ಸಾಮಾನ್ಯವಾಗಿ, ತಂದೆ ಮತ್ತು ಮಗಳ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಗನಿಗೆ ಹೋಲಿಸಿದರೆ ಮಗಳ ಮೇಲೆ ತಂದೆಯ ಪ್ರೀತಿ, ಕಾಳಜಿ ಸ್ವಲ್ಪ ಹೆಚ್ಚೇ ಇರುತ್ತದೆ ಎನ್ನುವುದು ಎಲ್ಲೆಡೆ ಕೇಳಿಬರುವ ಮಾತು. ಇದೇ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ದೃಶ್ಯ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಈ ವಿಡಿಯೋದಲ್ಲಿರುವ (Video) ಪ್ರೀತಿಗಿಂತ ನಿರ್ಲಕ್ಷ್ಯವೇ ಹೆಚ್ಚು ಎದ್ದು ಕಾಣುತ್ತಿದೆ.

ಈ ವಿಡಿಯೋದಲ್ಲಿ, (Video) ಒಬ್ಬ ಯುವಕ ತನ್ನ ಪುಟ್ಟ ಮಗಳನ್ನು ಶಾಲೆಯಿಂದ ಅಥವಾ ಎಲ್ಲೋ ಕರೆದುಕೊಂಡು ಹೋಗುತ್ತಿರುವ ದೃಶ್ಯವಿದೆ. ಆದರೆ, ಮಗಳನ್ನು ಹಿಂದೆ ಆರಾಮಾಗಿ ಕೂರಿಸುವ ಬದಲು, ಆತ ಪೆಟ್ರೋಲ್ ಟ್ಯಾಂಕ್ ಮೇಲೆ ತನ್ನ ಎದುರಿಗೆ ಮುಖಮಾಡಿ ಕುಳ್ಳಿರಿಸಿದ್ದಾನೆ.
Video – ಹೆಲ್ಮೆಟ್ ಧರಿಸಿದ ತಂದೆ, ಅಸುರಕ್ಷಿತೆಯಲ್ಲಿ ಮಗಳು!
ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಯುವಕನಿಗೆ ತನ್ನ ಸುರಕ್ಷತೆಯ ಬಗ್ಗೆ ಕಾಳಜಿ ಇದೆ ಅನಿಸುತ್ತದೆ. ಏಕೆಂದರೆ, ಆತ ಹೆಲ್ಮೆಟ್ ಧರಿಸಿದ್ದಾನೆ ಮತ್ತು ಹಿಂಬದಿಯಲ್ಲಿ ಸ್ಕೂಲ್ ಬ್ಯಾಗ್ ಕೂಡ ಹಾಕಿಕೊಂಡಿದ್ದಾನೆ. ಆದರೆ, ತಂದೆಗೆ ಪ್ರಪಂಚವಾಗಿರುವ ಮಗುವಿಗೆ ಹೆಲ್ಮೆಟ್ ಇಲ್ಲ. ಮಗಳು ತಂದೆಯೆಡೆಗೆ ಮುಖ ಮಾಡಿ ಕೂತಿದ್ದು, ಆತನೊಂದಿಗೆ ಮಾತನಾಡುತ್ತಾ ರಸ್ತೆ ಮಧ್ಯೆ ವೇಗವಾಗಿ ಸಾಗುತ್ತಿದ್ದಾನೆ. ರಸ್ತೆ ಕೂಡ ಸಾಕಷ್ಟು ವಾಹನಗಳಿಂದ ತುಂಬಿ ತುಳುಕುತ್ತಿದೆ.
ಈ ಸಂಪೂರ್ಣ ಅಪಾಯಕಾರಿ ದೃಶ್ಯವನ್ನು ಹಿಂಬದಿಯಿಂದ ಬರುತ್ತಿದ್ದ ಕಾರಿನಲ್ಲಿದ್ದ ಒಬ್ಬ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ (Video) ಈಗ ಎಲ್ಲೆಡೆ ಹರಿದಾಡುತ್ತಿದ್ದು, ನೋಡಿದವರ ಹುಬ್ಬೇರಿಸಿದೆ. ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
Video – ನೆಟ್ಟಿಗರಿಂದ ತೀವ್ರ ಆಕ್ರೋಶ
ಓಕ್ ಎಮಿನೆಂಟ್ (Oak Eminent) ಎಂಬ X ಹ್ಯಾಂಡಲ್‌ನಲ್ಲಿ ಈ ವಿಡಿಯೋ ಪೋಸ್ಟ್ ಆದ ತಕ್ಷಣವೇ ನೆಟ್ಟಿಗರು ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ನೋಡಿದ ಬಹುತೇಕ ಮಂದಿ ತಮ್ಮ ಕೋಪ ಮತ್ತು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಈ ತಂದೆಯ ವರ್ತನೆಯನ್ನು ‘ಸಂಪೂರ್ಣ ಜವಾಬ್ದಾರಿ ಇಲ್ಲದ (Irresponsible)’ ಎಂದು ಕರೆದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
- ಒಬ್ಬ ನೆಟ್ಟಿಗರು, “ನೀವು ನಿಮ್ಮ ಬಗ್ಗೆ ಯೋಚಿಸದಿದ್ದರೂ ಪರವಾಗಿಲ್ಲ, ದಯವಿಟ್ಟು ನಿಮ್ಮ ಮಗಳ ಸುರಕ್ಷತೆಯ ಬಗ್ಗೆ ಯೋಚಿಸಬೇಕು” ಎಂದು ಟೀಕಿಸಿದ್ದಾರೆ.
- ಇನ್ನೊಬ್ಬರು, “ಇದು ಕೇವಲ ಪ್ರೀತಿಯಲ್ಲ, ಅಜಾಗರೂಕತೆ ಮತ್ತು ನಿರ್ಲಕ್ಷ್ಯ. ಇಂತಹ ಅಪಾಯಕಾರಿ ಡ್ರೈವಿಂಗ್ಗೆ ದಂಡ ವಿಧಿಸಬೇಕು” ಎಂದು ಒತ್ತಾಯಿಸಿದ್ದಾರೆ. Read this also : ಡೆಲಿವರಿ ಕೆಲಸದ ನಡುವೆ ಮಗಳ ವಿದ್ಯಾಭ್ಯಾಸಕ್ಕೆ ಸಮಯ ಕೊಡುವ ‘ಅಲ್ಟಿಮೇಟ್ ಸ್ವಿಗ್ಗಿ ಡ್ಯಾಡ್’ಗೆ ಸಲಾಂ ಹೊಡೆದ ನೆಟ್ಟಿಗರು..!
- ಕೆಲವರು, ಯುವಕ ಮದ್ಯಪಾನ ಮಾಡಿ ಅಪಾಯಕಾರಿ ರೀತಿಯಲ್ಲಿ ಬೈಕ್ ಚಲಾಯಿಸುತ್ತಿದ್ದಾನೆ ಎಂದು ಸಹ ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರೀತಿ ಇರಲಿ, ವಾತ್ಸಲ್ಯ ಇರಲಿ. ಆದರೆ, ಪ್ರೀತಿ ಮತ್ತು ಪ್ರದರ್ಶನದ ನಡುವೆ (Video) ಮಕ್ಕಳ ಸುರಕ್ಷತೆಯನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂಬುದು ಈ ಘಟನೆಯಿಂದ ತಿಳಿಯುತ್ತದೆ. ಸಾರ್ವಜನಿಕ ರಸ್ತೆಗಳಲ್ಲಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವುದು ಅಪರಾಧ. ಇನ್ನೂ ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲವಾದರೂ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
