Video : ಥ್ರಿಲ್ ಅನುಭವಿಸಲು ಹೋಗಿ ನಡುಗಿದ ಪ್ರವಾಸಿಗರು! 120 ಅಡಿ ಎತ್ತರದಲ್ಲಿ ಊಟ ಮಾಡಲು ಹೋದವರಿಗೆ ಕಾದಿತ್ತು ಶಾಕ್ – ವಿಡಿಯೋ ನೋಡಿ

ಆಕಾಶದಲ್ಲಿ ತೇಲುತ್ತಾ ಊಟ ಮಾಡಬೇಕು, ಅಲ್ಲಿಂದ ಪ್ರಕೃತಿಯ ಸೌಂದರ್ಯ ನೋಡಬೇಕು ಅನ್ನೋದು ಇತ್ತೀಚಿನ ಹೊಸ ಟ್ರೆಂಡ್. ಆದರೆ, ಆ ಮಜಾನೇ ಪ್ರವಾಸಿಗರ ಪಾಲಿಗೆ ಸಜೆಯಾದ ಘಟನೆ ಕೇರಳದಲ್ಲಿ ನಡೆದಿದೆ. ಎಂಜಾಯ್ ಮಾಡಲು ಹೋದವರು ಬರೋಬ್ಬರಿ 120 ಅಡಿ ಎತ್ತರದಲ್ಲಿ ಸಿಕ್ಕಿಹಾಕಿಕೊಂಡು, ‘ನಮ್ಮನ್ನ ಕಾಪಾಡಿ’ ಎಂದು ಅಂಗಲಾಚುವಂತಾಗಿದೆ.

Tourists stranded on a sky dining platform 120 feet above ground after a crane malfunction in Kerala, with rescue operations underway - Viral video

ಊಟ ಮಾಡಲು ಮೇಲೆ ಹೋದ ಕ್ರೇನ್, ತಾಂತ್ರಿಕ ದೋಷದಿಂದ (Technical Glitch) ಅಲ್ಲಿಯೇ ನಿಂತ ಪರಿಣಾಮ, ಪ್ರವಾಸಿಗರು ಜೀವ ಕೈಯಲ್ಲಿ ಹಿಡಿದುಕೊಂಡು ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲೇ ನೇತಾಡಿದ ಆತಂಕಕಾರಿ ಘಟನೆ ಇಡುಕ್ಕಿಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

Video – ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಕೇರಳದ ಮುನ್ನಾರ್ (Munnar) ಸಮೀಪದ ಅನಾಚಲ್ ಎಂಬಲ್ಲಿ ಖಾಸಗಿ ‘ಸ್ಕೈ ಡೈನಿಂಗ್’ (Sky-Dining) ರೆಸ್ಟೋರೆಂಟ್ ಇದೆ. ಕ್ರೇನ್ ಮೂಲಕ ಮೇಲಕ್ಕೆತ್ತುವ ಈ ಹೋಟೆಲ್‌ನಲ್ಲಿ ಊಟ ಮಾಡಲು ಶುಕ್ರವಾರ ಸಂಜೆ ಪ್ರವಾಸಿಗರು ತೆರಳಿದ್ದರು. ಎಲ್ಲರೂ ಖುಷಿ ಖುಷಿಯಾಗಿ 120 ಅಡಿ ಎತ್ತರಕ್ಕೆ ಹೋದರು. ಆದರೆ ವಿಧಿ ಆಟವೇ ಬೇರೆಯಿತ್ತು. ಇದ್ದಕ್ಕಿದ್ದಂತೆ ಕ್ರೇನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಅದು ಅಲ್ಲಿಯೇ ಜಾಮ್ ಆಗಿದೆ!

Video – ಗಾಳಿಯಲ್ಲಿ ತೂಗುಬಿದ್ದ ಪ್ರವಾಸಿಗರು!

ನೆಲದಿಂದ ಬರೋಬ್ಬರಿ 120 ಅಡಿ ಎತ್ತರ.. ಕೆಳಗೆ ನೋಡಿದರೆ ಆಳವಾದ ಕಣಿವೆ.. ಇತ್ತ ಕ್ರೇನ್ ಕೆಳಗೂ ಇಳಿಯುತ್ತಿಲ್ಲ, ಮೇಲಕ್ಕೂ ಹೋಗುತ್ತಿಲ್ಲ. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಪ್ರವಾಸಿಗರು ಪ್ರಾಣಭಯದಲ್ಲೇ ಆಕಾಶದಲ್ಲಿ ತೂಗುಹಾಕಿಕೊಂಡಿದ್ದರು. “ಅಯ್ಯೋ ನಮ್ಮನ್ನು ಕಾಪಾಡಿ” ಎಂದು ಪ್ರವಾಸಿಗರು ಬಿಕ್ಕಿಬಿಕ್ಕಿ ಅಳುತ್ತಿರುವ ದೃಶ್ಯ ಎಂಥವರ ಎದೆಯನ್ನೂ ನಡುಗಿಸುವಂತಿದೆ. ಸದ್ಯ ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ (Viral Video) ಆಗಿದೆ. Read this also : ರೈಲಿನಲ್ಲಿ ಸೀಟ್ ವಿಚಾರಕ್ಕೆ ರಂಪಾಟ: “ಪಟ್ನಾ ಬರಲಿ, ನಿನ್ನನ್ನು ಪೀಸ್ ಪೀಸ್ ಮಾಡ್ತೀನಿ” ಎಂದು ಪ್ರಯಾಣಿಕನಿಗೆ ಮಹಿಳೆ ವಾರ್ನಿಂಗ್!

Video ಏನಿದು ಸ್ಕೈ ಡೈನಿಂಗ್?

ಕೆಲವು ತಿಂಗಳ ಹಿಂದೆಯಷ್ಟೇ ಇಲ್ಲಿ ಸ್ಕೈ-ಡೈನಿಂಗ್ ಆರಂಭವಾಗಿತ್ತು. ಇದರಲ್ಲಿ ಒಂದೇ ಬಾರಿಗೆ 16 ಜನ ಕುಳಿತುಕೊಳ್ಳಬಹುದು. ಬೃಹತ್ ಕ್ರೇನ್ ಇವರನ್ನು ಸುಮಾರು ಅರ್ಧ ಗಂಟೆಗಳ ಕಾಲ ಕಣಿವೆಯ ಮೇಲೆ ಎತ್ತರಕ್ಕೆ ಕರೆದೊಯ್ಯುತ್ತದೆ. ಅಲ್ಲಿ ಕುಳಿತು ಪ್ರಕೃತಿ ಸೌಂದರ್ಯವನ್ನು ಆಸ್ವಾಧಿಸುತ್ತಾ ಊಟ ಮಾಡಬಹುದು. ಆದರೆ ಶುಕ್ರವಾರ ಯಾಂತ್ರಿಕ ದೋಷದಿಂದ (Mechanical Failure) ಕ್ರೇನ್‌ನ ಫ್ಯೂಸ್ ಹೋದ ಕಾರಣ, ಪ್ಲಾಟ್‌ಫಾರ್ಮ್ ಅನ್ನು ಕೆಳಗೆ ಇಳಿಸಲು ನಿರ್ವಾಹಕರಿಗೆ ಸಾಧ್ಯವಾಗಲಿಲ್ಲ.

Tourists stranded on a sky dining platform 120 feet above ground after a crane malfunction in Kerala, with rescue operations underway - Viral video

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Video – ರಕ್ಷಣಾ ಕಾರ್ಯ ಹೇಗಿದೆ?

ವಿಷಯ ತಿಳಿದ ತಕ್ಷಣ ಮುನ್ನಾರ್‌ನಿಂದ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಹಗ್ಗಗಳನ್ನು ಬಳಸಿಕೊಂಡು, ಸ್ಕೈ-ಡೈನಿಂಗ್ ಪ್ಲಾಟ್‌ಫಾರ್ಮ್ ಮೇಲೆ ಸಿಕ್ಕಿಹಾಕಿಕೊಂಡಿರುವ ಪ್ರವಾಸಿಗರನ್ನು ಒಬ್ಬೊಬ್ಬರನ್ನಾಗಿ ಕೆಳಕ್ಕೆ ಇಳಿಸಲು ಹರಸಾಹಸ ಪಡುತ್ತಿದ್ದಾರೆ. ಮತ್ತೊಂದೆಡೆ ಇಂಜಿನಿಯರ್‌ಗಳು ಕ್ರೇನ್ ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ.

ಒಟ್ಟಿನಲ್ಲಿ ಮೋಜು ಮಸ್ತಿಗಾಗಿ ಹೋದವರು ಪ್ರಾಣದ ಹಂಗು ತೊರೆದು ವಾಪಸ್ ಬರುವಂತಾಗಿದೆ. ಸಾಹಸಕ್ಕೆ ಹೋಗುವ ಮುನ್ನ ಎಚ್ಚರ ವಹಿಸುವುದು ಎಷ್ಟು ಮುಖ್ಯ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

Leave a Comment

Your email address will not be published. Required fields are marked *

Scroll to Top