Video : ಅಬ್ಬಬ್ಬಾ! ನಡು ರಸ್ತೆಯಲ್ಲೇ ನಡೆದ ನಾಗರಹಾವು ಮತ್ತು ಮುಂಗುಸಿಯ ಭಯಂಕರ ಕಾಳಗ; ವಿಡಿಯೋ ನೋಡಿದ್ರೆ ಮೈ ಜುಮ್ ಅನ್ನುತ್ತೆ!

ಹಾವು ಮತ್ತು ಮುಂಗುಸಿ (Snake vs Mongoose) ಅಂದ್ರೆನೇ ಬದ್ಧ ವೈರಿಗಳು ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಇವುಗಳೆರಡು ಎಲ್ಲೇ ಮುಖಾಮುಖಿಯಾದ್ರೂ ಅಲ್ಲಿ ಯುದ್ಧ ಫಿಕ್ಸ್! ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದೇ ಒಂದು ಮೈ ರೋಮಾಂಚನಗೊಳಿಸುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ (Viral Video) ಆಗ್ತಿದೆ. ಸಿನಿಮಾ ಸ್ಟೈಲ್‌ನಲ್ಲಿ ನಡೆದ ಈ ಫೈಟ್ ನೋಡಿದ್ರೆ ನೀವು ಥ್ರಿಲ್ ಆಗೋದು ಗ್ಯಾರಂಟಿ.

Terrifying snake vs mongoose fight on the middle of the road captured in a viral video

Video – ನಡು ರಸ್ತೆಯಲ್ಲೇ ಶುರುವಾಯ್ತು ‘ಬಿಗ್ ಫೈಟ್’

ವೈರಲ್ ಆಗಿರುವ ವಿಡಿಯೋದಲ್ಲಿ ಹಾವು ರಸ್ತೆ ದಾಟಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ ರಸ್ತೆಯಲ್ಲಿ ವಾಹನಗಳ ಓಡಾಟವಿದ್ದ ಕಾರಣ ಹಾವು ಭಯದಿಂದ ಹಿಂದಕ್ಕೆ ಮುಂದಕ್ಕೆ ಚಲಿಸುತ್ತಿತ್ತು. ಇದೇ ಸಮಯಕ್ಕೆ ಸರಿಯಾಗಿ ರಸ್ತೆ ಪಕ್ಕದ ಪೊದೆಯೊಳಗಿಂದ “ನಾನೇನೂ ಕಮ್ಮಿ ಇಲ್ಲ” ಎನ್ನುವಂತೆ ಬಂದ ಮುಂಗುಸಿಯೊಂದು, ರಸ್ತೆ ದಾಟುತ್ತಿದ್ದ ಹಾವಿನ ಮೇಲೆ ನೇರವಾಗಿ ಅಟ್ಯಾಕ್ ಮಾಡಿದೆ.

Read this also : ಒಂದು ಹಾವು ಇನ್ನೊಂದು ಹಾವನ್ನೇ ನುಂಗುತ್ತಿರುವ ದೃಶ್ಯ ನೋಡಿ ನೆಟ್ಟಿಗರು ಶಾಕ್…!

Video – ಕೊನೆಗೆ ಗೆದ್ದಿದ್ಯಾರು?

ಹೆಡೆ ಎತ್ತಿ ಬುಸುಗುಟ್ಟುತ್ತಿದ್ದ ನಾಗರಹಾವಿನ ಮೇಲೆ ಮುಂಗುಸಿ ಎರಗಿ ಬಿದ್ದಿದೆ. ತನ್ನ ಪ್ರಾಣ ಉಳಿಸಿಕೊಳ್ಳಲು ಹಾವು ಎಷ್ಟೇ ಪಟ್ಟು ಹಾಕಿದರೂ, ಮುಂಗುಸಿಯ ವೇಗದ ಮುಂದೆ ಅದರ ಆಟ ನಡೆಯಲಿಲ್ಲ. ಇವುಗಳ ನಡುವೆ ಸಾಕಷ್ಟು ಹೊತ್ತು ಭೀಕರ ಕಾಳಗವೇ ನಡೆದಿದೆ. ಕೊನೆಗೆ ಈ ಯುದ್ಧದಲ್ಲಿ ಮೇಲುಗೈ ಸಾಧಿಸಿದ ಮುಂಗುಸಿ, ಹಾವನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡು ಪೊದೆಯೊಳಗೆ ಎಳೆದೊಯ್ದಿದೆ.

Terrifying snake vs mongoose fight on the middle of the road captured in a viral video

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here

Video – 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ

ದೂರದಿಂದಲೇ ಈ ದೃಶ್ಯವನ್ನು ಗಮನಿಸಿದ ವಾಹನ ಸವಾರರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆದಾರ ‘shubhhh__official’ ಎಂಬ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದಂತಿರುವ ಈ ಕಾದಾಟಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಇಲ್ಲಿಯವರೆಗೆ ಬರೋಬ್ಬರಿ 5 ಲಕ್ಷದ 78 ಸಾವಿರಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top