ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ (Smartphone) ಮತ್ತು ಸೋಶಿಯಲ್ ಮೀಡಿಯಾ ಹ್ಯಾಕಿಂಗ್ ಪ್ರಕರಣಗಳು ಮಿತಿಮೀರಿವೆ. “ನನ್ನ ಅಕೌಂಟ್ ಹ್ಯಾಕ್ ಆಗಿದೆ, ಯಾರೋ ದುಡ್ಡು ಕೇಳ್ತಿದ್ದಾರೆ, ಪ್ಲೀಸ್ ಕಳಿಸಬೇಡಿ” ಎಂಬ ಸ್ಟೇಟಸ್ ಅಥವಾ ಪೋಸ್ಟ್‌ಗಳನ್ನು ನಾವೆಲ್ಲರೂ ಆಗಾಗ ನೋಡುತ್ತಲೇ ಇರುತ್ತೇವೆ. ಸೈಬರ್ ಕಳ್ಳರು ನಮ್ಮ ವಾಟ್ಸಾಪ್ ಹ್ಯಾಕ್ ಮಾಡಿ, ನಮ್ಮದೇ ನಂಬರ್‌ನಿಂದ ಫ್ರೆಂಡ್ಸ್ ಹಾಗೂ ಸಂಬಂಧಿಕರಿಗೆ ಮೆಸೇಜ್ ಮಾಡಿ ಹಣ ಕೇಳುತ್ತಾರೆ. ಪಾಪ, ಅದು ನಾವೇ ಎಂದು ನಂಬಿ ಎಷ್ಟೋ ಜನ ಹಣ ಕಳೆದುಕೊಳ್ಳುತ್ತಾರೆ.

ಹಾಗಾದರೆ, ನಿಮ್ಮ ವಾಟ್ಸಾಪ್ ಹ್ಯಾಕ್ ಆಗಿದೆ (WhatsApp Hack) ಎಂದು ತಿಳಿಯುವುದು ಹೇಗೆ? ಹ್ಯಾಕರ್ ಕೈಗೆ ನಿಮ್ಮ ಅಕೌಂಟ್ ಸಿಕ್ಕಿಬಿದ್ದಿದೆ ಎಂಬುದಕ್ಕೆ ಇಲ್ಲಿವೆ ಪ್ರಮುಖ ಸಾಕ್ಷಿಗಳು. ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ!
ವಾಟ್ಸಾಪ್ ಹ್ಯಾಕ್ ಆಗಿದೆ (WhatsApp Hack) ಎಂದು ತಿಳಿಯುವುದು ಹೇಗೆ?
- ಪದೇ ಪದೇ ಲಾಗ್ ಔಟ್ (Log out) ಆಗ್ತಿದ್ಯಾ? : ನೀವು ವಾಟ್ಸಾಪ್ ಬಳಸುತ್ತಿರುವಾಗಲೇ ಇದ್ದಕ್ಕಿದ್ದಂತೆ ಲಾಗ್ ಔಟ್ ಆಗುತ್ತಿದೆಯಾ? ಅಥವಾ ಸ್ಕ್ರೀನ್ ಮೇಲೆ ಸಡನ್ ಆಗಿ “Your phone number is no longer registered” ಎಂಬ ಮೆಸೇಜ್ ಬರುತ್ತಿದೆಯಾ? ಹಾಗಿದ್ದರೆ ಹುಷಾರ್! ಇದರರ್ಥ ನಿಮ್ಮ ನಂಬರ್ ಬಳಸಿ ಬೇರೆ ಯಾರೋ, ಬೇರೆ ಕಡೆ ಲಾಗಿನ್ ಆಗಿದ್ದಾರೆ ಎಂದರ್ಥ. ಕೂಡಲೇ ಅಕೌಂಟ್ ರಿಕವರಿ ಮಾಡಿಕೊಳ್ಳಿ.
- ನೀವು ಕಳಿಸದ ಮೆಸೇಜ್‌ಗಳು ಹೋಗಿವ್ಯಾ? : ಇದು ತುಂಬಾ ಮುಖ್ಯವಾದ ವಿಷ್ಯ. ನೀವು ಯಾರಿಗೂ ಮೆಸೇಜ್ ಮಾಡಿರಲ್ಲ, ಆದರೆ ನಿಮ್ಮ ಸ್ನೇಹಿತರಿಂದ “ಏನಿದು ಮೆಸೇಜ್?” ಅಂತ ರಿಪ್ಲೈ ಬರುತ್ತೆ. ಅಥವಾ ನಿಮ್ಮ ಚಾಟ್ ಲಿಸ್ಟ್‌ನಲ್ಲಿ ನೀವು ಕಳಿಸದೇ ಇರುವ ಮೆಸೇಜ್‌ಗಳು ಕಾಣಿಸಿದರೆ, ಖಂಡಿತವಾಗಿಯೂ ನಿಮ್ಮ ವಾಟ್ಸಾಪ್ ಹ್ಯಾಕ್ (WhatsApp Hack) ಆಗಿದೆ ಎಂದೇ ಅರ್ಥ.
- ಲಿಂಕ್ಡ್ ಡಿವೈಸ್ (Linked Devices) ಚೆಕ್ ಮಾಡಿ : ದಿನಕ್ಕೆ ಒಮ್ಮೆಯಾದರೂ ವಾಟ್ಸಾಪ್ ಸೆಟ್ಟಿಂಗ್ಸ್‌ನಲ್ಲಿರುವ ‘Linked Devices’ ಆಪ್ಷನ್ ಚೆಕ್ ಮಾಡುವುದು ಒಳ್ಳೆಯದು. ಅಲ್ಲಿ ನೀವು ಲಾಗಿನ್ ಮಾಡದ ಲ್ಯಾಪ್‌ಟಾಪ್ ಅಥವಾ ಬೇರೆ ಮೊಬೈಲ್ ಹೆಸರು ಕಾಣಿಸುತ್ತಿದೆಯಾ? ಹಾಗಿದ್ದರೆ ತಕ್ಷಣವೇ ಆ ಡಿವೈಸ್ ಮೇಲೆ ಕ್ಲಿಕ್ ಮಾಡಿ ‘Log out’ ಕೊಡಿ. ಹ್ಯಾಕರ್‌ಗಳು ಕದ್ದುಮುಚ್ಚಿ ಲಾಗಿನ್ ಆಗಿದ್ದರೆ ಇಲ್ಲಿ (WhatsApp Hack) ಸಿಕ್ಕಿಬೀಳುತ್ತಾರೆ. Read this also : ವಾಟ್ಸಾಪ್ ಬಳಸುತ್ತಿದ್ದೀರಾ? ಈ 4 ತಪ್ಪು ಮಾಡಿದ್ರೆ ನಿಮ್ಮ ಅಕೌಂಟ್ ಶಾಶ್ವತವಾಗಿ ಬಂದ್ ಆಗುತ್ತೆ! ಎಚ್ಚರ
- ಮೊಬೈಲ್ ಹೀಟ್ ಅಥವಾ ಬ್ಯಾಟರಿ ಖಾಲಿ : ನೀವು ಫೋನ್ ಹೆಚ್ಚು ಬಳಸದಿದ್ದರೂ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯಾ? ಅಥವಾ ಮೊಬೈಲ್ ವಿಪರೀತ ಬಿಸಿಯಾಗುತ್ತಿದೆಯಾ? ವಾಟ್ಸಾಪ್ ಹ್ಯಾಕ್ ಮಾಡಲು ಹ್ಯಾಕರ್‌ಗಳು ಬಳಸುವ ಸ್ಪೈವೇರ್ (Spyware) ಅಥವಾ ಮಾಲ್‌ವೇರ್‌ಗಳು ಫೋನ್‌ನ ಹಿನ್ನೆಲೆಯಲ್ಲಿ (Background) ಕೆಲಸ ಮಾಡುತ್ತಿರಬಹುದು. ಇದರಿಂದಲೂ ಬ್ಯಾಟರಿ ಡ್ರೈನ್ ಆಗುತ್ತದೆ.

- ಗೊತ್ತಿಲ್ಲದ ಗ್ರೂಪ್‌ಗಳಲ್ಲಿ ಆಡ್ ಆಗುವುದು : ನಿಮಗೆ ಸಂಬಂಧವೇ ಇಲ್ಲದ ಅಥವಾ ನಿಮಗೆ ಗೊತ್ತೇ ಇಲ್ಲದ ವಾಟ್ಸಾಪ್ ಗ್ರೂಪ್‌ಗಳಿಗೆ ನಿಮ್ಮ ನಂಬರ್ ಆಟೋಮ್ಯಾಟಿಕ್ ಆಗಿ ಆಡ್ ಆಗುತ್ತಿದ್ದರೆ ಎಚ್ಚರ ವಹಿಸಿ. ಅದೇ ರೀತಿ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ನೀವು ಸೇವ್ ಮಾಡದ ಹೊಸ ನಂಬರ್‌ಗಳು ಕಾಣಿಸಿಕೊಂಡರೂ ಅದು ಹ್ಯಾಕಿಂಗ್ (WhatsApp Hack) ಲಕ್ಷಣವೇ ಆಗಿರಬಹುದು.
ಕೊನೆಯ ಮಾತು: ಈ ಮೇಲೆ ಹೇಳಿದ ಯಾವುದೇ ಲಕ್ಷಣಗಳು ಕಂಡುಬಂದರೂ ನಿರ್ಲಕ್ಷ್ಯ ಮಾಡಬೇಡಿ. ತಕ್ಷಣ ವಾಟ್ಸಾಪ್ ಅನ್ನು ರೀ-ಇನ್‌ಸ್ಟಾಲ್ ಮಾಡಿ ಅಥವಾ ಸೆಟ್ಟಿಂಗ್ಸ್ ಪರಿಶೀಲಿಸಿ. ಆದಷ್ಟು ನಿಮ್ಮ ವಾಟ್ಸಾಪ್‌ಗೆ ‘Two-Step Verification’ ಆನ್ ಮಾಡಿಕೊಳ್ಳಿ. ಸುರಕ್ಷಿತವಾಗಿರಿ!
