PNB Recruitment 2025 – ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 2025ನೇ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಬರೋಬ್ಬರಿ 750 ಸ್ಥಳೀಯ ಬ್ಯಾಂಕ್ ಅಧಿಕಾರಿ (Local Bank Officer) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದ್ದು, ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ.
ಈ ಹುದ್ದೆಗೆ ಬೇಕಾದ ಅರ್ಹತೆ ಏನು? ವಯೋಮಿತಿ ಎಷ್ಟು? ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಸರಳವಾಗಿ ನೀಡಲಾಗಿದೆ. ಕೊನೆಯ ದಿನಾಂಕಕ್ಕೂ ಮುನ್ನವೇ ಅರ್ಜಿ ಸಲ್ಲಿಸಿ.

PNB Recruitment 2025 – ನೇಮಕಾತಿ ಮುಖ್ಯಾಂಶಗಳು
- ಸಂಸ್ಥೆಯ ಹೆಸರು: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)
- ಹುದ್ದೆಯ ಹೆಸರು: ಸ್ಥಳೀಯ ಬ್ಯಾಂಕ್ ಅಧಿಕಾರಿ (Local Bank Officer)
- ಒಟ್ಟು ಹುದ್ದೆಗಳು: 750
- ಉದ್ಯೋಗದ ಸ್ಥಳ: ಅಖಿಲ ಭಾರತ (ಭಾರತದಾದ್ಯಂತ ಶಾಖೆಗಳಲ್ಲಿ)
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01 ಡಿಸೆಂಬರ್ 2025
ಶೈಕ್ಷಣಿಕ ಅರ್ಹತೆ ಏನಿರಬೇಕು? (Education Qualification)
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಪೂರೈಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ನೀವು ಫ್ರೆಶರ್ ಆಗಿದ್ದರೂ ಸಹ ಧೈರ್ಯವಾಗಿ (PNB Recruitment 2025) ಅರ್ಜಿ ಹಾಕಬಹುದು.
ವಯೋಮಿತಿ ಮತ್ತು ಸಡಿಲಿಕೆ (Age Limit):
ಅಭ್ಯರ್ಥಿಯ ವಯಸ್ಸು ಕನಿಷ್ಠ 20 ವರ್ಷ ಮತ್ತು ಗರಿಷ್ಠ 30 ವರ್ಷದೊಳಗೆ ಇರಬೇಕು. ಸರ್ಕಾರದ ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆ ಕೂಡ ಲಭ್ಯವಿದೆ:
- OBC (NCL) ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ.
- SC/ST ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ.
- PwBD (ಅಂಗವಿಕಲ) ಅಭ್ಯರ್ಥಿಗಳಿಗೆ: 10 ವರ್ಷ ಸಡಿಲಿಕೆ.
ಕೈತುಂಬಾ ಸಂಬಳ (Salary Details):
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇತನ ಪ್ಯಾಕೇಜ್ ಸಿಗಲಿದೆ. ಅಧಿಸೂಚನೆಯ ಪ್ರಕಾರ, ಮಾಸಿಕ ಮೂಲ ವೇತನವೇ ₹48,480 ರಿಂದ ₹85,920 ರವರೆಗೆ ಇರಲಿದೆ. ಇದರ ಜೊತೆಗೆ ಬ್ಯಾಂಕ್ ನಿಯಮದನ್ವಯ ಇತರೆ (PNB Recruitment 2025) ಭತ್ಯೆಗಳು ಕೂಡ ಸಿಗಲಿವೆ.
ಅರ್ಜಿ ಶುಲ್ಕ ಎಷ್ಟು? (Application Fee)
- SC / ST / PwBD ಅಭ್ಯರ್ಥಿಗಳಿಗೆ: ₹59/- ಮಾತ್ರ.
- ಇತರೆ ಎಲ್ಲಾ ಅಭ್ಯರ್ಥಿಗಳಿಗೆ (General/OBC/EWS): ₹1180/-
- ಗಮನಿಸಿ: ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ? (Selection Process)
ಅಭ್ಯರ್ಥಿಗಳನ್ನು ಈ ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
- ಆನ್‌ಲೈನ್ ಲಿಖಿತ ಪರೀಕ್ಷೆ (Online Written Test)
- ದಾಖಲೆಗಳ ಪರಿಶೀಲನೆ (Document Verification)
- ಭಾಷಾ ಪ್ರಾವೀಣ್ಯತೆ ಪರೀಕ್ಷೆ (Language Proficiency Test – LLPT)
- ವೈಯಕ್ತಿಕ ಸಂದರ್ಶನ (Personal Interview)

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು (PNB Recruitment 2025) ಈ ಕೆಳಗಿನ ಹಂತಗಳನ್ನು ಅನುಸರಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು: Read this also : ಐಟಿ ಉದ್ಯೋಗಕ್ಕೆ ಕುತ್ತು: ರ‍್ಯಾಪಿಡೋ ಡ್ರೈವರ್ ಆದ ಸಾಫ್ಟ್‌ವೇರ್ ಇಂಜಿನಿಯರ್! ಈತನ ಕಷ್ಟ ಕೇಳಿದ್ರೆ ಕಣ್ಣೀರು ಬರುತ್ತೆ
- ಮೊದಲು PNB ಅಧಿಕೃತ ವೆಬ್‌ಸೈಟ್ https://pnb.bank.in/hi/ ಗೆ ಭೇಟಿ ನೀಡಿ.
- ಅಲ್ಲಿ ‘Recruitment’ ಅಥವಾ ‘Career’ ವಿಭಾಗವನ್ನು ಆಯ್ಕೆ ಮಾಡಿ.
- “Local Bank Officer Recruitment 2025” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ, ನಂತರ ‘Apply Online’ ಕ್ಲಿಕ್ ಮಾಡಿ.
- ನಿಮ್ಮ ಹೆಸರು, ವಿಳಾಸ, ವಿದ್ಯಾರ್ಹತೆ ಇತ್ಯಾದಿ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
- ಅರ್ಜಿಯನ್ನು ಸಬ್ಮಿಟ್ ಮಾಡಿ ಮತ್ತು ಭವಿಷ್ಯದ ಉಪಯೋಗಕ್ಕಾಗಿ ಒಂದು ಪ್ರಿಂಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು:
| ಅರ್ಜಿ ಸಲ್ಲಿಕೆ ಆರಂಭ: | 03 ನವೆಂಬರ್ 2025 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: | 01 ಡಿಸೆಂಬರ್ 2025 |
| ಶುಲ್ಕ ಪಾವತಿಸಲು ಕೊನೆಯ ದಿನಾಂಕ: | 01 ಡಿಸೆಂಬರ್ 2025 |
ಪ್ರಮುಖ ಲಿಂಕ್ಗಳು:
| ಅಧಿಕೃತ ಅಧಿಸೂಚನೆ | Click Here |
| ಅಪ್ಲೇ ಆನ್ ಲೈನ್ | Click Here |
| ಅಧಿಕೃತ ವೆಬ್‌ಸೈಟ್ | Click Here |
