ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗ ಯಾವ ವಿಷಯ ವೈರಲ್ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಇದೀಗ ಆಗ್ರಾದ ಸರಫಾ ಮಾರುಕಟ್ಟೆಯ ವಿಡಿಯೋ ಒಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರ ಕಂಕುಳಲ್ಲಿದ್ದ ಮಗುವಿನ ಬಣ್ಣವೇ ಈ ಎಲ್ಲಾ ರಾದ್ಧಾಂತಕ್ಕೆ ಕಾರಣವಾಯ್ತು (Viral Video) ಅಂದ್ರೆ ನೀವು ನಂಬಲೇಬೇಕು! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಆ ಮಗು ನಿಜವಾಗಲೂ ಆಕೆಯದ್ದೇ? ಇಲ್ಲಿದೆ ಸಂಪೂರ್ಣ ವಿವರ.

Viral Video – ಅಸಲಿಗೆ ನಡೆದಿದ್ದೇನು?
ಘಟನೆ ನಡೆದಿದ್ದು ಆಗ್ರಾದ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ‘ನಮಕ್ ಕಿ ಮಂಡಿ’ (Namak Ki Mandi) ಪ್ರದೇಶದಲ್ಲಿ. ಗುರುವಾರ ಸಂಜೆ ಸುಮಾರು 6 ಗಂಟೆಯ ಸಮಯ. ಮಹಿಳೆಯೊಬ್ಬರು ಪುಟ್ಟ ಮಗುವನ್ನು ಎತ್ತಿಕೊಂಡು ಜನನಿಬಿಡ ಸರಫಾ ಮಾರುಕಟ್ಟೆಯಲ್ಲಿ ಭಿಕ್ಷೆ ಬೇಡುತ್ತಿದ್ದರು. ಆದರೆ, ಅಲ್ಲಿನ ವ್ಯಾಪಾರಿಗಳು ಮತ್ತು ದಾರಿಹೋಕರ ಕಣ್ಣು ಆ ಮಹಿಳೆಯ ಮೇಲಲ್ಲ, ಬದಲಿಗೆ ಆಕೆಯ ಕಂಕುಳಲ್ಲಿದ್ದ ಮಗುವಿನ ಮೇಲೆ ಬಿತ್ತು.
ಕಾರಣ ಇಷ್ಟೇ, ಆ ಮಹಿಳೆಗಿಂತ ಆ ಮಗು ತುಂಬಾನೇ ಬಿಳಿಯಾಗಿ, ಸುಂದರವಾಗಿತ್ತು (Fair Complexion). ಮಗುವಿನ ಬಣ್ಣ ಮತ್ತು ಮಹಿಳೆಯ ಬಣ್ಣಕ್ಕೆ ಅಜಗಜಾಂತರ ವ್ಯತ್ಯಾಸವಿದ್ದಿದ್ದನ್ನು ಕಂಡು ಅಲ್ಲಿನ ಜನರಿಗೆ ಅನುಮಾನ ಶುರುವಾಯ್ತು. “ಇದು ನಿನ್ನದೇ ಮಗುನಾ?” ಎಂದು ಕೆಲವರು ಪ್ರಶ್ನಿಸಲು (Viral Video) ಶುರುಮಾಡಿದರು.
ಜನರ ಅನುಮಾನಕ್ಕೆ ಕಾರಣವಾಗಿದ್ದೇನು?
ಸ್ಥಳೀಯ ವ್ಯಾಪಾರಿ ಶುಭಂ ಸೋನಿ ಎನ್ನುವವರು ಹೇಳುವ ಪ್ರಕಾರ, ಆ ಮಹಿಳೆ ಮಗುವನ್ನು ಎತ್ತಿಕೊಂಡು ತಿನ್ನಲು ಏನಾದರೂ ಕೊಡಿ ಎಂದು ಕೇಳುತ್ತಿದ್ದಳು. ಆದರೆ ಆಕೆಯ ಚಹರೆಗೂ, ಮಗುವಿನ ಅಂದಕ್ಕೂ ತಾಳೆಯಾಗದಿದ್ದಾಗ ಜನರಿಗೆ ಮಗುವನ್ನು ಕದ್ದಿರಬಹುದೇ ಎಂಬ ಶಂಕೆ ವ್ಯಕ್ತವಾಯ್ತು. ಜನರು ಮಗುವಿನ ಹೆಸರೇನು, ಊರು ಯಾವುದು ಎಂದು ಪ್ರಶ್ನಿಸಿದಾಗ ಆಕೆ ಉತ್ತರಿಸಿದರೂ, ಆಕೆಯ ಮುಖದಲ್ಲಿ ಭಯ ಮತ್ತು ನಡುಕ ಕಾಣಿಸುತ್ತಿತ್ತು. ಕೂಡಲೇ ಆಕೆ ಅಲ್ಲಿಂದ ಕಾಲ್ಕಿತ್ತಿದ್ದು ಜನರ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿತು.
ವೈರಲ್ ಆಯ್ತು ವಿಡಿಯೋ, ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ
ಯಾರೋ ಈ ದೃಶ್ಯವನ್ನು ವಿಡಿಯೋ (Viral Video) ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟರು. ನೋಡನೋಡುತ್ತಿದ್ದಂತೆ ವಿಡಿಯೋ ವೈರಲ್ ಆಗಿ, “ಮಗುವಿನ ರಕ್ಷಣೆ ಮಾಡಿ”, “ಇದು ಮಕ್ಕಳ ಕಳ್ಳತನ ಇರಬಹುದು, ತನಿಖೆ ನಡೆಸಿ” ಎಂದು ನೆಟ್ಟಿಗರು ಆಗ್ರಹಿಸಲು ಶುರುಮಾಡಿದರು. ವಿಷಯ ದೊಡ್ಡದಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸ್ಥಳೀಯ ಪೊಲೀಸರು ಮತ್ತು ಆಡಳಿತ ವರ್ಗ ತಕ್ಷಣವೇ ಕಾರ್ಯಪ್ರವೃತ್ತವಾಯ್ತು. Read this also : ದೆಹಲಿಯಲ್ಲಿ ಟ್ರಾಫಿಕ್ ಪೊಲೀಸ್ ದರ್ಪ! ಕಾರಿನಲ್ಲಿದ್ದ ಚಾಲಕನಿಗೆ ಕಪಾಳಮೋಕ್ಷ; ವಿಡಿಯೋ ನೋಡಿ ನೆಟ್ಟಿಗರ ಆಕ್ರೋಶ…!
ಅಂತಿಮವಾಗಿ ಬಯಲಾಯ್ತು ಸತ್ಯ!
ಕೆಲ ವರದಿಗಳ ಪ್ರಕಾರ, ಪೊಲೀಸರು ಆ ಮಹಿಳೆಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ. ಆಕೆ ಎಸ್‌ಎನ್ ಮೆಡಿಕಲ್ ಕಾಲೇಜು ಬಳಿಯ ಗುಡಿಸಲೊಂದರಲ್ಲಿ ವಾಸವಾಗಿದ್ದು, ಪತಿ ಕೂಲಿ ಕೆಲಸ ಮಾಡುತ್ತಾರೆ (Viral Video) ಮತ್ತು ಇವರಿಗೆ ನಾಲ್ಕು ಮಕ್ಕಳಿದ್ದಾರೆ ಎಂಬುದು ತಿಳಿದುಬಂದಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಜನರ ಅನುಮಾನವನ್ನು ಪರಿಹರಿಸಲು ಪೊಲೀಸರು ಆ ಮಹಿಳೆಯ ಬಳಿ ಮಗುವಿನ ಜನನ ದಾಖಲೆಗಳನ್ನು (Birth Documents) ಕೇಳಿದ್ದಾರೆ. ಆಕೆ ಸರಿಯಾದ ದಾಖಲೆಗಳನ್ನು ಹಾಜರುಪಡಿಸಿದ್ದು, ಮಗು ಆಕೆಯದ್ದೇ ಎಂಬುದು ಸಾಬೀತಾಗಿದೆ. ಪರಿಶೀಲನೆ ನಂತರ ಯಾವುದೇ ತಪ್ಪು ಕಂಡುಬರದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಕಳುಹಿಸಿಕೊಟ್ಟಿದ್ದಾರೆ. ಒಟ್ಟಿನಲ್ಲಿ, ಮಗು ಸುರಕ್ಷಿತವಾಗಿದೆ ಮತ್ತು ತನ್ನ ತಾಯಿಯ ಬಳಿಯೇ ಇದೆ ಎಂಬುದು ಸಮಾಧಾನಕರ ವಿಷಯ
