ಬೀದಿ ನಾಯಿಗಳ (Stray Dog Attack) ಹಾವಳಿ ಒಂದೆಡೆಯಾದರೆ, ಮನೆಯಲ್ಲಿ ಸಾಕುವ ಅಪಾಯಕಾರಿ ಶ್ವಾನಗಳ ದಾಳಿ ಮತ್ತೊಂದೆಡೆ! ಇತ್ತೀಚೆಗೆ ದೆಹಲಿಯಲ್ಲಿ ನಡೆದ ಒಂದು ಘಟನೆ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. 6 ವರ್ಷದ ಮುಗ್ಧ ಬಾಲಕನೊಬ್ಬ ಚೆಂಡಿನೊಂದಿಗೆ ಆಟವಾಡುತ್ತಿದ್ದಾಗ, ನೆರೆಮನೆಯಲ್ಲಿ ಸಾಕಿದ್ದ ಪಿಟ್‌ಬುಲ್ (Pitbull Attack) ನಾಯಿ ಅವನ ಮೇಲೆ ಭೀಕರವಾಗಿ ದಾಳಿ ಮಾಡಿದೆ. ಈ ದಾಳಿಯ ಭೀಕರತೆಗೆ ಬಾಲಕನ ಒಂದು ಕಿವಿಯೇ ಸಂಪೂರ್ಣವಾಗಿ ತುಂಡಾಗಿ ರಸ್ತೆಯ ಮೇಲೆ ಬಿದ್ದಿದೆ!

ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.
Pitbull Attack – ವಿಡಿಯೋದಲ್ಲಿ ಏನಿದೆ?
ದೆಹಲಿಯ ಪ್ರೇಮ್ ನಗರದ ವಿಜಯ್ ಎನ್‌ಕ್ಲೇವ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 6 ವರ್ಷದ ಬಾಲಕ ತನ್ನ ಮನೆ ಪಕ್ಕದಲ್ಲಿ ಖುಷಿಯಿಂದ ಚೆಂಡಾಟ ಆಡುತ್ತಿದ್ದ. ಅಷ್ಟರಲ್ಲೇ, ಟೈಲರ್ ಆಗಿರುವ ರಾಜೇಶ್ ಪಾಲ್ (50) ಎಂಬುವವರ ಮನೆಯಿಂದ ಪಿಟ್‌ಬುಲ್ ಜಾತಿಯ ಶ್ವಾನವು (Pitbull Dog) ದಿಢೀರನೆ ಹೊರಗೆ ಬಂದು, ನೇರವಾಗಿ ಬಾಲಕನ ಮೇಲೆ ಎರಗಿದೆ.
ವಿಡಿಯೋದಲ್ಲಿ ನೋಡುವಂತೆ, ನಾಯಿಯ ಮಾಲೀಕರ ಮನೆಯ ಮಹಿಳೆಯೊಬ್ಬರು ಅದನ್ನು ನಿಯಂತ್ರಿಸಲು ಶತ ಪ್ರಯತ್ನ ಮಾಡುತ್ತಾರೆ. ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರೂ ಮಗುವನ್ನು ರಕ್ಷಿಸಲು ಓಡಿ ಬರುತ್ತಾರೆ. ಆದರೆ, ಈ ಕ್ರೂರ ಪಿಟ್‌ಬುಲ್ ಬಾಲಕನನ್ನು ಬಿಡಲೇ ಇಲ್ಲ. ಬಾಲಕನ ಮುಖ ಮತ್ತು ತಲೆಯ ಭಾಗವನ್ನು ಭೀಕರವಾಗಿ ಕಚ್ಚಿದೆ. ಈ ಕಡಿತದ ತೀವ್ರತೆಗೆ ಬಾಲಕನ ಬಲಗಿವಿಯು ಸಂಪೂರ್ಣವಾಗಿ ಕತ್ತರಿಸಿ ಹೋಗಿ ರೋಡ್ ಮೇಲೆ ಬಿದ್ದಿದೆ.
ಬಾಲಕನ ಸ್ಥಿತಿ ಗಂಭೀರ, ಮಾಲೀಕನ ಬಂಧನ!
ಈ ದಾಳಿಯಿಂದಾಗಿ ಬಾಲಕನ ಹಲ್ಲುಗಳು ಮುರಿದಿವೆ, ಮುಖದ ತುಂಬಾ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್, ಸಮಯಕ್ಕೆ ಸರಿಯಾಗಿ ರಕ್ಷಣೆ ಸಿಕ್ಕಿದ್ದರಿಂದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗಾಯಾಳು ಬಾಲಕನನ್ನು ಮೊದಲು ಬಿಎಸ್ಎ ಆಸ್ಪತ್ರೆಗೆ, ನಂತರ ಉತ್ತಮ ಚಿಕಿತ್ಸೆಗಾಗಿ ಸಫ್ತರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. Read this also : ವಿಷಪೂರಿತ ಹಾವಿನಿಂದ ತನ್ನ ಮಾಲೀಕರನ್ನು ರಕ್ಷಿಸಿದ ನಾಯಿ, ವೈರಲ್ ಆದ ವಿಡಿಯೋ…!
ಘಟನೆ ಬಳಿಕ ಬಾಲಕನ ತಂದೆ ದೂರು ನೀಡಿದ್ದಾರೆ. ದೂರಿನಲ್ಲಿ, “ಈ ಪಿಟ್‌ಬುಲ್ (Pitbull Attack) ಇದಕ್ಕೂ ಮೊದಲು ಇದೇ ಪ್ರದೇಶದ ನಾಲ್ಕು ಮಂದಿ ಮಕ್ಕಳ ಮೇಲೆ ದಾಳಿ ಮಾಡಿದೆ” ಎಂದು ತಿಳಿಸಿದ್ದಾರೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಶ್ವಾನದ ಮಾಲೀಕ ರಾಜೇಶ್ ಪಾಲ್‌ರನ್ನು “ಹತ್ಯಾ ಪ್ರಯತ್ನ” (Attempt to Murder) ಪ್ರಕರಣದ ಅಡಿಯಲ್ಲಿ ಬಂಧಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click here
ಪಿಟ್‌ಬುಲ್ ಸಾಕುವುದರ ಬಗ್ಗೆ ನಿಯಮ ಏನು ಹೇಳುತ್ತೆ?
ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಇಂತಹ ಶ್ವಾನಗಳ ದಾಳಿಗಳು ಪದೇ ಪದೇ ನಡೆಯುತ್ತಿವೆ. ಈ ಹಿಂದೆ, ಬೀದಿ ನಾಯಿಗಳ (Pitbull Attack) ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಾಣಿ ಹಕ್ಕುಗಳ ಕಾರ್ಯಕರ್ತರ ವಿರೋಧದ ನಂತರ ಹಿಂಪಡೆಯಲಾಗಿತ್ತು. ಆದರೆ, ಇಂತಹ ಆಕ್ರಮಣಕಾರಿ ಶ್ವಾನಗಳನ್ನು ಸಾಕುವವರು ಇನ್ನಾದರೂ ಎಚ್ಚರಿಕೆ ವಹಿಸಬೇಕಿದೆ. ನಿಯಂತ್ರಿಸಲಾಗದ, ಅಪಾಯಕಾರಿ ಜಾತಿಯ ನಾಯಿಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಕರೆದುಕೊಂಡು ಹೋಗುವಾಗ ಮತ್ತು ಮನೆಯಲ್ಲಿ ಸಾಕುವಾಗ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ.
