ಇಂದಿನ ಫಾಸ್ಟ್ ಫುಡ್ ಜಮಾನದಲ್ಲಿ ಪ್ರೀತಿ ಕೂಡ ಇನ್ಸ್ಟಂಟ್ ಆಗಿಬಿಟ್ಟಿದೆ. ಅದರಲ್ಲೂ ಈ ಡೇಟಿಂಗ್ ಆ್ಯಪ್ (Dating App) ಹಾವಳಿ ಶುರುವಾದ ಮೇಲಂತೂ, ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಭಾರತದಲ್ಲಿ ಮದುವೆ ಎಂಬುದು ಪವಿತ್ರ ಬಂಧ. ಆದರೆ, ಇಲ್ಲೂ ಕೂಡ ಪಾಶ್ಚಿಮಾತ್ಯ ಸಂಸ್ಕೃತಿ ನಿಧಾನವಾಗಿ ಆವರಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಿದೇಶದಲ್ಲಿ ನಡೆದ ಘಟನೆಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral News) ಆಗಿದ್ದು, ಓದಿದರೆ ನೀವು ಬೆಚ್ಚಿಬೀಳೋದು ಖಂಡಿತ!

ಹೌದು, ಕೇವಲ ನಾಲ್ಕು ಗಂಟೆಯ ಪರಿಚಯದಲ್ಲಿ ಮದುವೆಯಾಗಿ, ಕೇವಲ 18 ದಿನಗಳಲ್ಲಿ ತನ್ನ ಜೀವನದ ಸಂಪಾದನೆಯನ್ನೆಲ್ಲ ಕಳೆದುಕೊಂಡು ಬೀದಿಗೆ ಬಂದ ವ್ಯಕ್ತಿಯೊಬ್ಬನ ಕರುಣಾಜನಕ ಕಥೆ ಇದು.
Dating App – ಚೀನಾದಲ್ಲಿ ನಡೆದ ವಿಚಿತ್ರ ಘಟನೆ
ಈ ಆಘಾತಕಾರಿ ಘಟನೆ ನಡೆದಿರುವುದು ಚೀನಾದ ಹೆಂಗ್ಯಾಂಗ್ ನಗರದಲ್ಲಿ. ಅಲ್ಲಿನ 40 ವರ್ಷದ ಹುವಾಂಗ್ ಝೊಂಗ್ಚೆಂಗ್ (Huang Zhongcheng) ಎಂಬುವರೇ ಈ ವಂಚನೆಗೆ ಒಳಗಾದ ವ್ಯಕ್ತಿ. ಹುವಾಂಗ್ ಅವರಿಗೆ ಬ್ಲೈಂಡ್ ಡೇಟ್ ಆ್ಯಪ್ ಒಂದರಲ್ಲಿ ಮಹಿಳೆಯ ಪರಿಚಯವಾಗಿದೆ. ಆಕೆಯ ಮಾತು, ಅಂದಕ್ಕೆ ಮರುಳಾದ ಹುವಾಂಗ್, ಪರಿಚಯವಾದ ಕೇವಲ 4 ಗಂಟೆಯಲ್ಲೇ ಆಕೆಯನ್ನು ಮದುವೆಯಾಗಿದ್ದಾರೆ. ಆದರೆ, ಆತುರಗಾರನಿಗೆ ಬುದ್ಧಿ ಮಟ್ಟ ಎಂಬ ಗಾದೆ ಮಾತಿನಂತೆ, ಅವರ ಈ ನಿರ್ಧಾರವೇ ಈಗ ಅವರ ಪ್ರಾಣಕ್ಕೆ ಕಂಟಕವಾಗಿದೆ.
Dating App – 18 ದಿನದಲ್ಲಿ 30 ಲಕ್ಷ ಗುಡಿಸಿ ಗುಂಡಾಂತರ!
ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ದಿನ ಕಳೆದಂತೆ ಪತ್ನಿಯ ಅಸಲಿ ಮುಖ ಬಯಲಾಗಿದೆ. ಪ್ರೀತಿಯ ಸೋಗಿನಲ್ಲಿ ಪತಿಯನ್ನು ನಂಬಿಸಿ, ಆತನ ಬಳಿ ಇದ್ದ ಹಣವನ್ನೆಲ್ಲ ದೋಚಲು ಶುರು ಮಾಡಿದ್ದಾಳೆ. ವರದಿಗಳ ಪ್ರಕಾರ, ಹುವಾಂಗ್ ಪ್ರೀತಿಯ ಅಮಲಿನಲ್ಲಿ ಆಕೆ ಕೇಳಿದ್ದೆಲ್ಲವನ್ನೂ ನೀಡಿದ್ದಾರೆ. ಕೇವಲ 18 ದಿನಗಳಲ್ಲಿ ಬರೋಬ್ಬರಿ 30 ಲಕ್ಷ ರೂಪಾಯಿಗಳನ್ನು ಆಕೆಗೆ ನೀಡಿದ್ದಾರೆ. ಆದರೆ, ಆಕೆ ಆ ಹಣವನ್ನೆಲ್ಲ ತನ್ನ ಸ್ವಂತಕ್ಕೆ ದುರುಪಯೋಗ ಮಾಡಿಕೊಂಡು, ಪತಿಯನ್ನು ಸಾಲದ ಶೂಲಕ್ಕೆ ತಳ್ಳಿದ್ದಾಳೆ. ಹುವಾಂಗ್ ತಮ್ಮ ಇಷ್ಟು ವರ್ಷದ ಉಳಿತಾಯ ಮತ್ತು ಹೂಡಿಕೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ.
Dating App – ಮೊದಲ ರಾತ್ರಿಯ ನಂತರ ಬದಲಾಯ್ತು ಬಣ್ಣ
ಈ ಬಗ್ಗೆ ನೊಂದ ಪತಿ ಹುವಾಂಗ್ ಹೇಳುವ ಮಾತುಗಳು ಕಣ್ಣೀರು ತರಿಸುವಂತಿದೆ. “ಮದುವೆಯ ನಂತರ ನಾವಿಬ್ಬರು ಹೋಟೆಲ್ ಒಂದರಲ್ಲಿ ಉಳಿದುಕೊಂಡೆವು. ಅದು ನಮ್ಮಿಬ್ಬರ ಮೊದಲ ಹಾಗೂ ಕೊನೆಯ ಪ್ರೀತಿಯ ಕ್ಷಣ. ಆ ರಾತ್ರಿ ಕಳೆದ ನಂತರ ಆಕೆಯ ನಡವಳಿಕೆ ಸಂಪೂರ್ಣ ಬದಲಾಯಿತು. ಗಂಡ-ಹೆಂಡತಿಯ ನಡುವೆ ಇರಬೇಕಾದ ಅನ್ಯೋನ್ಯತೆ ಅಲ್ಲಿರಲಿಲ್ಲ, ಕೇವಲ ಹಣದ ಲೆಕ್ಕಾಚಾರ ಮಾತ್ರವಿತ್ತು,” ಎಂದು ಹುವಾಂಗ್ ಅಳಲು ತೋಡಿಕೊಂಡಿದ್ದಾರೆ. Read this also : ಡೇಟಿಂಗ್ ಆ್ಯಪ್ನಲ್ಲಿ ‘ಮಾಯಾಂಗಿನಿ’ ಗಾಳ : ₹1.29 ಕೋಟಿ ಕಳೆದುಕೊಂಡ ಬೆಂಗಳೂರಿನ ಅಮಾಯಕರು..!

Dating App – ದುರಾಸೆಗೆ ಬಲಿಯಾದ ಅಮಾಯಕ ಪತಿ
ಹಣಕ್ಕಾಗಿ ಪ್ರತಿದಿನ ಆಕೆ ಜಗಳ ತೆಗೆಯುತ್ತಿದ್ದಳು ಎಂದು ಹುವಾಂಗ್ ಹೇಳಿದ್ದಾರೆ. “ನಾನು ಹಣ ಸಂಪಾದಿಸಲು ಊರೂರು ಅಲೆಯುತ್ತಿದ್ದೆ. ಆದರೆ ಆಕೆ ಹಣಕ್ಕಾಗಿ ಮಾತ್ರ ನನ್ನೊಂದಿಗೆ ಮಾತನಾಡುತ್ತಿದ್ದಳು. ಈಗ ನನ್ನ ಬಳಿ ಬಿಡಿಗಾಸಿಲ್ಲದಾಗ, ಆಕೆ ಮಾನಸಿಕವಾಗಿ ಹಿಂಸಿಸಲು ಶುರು ಮಾಡಿದ್ದಾಳೆ. ಮುಂದೆ ಜೀವನ ನಡೆಸುವುದು ಹೇಗೆ ಎಂಬ ಭಯ ಶುರುವಾಗಿದೆ,” ಎಂದು ಹುವಾಂಗ್ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ, ಆನ್‌ಲೈನ್ ಡೇಟಿಂಗ್ ಮತ್ತು ಕ್ಷಣಾರ್ಧದ ಆಕರ್ಷಣೆಗೆ ಒಳಗಾಗಿ ಮದುವೆಯಾಗುವ ಮುನ್ನ ಸಾವಿರ ಬಾರಿ ಯೋಚಿಸಬೇಕು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
