Thursday, December 4, 2025
HomeStateKodi Mata Shree : ಸಂಕ್ರಾಂತಿ ಬಳಿಕ ರಾಜ್ಯದಲ್ಲಿ ‘ಶಿವ’ ಪರ್ವ ಆರಂಭ? ಕೋಡಿಮಠ ಶ್ರೀಗಳ...

Kodi Mata Shree : ಸಂಕ್ರಾಂತಿ ಬಳಿಕ ರಾಜ್ಯದಲ್ಲಿ ‘ಶಿವ’ ಪರ್ವ ಆರಂಭ? ಕೋಡಿಮಠ ಶ್ರೀಗಳ ಸ್ಫೋಟಕ ಭವಿಷ್ಯ!

ರಾಜ್ಯ ರಾಜಕಾರಣದಲ್ಲಿ ಸದಾ ಸಂಚಲನ ಮೂಡಿಸುವ ಹೆಸರು ಅಂದ್ರೆ ಅದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು (Kodi Mata Shree). ತಮ್ಮ ಒಗಟಿನ ಮಾತುಗಳ ಮೂಲಕವೇ ರಾಜ್ಯ, ದೇಶ ಹಾಗೂ ಜಾಗತಿಕ ಮಟ್ಟದ ಆಗುಹೋಗುಗಳನ್ನು ಕರಾರುವಾಕ್ಕಾಗಿ ನುಡಿಯುವ ಕೋಡಿಮಠ ಶ್ರೀಗಳು, ಇದೀಗ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮತ್ತೊಮ್ಮೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

Kodi Mata Shree predicts major Karnataka political change after Sankranti 2026, DK Shivakumar CM possibility

ಸಂಕ್ರಾಂತಿ ಹಬ್ಬದ (Sankranti 2026) ನಂತರ ರಾಜ್ಯದಲ್ಲಿ ದೊಡ್ಡ ಮಟ್ಟದ ರಾಜಕೀಯ ಕ್ರಾಂತಿಯಾಗಲಿದೆಯೇ? ಎಂಬ ಪ್ರಶ್ನೆಗೆ ಶ್ರೀಗಳ ಮಾತುಗಳು ಪುಷ್ಟಿ ನೀಡುವಂತಿವೆ.

Kodi Mata Shree – ಸಂಕ್ರಾಂತಿಗೆ ಬದಲಾಗುತ್ತಾ ಸಿಎಂ ಕುರ್ಚಿ?

ಮಂಗಳವಾರ ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಶ್ರೀಗಳು, 2026ರ ಜನವರಿ ಸಂಕ್ರಾಂತಿಯ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಗಳಾಗಲಿವೆ ಎಂಬ ಸುಳಿವು ನೀಡಿದ್ದಾರೆ. ಬಹಳ ದಿನಗಳಿಂದ ನಡೆಯುತ್ತಿರುವ ನಾಯಕತ್ವದ ಗೊಂದಲಕ್ಕೆ ಈ ಸಂಕ್ರಾಂತಿಯ ಬಳಿಕ ತೆರೆ ಬೀಳಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

‘ಶಿವ’ನ ಮುಡಿಗೇರಿದ ಹೂವು ಪಾದ ಸೇರಲೇಬೇಕು!

ಶ್ರೀಗಳ ಭವಿಷ್ಯವಾಣಿಯಲ್ಲಿ (Kodi Mata Shree) ಅಡಗಿರುವ ಮರ್ಮವೇ ರೋಚಕವಾಗಿದೆ. ಅವರು ಬಳಸಿದ “ಶಿವನ ಮುಡಿ ಸೇರಿದ ಹೂವು ಶಿವನ ಪಾದಕ್ಕೆ ಬೀಳಲೇಬೇಕು” ಎಂಬ ಸಾಲು ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇಲ್ಲಿ ‘ಶಿವ’ ಎಂಬ ಪದಪ್ರಯೋಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ನೇರವಾಗಿ ಸಂಬಂಧಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಂದರೆ, ಸಂಕ್ರಾಂತಿ ನಂತರ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿಯುವುದು ಖಚಿತವೇ? ಎಂಬ ಪ್ರಶ್ನೆ ಎದ್ದಿದೆ. ವಿಶೇಷವೆಂದರೆ, ಕೇವಲ ಎರಡು ದಿನಗಳ ಹಿಂದಷ್ಟೇ ಗೃಹ ಸಚಿವರಾದ ಜಿ. ಪರಮೇಶ್ವರ್ ಅವರು ಕೋಡಿಮಠಕ್ಕೆ ಭೇಟಿ ನೀಡಿ ಶ್ರೀಗಳೊಡನೆ ಸುದೀರ್ಘ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಶ್ರೀಗಳು ನೀಡಿರುವ ಈ ಹೇಳಿಕೆ ರಾಜ್ಯ ಕಾಂಗ್ರೆಸ್ ವಲಯದಲ್ಲಿ ನಡುಕ ಹುಟ್ಟಿಸಿದೆ.

Kodi Mata Shree – ಹಿಂದಿನ ಭವಿಷ್ಯ ನಿಜವಾಗುತ್ತಾ?

ಕೋಡಿಮಠ ಶ್ರೀಗಳು ಈ ಮಾತನ್ನು ಹೇಳುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಜೂನ್ ತಿಂಗಳಿನಲ್ಲೇ ಅವರು ಸಂಕ್ರಾಂತಿಗೆ ಬದಲಾವಣೆ ಪರ್ವ ಆರಂಭವಾಗಲಿದೆ ಎಂದಿದ್ದರು. ಅಕ್ಟೋಬರ್ 1ರಂದು ಮಾತನಾಡಿದ್ದ ಶ್ರೀಗಳು, “2026ರ ಸಂಕ್ರಾಂತಿಯವರೆಗೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ಕುರ್ಚಿಗೆ ಯಾವುದೇ ಕಂಟಕವಿಲ್ಲ. ಆದರೆ, ಅದರ ನಂತರ ರಾಜಕೀಯ ವಿಪ್ಲವ ನಡೆದು ಪಟ್ಟ ಬದಲಾಗಲಿದೆ” ಎಂದು ಸ್ಪಷ್ಟಪಡಿಸಿದ್ದರು. ಈಗ ಅದೇ ಮಾತನ್ನು ಪುನರುಚ್ಚರಿಸುವ ಮೂಲಕ, ಜನವರಿ ನಂತರದ ಬದಲಾವಣೆಯನ್ನು ಅವರು ಖಚಿತಪಡಿಸಿದಂತಿದೆ.

Kodi Mata Shree predicts major Karnataka political change after Sankranti 2026, DK Shivakumar CM possibility

Kodi Mata Shree – ಯುಗಾದಿ ನಂತರ ಕಾದಿದೆ ಕಂಟಕ!

ಕೇವಲ ರಾಜ್ಯ ರಾಜಕಾರಣವಷ್ಟೇ ಅಲ್ಲ, ರಾಷ್ಟ್ರ ಮಟ್ಟದ ವಿದ್ಯಮಾನಗಳ ಬಗ್ಗೆಯೂ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಮುಂಬರುವ ಹಿಂದೂ ಹೊಸ ವರ್ಷವಾದ ‘ಯುಗಾದಿ’ (Yugadi) ನಂತರ ಕೇಂದ್ರದಲ್ಲಿ ಮತ್ತು ದೇಶದಲ್ಲಿ ಸಮಸ್ಯೆಗಳು ಉಲ್ಬಣವಾಗಲಿವೆ. ದೆಹಲಿಯಲ್ಲಿ ನಡೆದಂತಹ ಬಾಂಬ್ ಸ್ಫೋಟಗಳ ಮಾದರಿಯಲ್ಲೇ, ದೇಶದಲ್ಲಿ ಇನ್ನೂ ಅನೇಕ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಆತಂಕಕಾರಿ ಭವಿಷ್ಯ ನುಡಿದಿದ್ದಾರೆ. Read this also : ನವೆಂಬರ್ 21ರ ಸಿಎಂ ಚರ್ಚೆ, ಸಿದ್ದರಾಮಯ್ಯ ಕೆಂಡಾಮಂಡಲ, ಕಾಂಗ್ರೆಸ್‌ನಲ್ಲಿ ತೀವ್ರ ಸಂಚಲನ…!

ಒಟ್ಟಿನಲ್ಲಿ, ಹೊಸ ವರ್ಷ ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯವನ್ನು ತೆರೆಯುವ ಲಕ್ಷಣಗಳು ದಟ್ಟವಾಗಿವೆ. “ಶಿವನ ಪಾದ ಸೇರುವ ಹೂವು” ಯಾರ ಮುೇಲೆ ಪ್ರಭಾವ ಬೀರಲಿದೆ ಮತ್ತು ಸಂಕ್ರಾಂತಿ ನಂತರ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular