ಭಾರತದ ಸಂವಿಧಾನವು ನಮಗೆ ಮೂಲಭೂತ ಹಕ್ಕುಗಳನ್ನು ನೀಡಿದೆ. ಆದರೆ ಹಕ್ಕುಗಳನ್ನು ಪ್ರತಿಪಾದಿಸುವಷ್ಟೇ ಜವಾಬ್ದಾರಿಯಿಂದ ಸಂವಿಧಾನದ ಅಡಿಯಲ್ಲಿ ಬರುವ ನಮ್ಮ ಮೂಲಭೂತ ಕರ್ತವ್ಯಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ತಾ.ಪಂ ಇಒ ನಾಗಮಣಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Local News – ಹಕ್ಕುಗಳಷ್ಟೇ ಕರ್ತವ್ಯವೂ ಮುಖ್ಯ : ತಾ.ಪಂ ಇಒ ನಾಗಮಣಿ
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂವಿಧಾನವು ಪ್ರಜೆಗಳಿಗೆ ಮಹತ್ವದ ಸ್ಥಾನ ನೀಡಿದೆ. ನಮಗೆ ವಾಕ್ ಸ್ವಾತಂತ್ರ್ಯ, ಸಮಾನತೆ ಸೇರಿದಂತೆ ಅನೇಕ ಹಕ್ಕುಗಳನ್ನು ನೀಡಲಾಗಿದೆ. ಆದರೆ, ಕೇವಲ ಹಕ್ಕುಗಳನ್ನು ಪ್ರತಿಪಾದಿಸುವುದು ಮಾತ್ರ ನಮ್ಮ ಕೆಲಸವಲ್ಲ, ದೇಶದ ಅಭಿವೃದ್ಧಿ ಮತ್ತು ಸುವ್ಯವಸ್ಥೆಗೆ ನಮ್ಮ ಕರ್ತವ್ಯಗಳ ಪಾಲನೆ ಅತ್ಯಗತ್ಯ. ಇಂದು ನಾವೆಲ್ಲರೂ ಸಂವಿಧಾನದ ಅಡಿಯಲ್ಲೇ ಬದುಕುತ್ತಿದ್ದೇವೆ. ಸಂವಿಧಾನದಿಂದಾಗಿ ಬಾಲ್ಯವಿವಾಹ, ಜಾತಿ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ದೂರವಾಗಿವೆ. ದೇಶದ ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಿಕೊಟ್ಟಿದೆ. ಅದರಲ್ಲೂ ಮುಖ್ಯವಾಗಿ ನಮಗೆ ಎಲ್ಲರಿಗೂ ಮತದಾನದ ಹಕ್ಕನ್ನು ಸಂವಿಧಾನ ನೀಡಿದೆ. ಮತ ಚಲಾವಣೆ ಮಾಡುವ ಸಮಯದಲ್ಲಿ ಅಂಬಾನಿಗೂ ಒಂದೇ ಮತ, ಸಾಮಾನ್ಯ ನಾಗರೀಕನಿಗೂ ಒಂದೆ ಮತ. ಸಂವಿಧಾನದಲ್ಲಿ ಎಲ್ಲರೂ ಒಂದೇ ಎಂಬುದನ್ನು ನಾವು ಗಮನಿಸಬೇಕು. ಜೊತೆಗೆ ಮತದಾನ ಅತ್ಯಂತ ಪವಿತ್ರವಾದುದು. 18 ವರ್ಷ ತುಂಬಿದ ಎಲ್ಲರೂ ಮತದಾನ ಮಾಡಬೇಕು ಎಂದರು.

Local News – ಶಿಕ್ಷಣವೇ ಬದಲಾವಣೆಯ ಅಸ್ತ್ರ: ಬಿಇಒ ಕೃಷ್ಣಕುಮಾರಿ
ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಕುಮಾರಿ ಮಾತನಾಡಿ, ದೇಶದಲ್ಲಿ ನೆಲೆಸಿರುವ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದ ಅರಿವು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರೂ ಸಂವಿಧಾನದ ಮಹತ್ವ ಹಾಗೂ ಅದರಡಿಯ ಕಾನೂನುಗಳನ್ನು ತಿಳಿದುಕೊಳ್ಳಬೇಕು. ಸಮಾಜದಲ್ಲಿ ನಾವೆಲ್ಲರೂ ಶಾಂತಿ ಮತ್ತು ಸಹಬಾಳ್ವೆಯಿಂದ ಬದುಕಲು ಸಂವಿಧಾನವನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಹೆಚ್ಚಿದೆ. ನಮ್ಮ ಸಂವಿಧಾನವು ಸಾಮಾಜಿಕ ನ್ಯಾಯ, ವಾಕ್ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಎತ್ತಿಹಿಡಿಯಲು ಕಾನೂನುಗಳನ್ನು ರೂಪಿಸಿದೆ. ಸಮಾಜದ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯವಾಗುತ್ತದೆ. ಎಲ್ಲರೂ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಬೇಕು. ಪ್ರತಿಯೊಬ್ಬರು ಶಿಕ್ಷಿತರಾದಾಗ ಎಲ್ಲವನ್ನೂ ಬದಲಿಸಬಹುದಾಗಿದೆ ಎಂದರು. Read this also : ಮೊಸರಿಗೆ ಇವನ್ನು ಸೇರಿಸಿ ತಿನ್ನಿ: ಹೊಟ್ಟೆಯ ಕೊಬ್ಬು ಕರಗಿ, ಫಿಟ್ ಆಗುವುದು ಗ್ಯಾರಂಟಿ..!

Local News – ಮೆರವಣಿಗೆ ಮತ್ತು ಗೌರವ ಸಲ್ಲಿಕೆ
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಅಲ್ಲಿಂದ ತಾಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿ, ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ತಹಶೀಲ್ದಾರ್ ಸಿಗ್ಬತ್ವುಲ್ಲಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ, ಪಪಂ ಅಧ್ಯಕ್ಷ ಎ.ವಿಕಾಸ, ಉಪಾಧ್ಯಕ್ಷ ಗಂಗರಾಜು, ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ, ಮುಖ್ಯಾಧಿಕಾರಿ ಸಬಾಶಿರೀನ್, ಸರ್ಕಾರಿ ನೌಕರರ ಸಂಘದ ತಾಲೂಕು ಮುನಿಕೃಷ್ಣ, ಕಾರ್ಯದರ್ಶಿ ಮಂಜುನಾಥ್, ಎಸ್.ಸಿ/ಎಸ್.ಟಿ ನೌಕರರ ಸಂಘದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ದಲಿತ ಮುಖಂಡರು ಹಾಜರಿದ್ದರು.
