ಬ್ಯಾಂಕಿಂಗ್ ವಲಯದಲ್ಲಿ ಉನ್ನತ ಅಧಿಕಾರಿಯಾಗಿ ಕೆಲಸ ಮಾಡುವುದು ನಿಮ್ಮ ಕನಸೇ? ಹಾಗಿದ್ದರೆ ನಿಮ್ಮ ಕನಸನ್ನು ನನಸಾಗಿಸಲು ಬ್ಯಾಂಕ್ ಆಫ್ ಇಂಡಿಯಾ ವೇದಿಕೆ ಸಜ್ಜುಗೊಳಿಸಿದೆ. ಎಂಬಿಎ, ಸಿಎ ಅಥವಾ ಪದವಿ ಮುಗಿಸಿ ಅನುಭವ ಹೊಂದಿರುವ ವೃತ್ತಿಪರರಿಗಾಗಿ ಬರೋಬ್ಬರಿ 514 ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ (Bank of India Recruitment 2025) ಅರ್ಜಿ ಆಹ್ವಾನಿಸಲಾಗಿದೆ. ಲಕ್ಷ ದಾಟುವ ವೇತನ ಶ್ರೇಣಿಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಹತೆಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ.

Bank of India Recruitment 2025 – ಹುದ್ದೆಗಳ ಸಂಪೂರ್ಣ ವಿವರ ಇಲ್ಲಿದೆ
ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 514 ಹುದ್ದೆಗಳನ್ನು ವಿವಿಧ ಶ್ರೇಣಿಗಳಲ್ಲಿ ಹಂಚಿಕೆ ಮಾಡಲಾಗಿದೆ:
- ಕ್ರೆಡಿಟ್ ಆಫೀಸರ್ (SMGS IV): 36 ಹುದ್ದೆಗಳು
- ಕ್ರೆಡಿಟ್ ಆಫೀಸರ್ (MMGS III): 60 ಹುದ್ದೆಗಳು
- ಕ್ರೆಡಿಟ್ ಆಫೀಸರ್ (MMGS II): 418 ಹುದ್ದೆಗಳು
ಯಾರು ಅರ್ಜಿ ಸಲ್ಲಿಸಬಹುದು?
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯಗಳಲ್ಲಿ ಪದವಿ (Graduation), MBA, PGDBM, PG, CA ಅಥವಾ CMA ವಿದ್ಯಾರ್ಹತೆಯನ್ನು ಹೊಂದಿರಬೇಕು. (Bank of India Recruitment 2025) ಇದರೊಂದಿಗೆ, ಹುದ್ದೆಗೆ ಅನುಗುಣವಾಗಿ ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವವಿರುವುದು ಕಡ್ಡಾಯವಾಗಿದೆ.
ವೇತನ ಶ್ರೇಣಿ ಎಷ್ಟು?
ಆಯ್ಕೆಯಾದ ಅಭ್ಯರ್ಥಿಗಳಿಗೆ ಬ್ಯಾಂಕ್ (Bank of India Recruitment 2025) ನಿಯಮದಂತೆ ಅತ್ಯುತ್ತಮ ಮಾಸಿಕ ವೇತನ ನೀಡಲಾಗುತ್ತದೆ:
- SMGS IV: ರೂ. 1,02,300 ರಿಂದ ರೂ. 1,20,940
- MMGS III: ರೂ. 85,920 ರಿಂದ ರೂ. 1,05,280
- MMGS II: ರೂ. 64,820 ರಿಂದ ರೂ. 93,960
ಅರ್ಜಿ ಸಲ್ಲಿಕೆ ಮತ್ತು ಪ್ರಮುಖ ದಿನಾಂಕಗಳು
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 20 ಡಿಸೆಂಬರ್, 2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05 ಜನವರಿ, 2025
ಅರ್ಜಿ ಶುಲ್ಕ:
- ಸಾಮಾನ್ಯ (General) ಅಭ್ಯರ್ಥಿಗಳಿಗೆ: ರೂ. 850
- SC/ST ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ: ರೂ. 175
ಆಯ್ಕೆ ವಿಧಾನ ಹೇಗಿರುತ್ತದೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲಿಗೆ ಆನ್ಲೈನ್ ಲಿಖಿತ ಪರೀಕ್ಷೆಗೆ ಕರೆಯಲಾಗುತ್ತದೆ. ಇದರಲ್ಲಿ ಉತ್ತೀರ್ಣರಾದವರಿಗೆ ವೈಯಕ್ತಿಕ ಸಂದರ್ಶನ (Personal Interview) ನಡೆಸಿ (Bank of India Recruitment 2025) ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ. ಅಧಿಕೃತ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ : Click Here
ಗಮನಿಸಿ: ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್‌ಲೈನ್ ಅರ್ಜಿ ಸಲ್ಲಿಸಲು ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಕೊನೆಯ ದಿನದವರೆಗೆ ಕಾಯದೆ ಈಗಲೇ ಅರ್ಜಿ ಸಲ್ಲಿಸುವುದು ಉತ್ತಮ.
- Apply Online: Click Here
- Official Website: bankofindia.bank.in

