ಇಂದಿನ ದಿನಗಳಲ್ಲಿ ಐಟಿ (IT) ಉದ್ಯೋಗ ಅಂದ್ರೆ ಸಾಕು, ಕೈತುಂಬಾ ಸಂಬಳ, ಐಷಾರಾಮಿ ಜೀವನ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ, ಕಳೆದ ಕೆಲ ಸಮಯದಿಂದ ಟೆಕ್ ವಲಯದಲ್ಲಿ (IT Job Crisis) ನಡೆಯುತ್ತಿರುವ ಬೆಳವಣಿಗೆಗಳು ನಿಜಕ್ಕೂ ಆತಂಕಕಾರಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ನೋಯ್ಡಾದ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರು ಜೀವನ ನಿರ್ವಹಣೆಗಾಗಿ ರ್ಯಾಪಿಡೋ (Rapido) ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಡುಗರ ಕಣ್ಣಂಚಲಿ ನೀರು ತರಿಸುತ್ತಿದೆ.

ಅಷ್ಟಕ್ಕೂ ಆ ಟೆಕ್ಕಿಗೆ ಎದುರಾದ ಕಷ್ಟವಾದರೂ ಏನು? ಲಕ್ಷ ಲಕ್ಷ ಸಂಬಳ ಪಡೆಯುತ್ತಿದ್ದವರು ಬೈಕ್ ಟ್ಯಾಕ್ಸಿ ಓಡಿಸುವ ಪರಿಸ್ಥಿತಿ ಏಕೆ ಬಂತು? ಇಲ್ಲಿದೆ ಸಂಪೂರ್ಣ ಮಾಹಿತಿ.
IT Job Crisis – ವೈರಲ್ ವಿಡಿಯೋದ ಹಿಂದಿನ ಕಟು ಸತ್ಯ
‘ನೊಮ್ಯಾಡಿಕ್ ತೇಜು’ (Nomadic Teju) ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿ ನೋಯ್ಡಾದ ಗೌರ್ ಸಿಟಿಯಲ್ಲಿ ವಾಸವಿದ್ದ ಐಟಿ ಇಂಜಿನಿಯರ್. ಕಳೆದ ಎರಡು ತಿಂಗಳಿಂದ ಇವರ ಕೈಯಲ್ಲಿ ಕೆಲಸವಿಲ್ಲ.
ಕೆಲಸ ಹೋಯ್ತು, ಕಷ್ಟ ಬಂತು!
ವಿಷಯ ಏನಪ್ಪಾ ಅಂದ್ರೆ, ಇವರು ಉತ್ತಮ ಅವಕಾಶ ಮತ್ತು ಸಂಬಳದ ನಿರೀಕ್ಷೆಯಲ್ಲಿ ತಮ್ಮ ಹಳೆಯ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಟೆಕ್ ವಲಯದಲ್ಲಿ ನೇಮಕಾತಿ ಪ್ರಕ್ರಿಯೆ (Hiring) ನಿಧಾನವಾಗಿದ್ದರಿಂದ ಅವರಿಗೆ ಬೇರೆ ಕೆಲಸ ಸಿಗಲಿಲ್ಲ. ಪರಿಣಾಮ, ಕಳೆದ ಎರಡು ತಿಂಗಳಿಂದ ನಿರುದ್ಯೋಗಿಯಾಗಿ (IT Job Crisis) ಉಳಿಯುವಂತಾಯಿತು.
ಕೈಯಲ್ಲಿ ಕಾಸಿಲ್ಲ, ಬ್ಯಾಂಕ್ ಕಂತು ನಿಲ್ಲಲ್ಲ!
ಕೆಲಸ ಇಲ್ಲದಿದ್ದರೂ ಜೀವನದ ಖರ್ಚುಗಳು ನಿಲ್ಲುತ್ತವೆಯೇ? ಗೌರ್ ಸಿಟಿಯಂತಹ ಕಡೆ ಫ್ಲ್ಯಾಟ್ ಬೆಲೆ ಕೋಟಿ ದಾಟುತ್ತದೆ. ಇವರು ಕೂಡ ಅಲ್ಲಿ ಫ್ಲ್ಯಾಟ್ ಹೊಂದಿದ್ದರು. ಆದರೆ ಕೆಲಸ ಹೋದ ಮೇಲೆ ಬ್ಯಾಂಕ್ ಲೋನ್ ಇಎಂಐ (EMI) ಕಟ್ಟಲು ಪರದಾಡುವಂತಾಗಿದೆ. ಬ್ಯಾಂಕ್ಗಳ ಒತ್ತಡ ತಾಳಲಾರದೆ, ಜೀವನ ಸಾಗಿಸಲು ಈಗ ಪಾರ್ಟ್ ಟೈಮ್ ಆಗಿ ರ್ಯಾಪಿಡೋ ಬೈಕ್ ಓಡಿಸುತ್ತಿದ್ದಾರೆ. ಜೊತೆಗೆ ಸಣ್ಣ ಪುಟ್ಟ ಫ್ರೀಲ್ಯಾನ್ಸ್ ಪ್ರಾಜೆಕ್ಟ್ಗಳನ್ನು ಮಾಡುತ್ತಿದ್ದಾರೆ. Read this also : ಮಧ್ಯರಾತ್ರಿ ಕೈಕೊಟ್ಟ ಬೈಕ್, ರಿಪೇರಿ ಮಾಡಿ ಮಹಿಳೆಯನ್ನು ಮನೆಗೆ ತಲುಪಿಸಿದ ರಾಪಿಡೊ ಚಾಲಕ!

ಐಷಾರಾಮಿ ಫ್ಲ್ಯಾಟ್ ಬಿಟ್ಟು ಬಾಡಿಗೆ ಮನೆಗೆ ಶಿಫ್ಟ್!
ಬದುಕಿನ ಬಂಡಿ ಎಳೆಯಲು ಇವರು ಮಾಡಿರೋ (IT Job Crisis) ತ್ಯಾಗ ಅಷ್ಟಿಷ್ಟಲ್ಲ. 30 ರಿಂದ 35 ಸಾವಿರ ಬಾಡಿಗೆ ಬರುವ ತಮ್ಮ ಸ್ವಂತ ಐಷಾರಾಮಿ ಫ್ಲ್ಯಾಟ್ಅನ್ನು ಬೇರೆಯವರಿಗೆ ಬಾಡಿಗೆಗೆ ಕೊಟ್ಟು, ಆ ಹಣದಲ್ಲಿ ಇಎಂಐ ಹೊಂದಿಸುತ್ತಿದ್ದಾರೆ. ತಾನು ಮಾತ್ರ ಕಡಿಮೆ ಬಾಡಿಗೆಯ ಸಣ್ಣ ಕೋಣೆಗೆ ಶಿಫ್ಟ್ ಆಗಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ನೆಟ್ಟಿಗರು ಏನಂತಾರೆ?
- “ಇದು ಕೇವಲ ಆರಂಭವಷ್ಟೇ, ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಆಟೊಮೇಷನ್ನಿಂದ ಇನ್ನಷ್ಟು ಉದ್ಯೋಗಗಳು ಕಣ್ಮರೆಯಾಗಲಿವೆ” ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.
- “ಭಾರತದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ, ಅವಕಾಶವಿದ್ದರೆ ವಿದೇಶಕ್ಕೆ ಹೋಗುವುದೇ ಲೇಸು” ಎಂದು ಇನ್ನು ಕೆಲವರು ಸಲಹೆ ನೀಡಿದ್ದಾರೆ.
