆಯ ಬೆನ್ನೆಲುಬು. ಪ್ರತಿದಿನ ಬೆಳಗ್ಗೆ ಎಲ್ಲರಿಗಿಂತ ಮೊದಲು ಎದ್ದು, ಇಡೀ ಕುಟುಂಬದ ಜವಾಬ್ದಾರಿಯನ್ನು ಹೊರುತ್ತಾಳೆ. ಎಷ್ಟೇ ಕೆಲಸವಿದ್ದರೂ ಮುಖದ ಮೇಲಿನ ನಗು ಮಾಸುವುದಿಲ್ಲ. (Viral Video) ಆಕೆಯ ಆ ನಗುವೇ, ಅಪ್ಪನ ಒಂಟಿತನ ಮತ್ತು ಆತಂಕವನ್ನು ಮುಚ್ಚಿಹಾಕುತ್ತದೆ,” ಎಂದು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋದಲ್ಲಿ (Viral Video) ಯಾವುದೇ ಸ್ಕ್ರಿಪ್ಟ್ ಇಲ್ಲ, ಕೃತಕ ಬಣ್ಣಗಳಿಲ್ಲ. ಇದು ನಮ್ಮ ನಿಮ್ಮ ಮನೆಯಲ್ಲಿ ನಡೆಯುವ ನೈಜ ಘಟನೆಯಂತಿದೆ. ತಾಯಿ ರೈಲು ಹತ್ತಿ ಕುಳಿತಾಗ, ತಂದೆ ಕಿಟಕಿಯ ಮೂಲಕ ನೋಡುವ ಆ ನೋಟ, ಅದೆಷ್ಟೋ ವರ್ಷಗಳ ದಾಂಪತ್ಯದ ಸಾಕ್ಷಿಯಾಗಿದೆ. ಇದನ್ನು ನೋಡಿದ ನೆಟ್ಟಿಗರು, “ನಿಜವಾದ ಪ್ರೀತಿ ಅಂದರೆ ಇದೇ ಅಲ್ವಾ?” ಎಂದು ಕಮೆಂಟ್ ಮಾಡುತ್ತಿದ್ದಾರೆ.
