ಪ್ರೀತಿ ಅಂದ್ರೆ ಕೇವಲ ಐ ಲವ್ ಯೂ ಹೇಳೋದಲ್ಲ, ಗುಲಾಬಿ ಹೂವು ಕೊಡೋದಲ್ಲ ಅಥವಾ ದುಬಾರಿ ಗಿಫ್ಟ್ ಕೊಟ್ಟು ಸರ್‌ಪ್ರೈಸ್ ಮಾಡೋದಲ್ಲ. ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಲ್ಲುವುದು, (True Love) ಸಣ್ಣ ಸಣ್ಣ ವಿಷಯಗಳಲ್ಲೂ ಸಂಗಾತಿಯ ಬಗ್ಗೆ ಕಾಳಜಿ ವಹಿಸುವುದು ನಿಜವಾದ ಪ್ರೀತಿಯ ಲಕ್ಷಣ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋವೊಂದು ಈ ಮಾತಿಗೆ ಸಾಕ್ಷಿಯಾಗಿದೆ. ಇದನ್ನು ನೋಡಿದ್ರೆ ನಿಮ್ಮ ಮನಸ್ಸು ಕೂಡ ತುಂಬಿ ಬರುವುದು ಗ್ಯಾರಂಟಿ.

True Love – ವೈರಲ್ ಆಗಿದ್ದೇಕೆ ಈ ಫೋಟೋ?
ಸಾಮಾನ್ಯವಾಗಿ ನಾವು ಬಸ್ಸಿನಲ್ಲಿ ಪ್ರಯಾಣಿಸುವಾಗ ಕಿಟಕಿ ಪಕ್ಕದ ಸೀಟು ಸಿಕ್ಕರೆ ಹಾಯಾಗಿ ನಿದ್ದೆ ಮಾಡುತ್ತೇವೆ. ಆದರೆ ಹಗಲು ಹೊತ್ತಿನಲ್ಲಿ ಕಿಟಕಿಯಿಂದ ಬರುವ ಸೂರ್ಯನ ಬಿಸಿಲು ನಿದ್ದೆಗೆ ಭಂಗ ತರುತ್ತದೆ. ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿಯ ನಿದ್ದೆಗೆ ಅದೇ ಬಿಸಿಲು ಅಡ್ಡಿಯಾಗಬಾರದು ಎಂದು ಮಾಡಿರುವ ಕೆಲಸ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ರೆಡ್ಡಿಟ್ (Reddit) ಬಳಕೆದಾರರೊಬ್ಬರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಜನದಟ್ಟಣೆಯಿಂದ ತುಂಬಿದ್ದ ಬಸ್ಸಿನಲ್ಲಿ ವ್ಯಕ್ತಿಯೊಬ್ಬರ ಪತ್ನಿ ಕಿಟಕಿ ಪಕ್ಕ ಕುಳಿತು ನಿದ್ದೆಗೆ ಜಾರಿದ್ದಾರೆ. ಈ ವೇಳೆ ಆಕೆಯ ಮುಖಕ್ಕೆ ನೇರವಾಗಿ ಸೂರ್ಯನ ಕಿರಣಗಳು ಬೀಳುತ್ತಿದ್ದವು. ಇದನ್ನು ಗಮನಿಸಿದ ಪತಿ, ತನ್ನ ಹೆಂಡತಿಯ ನಿದ್ದೆ ಹಾಳಾಗಬಾರದು ಎಂದು ಬರೋಬ್ಬರಿ 40 ನಿಮಿಷಗಳ ಕಾಲ ಕಿಟಕಿಯ ಪರದೆಯನ್ನು ತನ್ನ ಕೈಯಿಂದ ಎಳೆದು ಹಿಡಿದುಕೊಂಡೇ ಕುಳಿತಿದ್ದಾರೆ!
True Love – ನೆಟ್ಟಿಗರು ಹೇಳಿದ್ದೇನು?
r/Twentiesindia ಎಂಬ ರೆಡ್ಡಿಟ್ ಖಾತೆಯಲ್ಲಿ ಈ ಫೋಟೋ ಹಂಚಿಕೊಳ್ಳಲಾಗಿದ್ದು, “ಪ್ರಯತ್ನಗಳು ನಿಜವಾಗಿಯೂ ಭಾರತೀಯ ಪುರುಷರಿಗೆ ತಮಾಷೆಯೇ?” ಎಂಬ ಶೀರ್ಷಿಕೆ ನೀಡಲಾಗಿತ್ತು. ಆದರೆ ಈ ಫೋಟೋ ನೋಡಿದ ನೆಟ್ಟಿಗರು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ.

- ಒಬ್ಬರು, “ಇಂದಿನ ದಿನಗಳಲ್ಲಿ ಸಣ್ಣ ಪುಟ್ಟ ಕಾರಣಕ್ಕೆ ದೂರಾಗುವ ದಂಪತಿಗಳ ನಡುವೆ, ಕಷ್ಟ ಸುಖದಲ್ಲಿ ಹೀಗೆ ಜೊತೆಯಾಗಿ ನಿಲ್ಲುವ ಇಂತಹ ಜೋಡಿಯನ್ನು ನೋಡಿದಾಗ ಮನಸ್ಸಿಗೆ ಖುಷಿಯಾಗುತ್ತದೆ,” ಎಂದಿದ್ದಾರೆ. Read this also : ಲಂಡನ್‌ನಿಂದ ಬಂದವನಿಗೆ ಮಸಣವೇ ಗತಿಯಾಯ್ತು! ಪ್ರೀತಿಸಿದವಳು ಸಿಗಲಿಲ್ಲವೆಂದು ಪ್ರಾಣ ಬಿಟ್ಟ ಟೆಕ್ಕಿ..!
- ಮತ್ತೊಬ್ಬರು, “ಹೆಣ್ಣಿಗೆ ಇದಕ್ಕಿಂತ ಇನ್ನೇನು ಬೇಕು? ಪತಿಯ ಈ ಕಾಳಜಿಯೇ ಆಕೆಗೆ ದೊಡ್ಡ ಉಡುಗೊರೆ,” ಎಂದು ಬರೆದಿದ್ದಾರೆ.
- ಇನ್ನೊಬ್ಬ ಬಳಕೆದಾರರು, “ಇಂತಹ ನಿಷ್ಕಲ್ಮಶ ಪ್ರೀತಿಯನ್ನು ಸಾರ್ವಜನಿಕವಾಗಿ ನೋಡುವುದು ಬಲು ಅಪರೂಪ,” ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ : Click Here
True Love – ಪ್ರೀತಿ ಅಂದ್ರೆ ಇದೇ ಅಲ್ವಾ?
ಗಂಡನಾದವನು ಮಡದಿಯ ನೋವು ನಲಿವಿನಲ್ಲಿ ಜೊತೆಯಾಗಬೇಕು, ಆಕೆಯ ಕಣ್ಣಲ್ಲಿ ನೀರು ಬರದಂತೆ ನೋಡಿಕೊಳ್ಳಬೇಕು ಎಂದು ಪ್ರತಿ ಹೆಣ್ಣು ಬಯಸುತ್ತಾಳೆ. ಈ ಫೋಟೋದಲ್ಲಿರುವ ವ್ಯಕ್ತಿ ಅದನ್ನೇ ಮಾಡಿ ತೋರಿಸಿದ್ದಾರೆ. ಅವರ ಈ ಸರಳ ಆದರೆ ಸುಂದರವಾದ ನಡೆ, ನಿಜವಾದ ಪ್ರೀತಿ ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ.
