HomeStateಬನಶಂಕರಿ ದೇವಿಗೆ ಶಾಕ್ ಆಗುವಂತ ಬೇಡಿಕೆ ಪತ್ರ ಬರೆದ ಹುಡುಗಿ, ವೈರಲ್ ಆದ ಪತ್ರ….!

ಬನಶಂಕರಿ ದೇವಿಗೆ ಶಾಕ್ ಆಗುವಂತ ಬೇಡಿಕೆ ಪತ್ರ ಬರೆದ ಹುಡುಗಿ, ವೈರಲ್ ಆದ ಪತ್ರ….!

ಬೆಂಗಳೂರಿನ ಪ್ರಸಿದ್ದ ಬನಶಂಕರಿ ದೇವಾಲಯ ತುಂಬಾನೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಇದೀಗ ಈ ದೇವಸ್ಥಾನದ ಹುಂಡಿಯಲ್ಲಿ ಯುವತಿಯೊಬ್ಬಳು ತನ್ನ ಬೇಡಿಕೆಯನ್ನು ಪತ್ರದಲ್ಲಿ ಬರೆದು ಹಾಕಿದ್ದಾಳೆ. ಈ ಪತ್ರದಲ್ಲಿ ತಾನು ಮದುವೆಯಾಗುವ ಹುಡುಗ ಹೇಗಿರಬೇಕೆಂದು ಬರೆದಿದ್ದಾಳೆ. ನಾನು ಬಯಸಿದ ಹುಡುಗ ಗಂಡನಾಗಿ ಬರುವಂತೆ ಆಶಿರ್ವಾದ ಮಾಡುವಂತೆ ದೇವರಲ್ಲಿ ಬೇಡಿಕೆಯಿಟ್ಟು ಪತ್ರವನ್ನು ಹುಂಡಿಯಲ್ಲಿ ಹಾಕಿದ್ದಾಳೆ.

Bangalore Banashankari temple 0

ಬೆಂಗಳೂರಿನ ಬನಶಂಕರಿ ದೇವಾಸ್ತಾನದ ಹುಂಡಿಯಲ್ಲಿ ಯುವತಿ ತಾನು ಮದುವೆಯಾಗುವ ಹುಡುಗ ಹೇಗಿರಬೇಕು. ಜೊತೆಗೆ ತಾನು ಈ ಹಿಂದೆ ಪ್ರೀತಿ ಮಾಡುತ್ತಿದ್ದ ಹುಡುಗನ ಬಗ್ಗೆ ಸಹ ಬರೆದಿದ್ದಾಳೆ. ಇನ್ನೂ ಆ ಯುವತಿ ಪತ್ರದಲ್ಲಿ ಏನು ಬರೆದಿದ್ದಾಳೆ ಎಂಬುದನ್ನು ನೀವು ಓದಿ..

”ಇವರಿಗೆ,

ಶ್ರೀ ಬನಶಂಕರಿ ಅಮ್ಮ ಬೆಂಗಳೂರು,

ಅಮ್ಮ ನಾನು ತಪ್ಪು ಮಾಡಿದಿನಿ. ಹಿಂದೆ ಪತ್ರ ಬರೆದಾಗ ನಾನು ಗೋಪಿನಾಥ ಅಂಬು ಬಿಟ್ಟರೆ ಬೇರೆ ಯಾರನ್ನೂ ಮದುವೆ ಆಗಬಾರದು ಅಂತ ಬರೆದಿದ್ದೆ. ಆದರೆ ಈಗ ಅವನು ನನಗೆ ಬೇಡ. ಆದಷ್ಟು ಬೇಗ ಮುಂದಿನ ವರ್ಷ 2024ರಲ್ಲಿ ನನ್ನ ಮದುವೆ ಒಳ್ಳೆಯ ಹೆಸರು, ಕೀರ್ತಿ ಹೊಂದಿರುವ ಗುಣವಂತ, ಸಿರಿವಂತ, ಹೃದಯವಂತ, ಐಶ್ವರ್ಯವಂತ, ಬುದ್ಧಿವಂತ, ಯಾವ ಹೀರೋಗಿಂತ ಕಡಿಮೆ ಇರದ, ಚೆನ್ನಾಗಿರುವ, ಐಎಎಸ್ ಅಧಿಕಾರಿ ಜೊತೆ ನನ್ನ ಮದುವೆ ಮಾಡಿಸು. ‘ನನ್ನ ಗಂಡ ಬೇರೆ ಯಾವ ಹೆಂಗಸರನ್ನು ಕೆಟ್ಟ ದೃಷ್ಟಿಯಲ್ಲಿ ನೋಡಬಾರದು. ನನ್ನ ಗಂಡ ನನ್ನ ತುಂಬಾ ಚೆನ್ನಾಗಿ ಪ್ರೀತಿಯಿಂದ ನೋಡಿಕೊಳ್ಳಬೇಕು. ನಾನಂದ್ರ ಅವರ ಜೀವ ಆಗಿರಬೇಕು. ನಾವಿಬ್ಬರೂ ನೂರು ಕಾಲ ಮಕ್ಕಳು ಮೊಮ್ಮಕ್ಕಳ ಜೊತೆ ಜೀವನ ಮಾಡಬೇಕು. ನಮ್ಮಿಬ್ಬರಿಗೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡು. ಇಷ್ಟು ವರ್ಷ ಕಾದಿದ್ದಕ್ಕೆ ಒಳ್ಳೆ ಹುಡುಗ ಸಿಕ್ಕ ಅಂತ ಖುಷಿ ಆಗ್ಬೇಕು. ನನ್ನನ್ನು ಆಡಿಕೊಳ್ಳವರ ಬಾಯಿ ಮುಚ್ಚಿಸಬೇಕು’ ಅಂತ ಹುಡುಗಿ ಪತ್ರದಲ್ಲಿ ಬರೆದಿದ್ದಾಳೆ. ಈ ಪತ್ರ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Bangalore Banashankari temple

ಇನ್ನೂ ಅನೇಕರು ಇದೇ ಮಾದರಿಯಲ್ಲಿ ಪತ್ರಗಳನ್ನು ಬರೆದಿದ್ದಾರೆ. ಓರ್ವ ಭಕ್ತ ನನ್ನ ಮನೆಯಿಂದ ನನಗೆ ಬರಬೇಕಾಗಿರುವ ಆಸ್ತಿ ಯಾವುದೇ ಅಡ್ಡಿಯಿಲ್ಲದೇ ನನ್ನ ಕೈಗೆ ಸಿಗುವ ತರಹ ಮಾಡು ತಾಯಿ ಎಂದು ಪತ್ರ ಬರೆದಿದ್ದ. ಮತ್ತೋರ್ವ ಭಕ್ತ  ರಮ್ಯ ಹಾಗೂ ಉಮೇಶ್ ಇಬ್ಬರೂ ದೂರ ಆಗುವಂತೆ ಮಾಡು, ಅವರಿಂದ ಒಂದು ಸಂಸಾರ ನಾಶವಾಗಿದೆ, ಅವರು ಮಾಡಿದ ತಪ್ಪಿಗೆ ಶಿಕ್ಷೆ ಕೊಡಿ ಎಂದು ಬೇಡಿಕೊಂಡಿದ್ದ. ಅದೇ ಮಾದರಿಯಲ್ಲಿ ಮತ್ತೋರ್ವ ಭಕ್ತ ಅಮ್ಮ ತಾಯಿ ನಿನ್ನಲ್ಲಿ ನನ್ನೊಂದು ಕೋರಿಗೆ ನನ್ನ ಮಗ ಶಶಾಂಕ್ ಗೆ ಮತ್ತೆ ಮದುವೆ ಫಿಕ್ಸ್ ಆಗಿದೆ. ಎಂಗೇಜ್ ಮೆಂಟ್ ಆಗಿದೆ. ನನ್ನ ಮಗನನ್ನು ಮದುವೆಯಾಗುವ ಹುಡುಗಿ ರಮ್ಯ. ನನ್ನ ಮಗನ ಜೊತೆ ಚೆನ್ನಾಗಿರುವಂತೆ ಹಾಗೂ ಮನೆಯವರ ಜೊತೆಗೆ ಚೆನ್ನಾಗಿರುವಂತೆ ಮಾಡು ಎಂದು ಚೀಟಿ ಹಾಕಿದ್ದರು.

by Balajihttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

John Doe on TieLabs White T-shirt