ಸಾಮಾನ್ಯವಾಗಿ ಮದುವೆಯಾದ ಮಹಿಳೆ ಪರಪುರುಷನೊಂದಿಗೆ ಸಿಕ್ಕಿಬಿದ್ದರೆ ಅಲ್ಲಿ ದೊಡ್ಡ ರಾದ್ಧಾಂತವೇ ನಡೆದುಹೋಗುತ್ತದೆ. ಮನೆ ಮಂದಿಯೆಲ್ಲಾ ಸೇರಿ ಥಳಿಸುವುದೋ ಅಥವಾ ಮನೆಯಿಂದ ಹೊರಹಾಕುವುದೋ ಸಾಮಾನ್ಯ. ಆದರೆ, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದ ಘಟನೆ ಮಾತ್ರ ತೀರಾ ವಿಭಿನ್ನ ಮತ್ತು ಸಿನಿಮೀಯವಾಗಿದೆ. ಸೊಸೆ ಪ್ರಿಯಕರನೊಂದಿಗೆ ಸಿಕ್ಕಿಬಿದ್ದಾಗ, ಆಕೆಯ ಅತ್ತೆ-ಮಾವ ತೆಗೆದುಕೊಂಡ ನಿರ್ಧಾರ ಈಗ ಎಲ್ಲರ ಹುಬ್ಬೇರಿಸಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ವಿದೇಶದಲ್ಲಿದ್ದ ಗಂಡ ಫೋನ್‌ನಲ್ಲಿ ಹೇಳಿದ್ದೇನು? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Viral – ಮಂಚದ ಪೆಟ್ಟಿಗೆಯಲ್ಲಿ ಸಿಕ್ಕಿಬಿದ್ದ ಪ್ರಿಯಕರ!
ಉತ್ತರ ಪ್ರದೇಶದ ಅಯೋಧ್ಯೆಯ ಪುರಾಕಲಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಭಂಗವಾ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ಮಹಿಳೆಯೊಬ್ಬರ ಪತಿ ಕೆಲಸದ ನಿಮಿತ್ತ ವಿದೇಶದಲ್ಲಿದ್ದರು. ಇದೇ ಸಮಯವನ್ನು ಬಳಸಿಕೊಂಡ ಪತ್ನಿ, ತನ್ನ ಪ್ರಿಯಕರನಾದ ಅಲಿಮ್ (ಮುನೀರ್ ಎಂಬುವವರ ಮಗ) ಎಂಬಾತನನ್ನು ತಡರಾತ್ರಿ ಮನೆಗೆ ಕರೆಸಿಕೊಂಡಿದ್ದಳು.
ರಾತ್ರಿ ವೇಳೆ ಕೋಣೆಯಲ್ಲಿ ಪಿಸುಮಾತು ಮತ್ತು ಶಬ್ದ ಕೇಳಿಸಿ, ಅತ್ತೆ-ಮಾವನಿಗೆ ಎಚ್ಚರವಾಗಿದೆ. ಯಾರೋ ಕಳ್ಳ ಮನೆಗೆ ನುಗ್ಗಿರಬಹುದು ಎಂದು ಭಯಪಟ್ಟು ಅಕ್ಕಪಕ್ಕದವರನ್ನು ಕರೆದು ಕೋಣೆ ಪರಿಶೀಲಿಸಿದ್ದಾರೆ. ಆದರೆ ಅಲ್ಲಿ ನೋಡಿದರೆ ಶಾಕ್ ಕಾದಿತ್ತು! ಸೊಸೆಯ ಪ್ರಿಯಕರ ಮಂಚದ ಬಾಕ್ಸ್ (ಪೆಟ್ಟಿಗೆ) ಒಳಗೆ ಅಡಗಿಕುಳಿತಿದ್ದ. ವಿಷಯ ತಿಳಿದು ಕಂಗಾಲಾದ ಅತ್ತೆ-ಮಾವ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರಣೆ ವೇಳೆ, ತಾವಿಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆಯಾಗಲು ಬಯಸಿರುವುದಾಗಿ ಪ್ರೇಮಿಗಳು ಒಪ್ಪಿಕೊಂಡಿದ್ದಾರೆ.
Viral – ವಿದೇಶದಲ್ಲಿದ್ದ ಪತಿ ಹೇಳಿದ್ದೇನು?
ಇಲ್ಲಿ ನಿಜವಾದ ಟ್ವಿಸ್ಟ್ ಇರೋದೇ ಗಂಡನ ರಿಯಾಕ್ಷನ್‌ನಲ್ಲಿ! ಪೊಲೀಸರು ಮತ್ತು ಪೋಷಕರು ವಿದೇಶದಲ್ಲಿರುವ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸಾಮಾನ್ಯವಾಗಿ ಯಾರೇ ಆಗಲಿ, ಇಂಥ ವಿಷಯ ಕೇಳಿದ್ರೆ ಸಿಟ್ಟಾಗುತ್ತಾರೆ. ಆದರೆ, ಈ ಪತಿ ಮಹಾಶಯ ಮಾತ್ರ, “ಅವಳು ಅವನ ಜೊತೆ ಖುಷಿಯಾಗಿದ್ದರೆ ನನಗೇನೂ ಅಭ್ಯಂತರವಿಲ್ಲ, ಅವರಿಬ್ಬರಿಗೂ ಮದುವೆ ಮಾಡಿಸಿಬಿಡಿ,” ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ. ಅಷ್ಟೇ ಅಲ್ಲ, ಹೆಂಡತಿಯ ಎರಡನೇ ಮದುವೆಗೆ ಶುಭಾಶಯವನ್ನೂ ತಿಳಿಸಿದ್ದಾನೆ. Read this also : ರೈಲಿನಲ್ಲಿ ಸೀಟ್ ವಿಚಾರಕ್ಕೆ ರಂಪಾಟ: “ಪಟ್ನಾ ಬರಲಿ, ನಿನ್ನನ್ನು ಪೀಸ್ ಪೀಸ್ ಮಾಡ್ತೀನಿ” ಎಂದು ಪ್ರಯಾಣಿಕನಿಗೆ ಮಹಿಳೆ ವಾರ್ನಿಂಗ್!

Viral – ಠಾಣೆಯಲ್ಲೇ ನಡೆಯಿತು ಕಲ್ಯಾಣ!
ಮಗನ ಒಪ್ಪಿಗೆ ಸಿಗುತ್ತಿದ್ದಂತೆ, ಅತ್ತೆ-ಮಾವ ಮನಸ್ಸು ಬದಲಾಯಿಸಿದ್ದಾರೆ. ಮಗನಿಗೆ ಮೋಸವಾಯಿತಲ್ಲ ಎಂದು ಬೇಸರ ಪಟ್ಟುಕೊಳ್ಳುವ ಬದಲು, ಸೊಸೆಯ ಬದುಕನ್ನೇ ಮುಖ್ಯವೆಂದು ಭಾವಿಸಿ, ಪೊಲೀಸ್ ಠಾಣೆಯಲ್ಲೇ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿಕೊಟ್ಟಿದ್ದಾರೆ. ಮಹಿಳೆಯ ಮಾವ ಈ ಬಗ್ಗೆ ಲಿಖಿತ ಹೇಳಿಕೆ ನೀಡಿದ್ದು, “ನಮಗೆ ಈ ಮದುವೆಯಿಂದ ಯಾವುದೇ ತೊಂದರೆಯಿಲ್ಲ ಮತ್ತು ನಾವು ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ,” ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ, ಕಳ್ಳ ಎಂದು ಹಿಡಿದು ಕೊನೆಗೆ ಅಳಿಯನನ್ನಾಗಿ ಸ್ವೀಕರಿಸಿದ ಈ ಘಟನೆ ಈಗ ಊರ ತುಂಬಾ ವೈರಲ್ ಆಗಿದೆ.
