ರಸ್ತೆ ನಿಯಮಗಳನ್ನು ಉಲ್ಲಂಘಿಸಿದರೆ ಪೊಲೀಸರು ದಂಡ ಹಾಕುವುದು, ಎಚ್ಚರಿಕೆ ನೀಡುವುದು ಸಾಮಾನ್ಯ. ಆದರೆ, ಕಾನೂನು ಪಾಲಿಸಬೇಕಾದ ಪೊಲೀಸರೇ ರೌಡಿಗಳಂತೆ ವರ್ತಿಸಿದರೆ ಜನ ಸಾಮಾನ್ಯರ ಗತಿಯೇನು? ಸದ್ಯ ದೆಹಲಿಯ ಟ್ರಾಫಿಕ್ ಪೊಲೀಸ್ (Traffic Police) ಅಧಿಕಾರಿಯೊಬ್ಬರು ಕಾರು ಚಾಲಕನ ಮೇಲೆ ದರ್ಪ ತೋರಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

Traffic Police – ಘಟನೆ ಎಲ್ಲಾಗಿದ್ದು?
ದಕ್ಷಿಣ ಭಾರತವಿರಲಿ ಅಥವಾ ಉತ್ತರ ಭಾರತವಿರಲಿ, ಪೊಲೀಸರ ದೌರ್ಜನ್ಯದ ಸುದ್ದಿಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಇದೀಗ ದೆಹಲಿಯ ಪಹರ್‌ಗಂಜ್ (Paharganj) ರೈಲ್ವೆ ನಿಲ್ದಾಣದ ಬಳಿ ನಡೆದಿದೆ ಎನ್ನಲಾದ ಘಟನೆಯ ವಿಡಿಯೋ ಇಲ್ಲಿದೆ. ಟ್ರಾಫಿಕ್ ಪೊಲೀಸ್ (Traffic Police) ಅಧಿಕಾರಿಯೊಬ್ಬರು ಕಾರಿನಲ್ಲಿದ್ದ ಯುವಕನ ಮೇಲೆ ಹಲ್ಲೆ ನಡೆಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ, ಬಿಳಿ ಬಣ್ಣದ ಕಾರಿನ ಕಿಟಕಿ ಮೂಲಕ ಬಾಗಿರುವ ಟ್ರಾಫಿಕ್ ಪೊಲೀಸ್ ಪೇದೆ, ಸೀಟ್‌ನಲ್ಲಿ ಕುಳಿತಿರುವ ಚಾಲಕನ ಕಪಾಳಕ್ಕೆ ಮತ್ತು ಮೈಮೇಲೆ ಮನಬಂದಂತೆ ಥಳಿಸುತ್ತಿರುವುದನ್ನು ಕಾಣಬಹುದು. ಪಾಪ ಆ ಚಾಲಕ ಸೀಟ್ ಬೆಲ್ಟ್ ಹಾಕಿಕೊಂಡು ಕುಳಿತಿದ್ದು, ಏನೂ ಮಾಡಲಾಗದೆ ಅಸಹಾಯಕನಾಗಿ ಪೆಟ್ಟು ತಿನ್ನುತ್ತಿದ್ದಾನೆ. ಪೊಲೀಸ್ ಅಧಿಕಾರಿಯ ಆಕ್ರೋಶ ನೋಡಿದರೆ ಎಂಥವರಿಗೂ ಕೋಪ ಬರುವಂತಿದೆ. Read this also : ಬೆಂಗಳೂರಿನ ರಸ್ತೆ ಮಧ್ಯೆಯೇ ಕ್ಯಾಬ್ ಡ್ರೈವರ್‌ಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್, ವೈರಲ್ ಆದ ವಿಡಿಯೋ…!
ಕ್ಯಾಮರಾ ನೋಡಿ ಸುಮ್ಮನಾದ ಪೊಲೀಸ್!
ಈ ಹಲ್ಲೆ ಕೆಲ ಸೆಕೆಂಡುಗಳ ಕಾಲ ನಡೆಯುತ್ತದೆ. ಚಾಲಕ ಎಷ್ಟೇ ಬೇಡಿಕೊಂಡರೂ (Traffic Police) ಪೊಲೀಸ್ ಪೇದೆ ಕಪಾಳಮೋಕ್ಷ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ, ಯಾವಾಗ ಯಾರೋ ತನ್ನನ್ನು ವಿಡಿಯೋ ಮಾಡುತ್ತಿದ್ದಾರೆ ಎಂಬುದು ಪೊಲೀಸ್ ಅಧಿಕಾರಿಯ ಗಮನಕ್ಕೆ ಬರುತ್ತದೆಯೋ, ಆಗ ತಕ್ಷಣವೇ ಆತ ಹಿಂದೆ ಸರಿದು ಸುಮ್ಮನಾಗುತ್ತಾನೆ. ಅಷ್ಟರಲ್ಲಾಗಲೇ ಪೆಟ್ಟು ತಿಂದ ಚಾಲಕ ನೋವಿನಿಂದ ಅಳುತ್ತಿರುವುದು ಮತ್ತು ಜೋರಾಗಿ ಉಸಿರಾಡುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ನೆಟ್ಟಿಗರ ಆಕ್ರೋಶ
ಈ ವಿಡಿಯೋ ಈಗ ‘X’ (ಟ್ವಿಟ್ಟರ್) ಪ್ಲಾಟ್‌ಫಾರ್ಮ್‌ನಲ್ಲಿ ವೈರಲ್ ಆಗಿದೆ. “ದೆಹಲಿ ಪೊಲೀಸರ ಗುಂಡಾಗಿರಿ” ಎಂಬ ಶೀರ್ಷಿಕೆಯಡಿ ಈ ವಿಡಿಯೋ ಹರಿದಾಡುತ್ತಿದ್ದು, ಗಂಟೆಗಳಲ್ಲೇ ಸಾವಿರಾರು ವೀಕ್ಷಣೆ ಪಡೆದಿದೆ. “ಕಾನೂನು ರಕ್ಷಿಸಬೇಕಾದವರೇ ಹೀಗೆ ವರ್ತಿಸಿದರೆ ಹೇಗೆ? ಇವರು ಪೊಲೀಸರಾ ಅಥವಾ ಗೂಂಡಾಗಳಾ? ಕೂಡಲೇ ಈ ಅಧಿಕಾರಿಯ ವಿರುದ್ಧ ಇಲಾಖಾ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ನೆಟ್ಟಿಗರು ಕಟುವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

