ದೇಶದ ಟೆಕ್ ಹಬ್, ಸಂಚಾರ ದಟ್ಟಣೆಯ ನಗರ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಪ್ರತಿದಿನ ಸಾವಿರಾರು ಜನರು ಕ್ಯಾಬ್‌ಗಳನ್ನು ಅವಲಂಬಿಸಿದ್ದಾರೆ. ಆದರೆ, ಇಲ್ಲೊಬ್ಬ ಚಾಲಕ (Cab Driver) ಪ್ರಯಾಣಿಕರು ತಮ್ಮೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಕಠಿಣ ನಿಯಮಾವಳಿಗಳನ್ನು (Bangalore Cab Rules) ಸೀಟಿನ ಹಿಂದೆ ಅಂಟಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ, “ನನ್ನನ್ನು ಭಯ್ಯಾ ಅಂತ ಕರೆಯಬೇಡ” ಎಂಬ ನಿಯಮ ಇದೀಗ ನೆಟ್ಟಿಗರ ನಡುವೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

ರೆಡ್ಡಿಟ್ (Reddit) ನಲ್ಲಿ ಹಂಚಿಕೆಯಾದ ಈ ಫೋಟೋ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಕ್ಯಾಬ್ ಚಾಲಕರು ದಿನನಿತ್ಯ ಎದುರಿಸುವ ಸವಾಲುಗಳಿಗೆ ಇದು ಕನ್ನಡಿ ಹಿಡಿದಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
Cab Driver – ಚಾಲಕನ ಮನದಾಳದ ಮಾತು: 7 ಖಡಕ್ ನಿಯಮಗಳೇನು?
ಕ್ಯಾಬ್ ಡ್ರೈವರ್ ಸೀಟಿನ ಹಿಂದೆ ಅಂಟಿಸಲಾದ ಈ ನೋಟಿಸ್ ಬೋರ್ಡ್, ಪ್ರಯಾಣಿಕರಿಗೆ ನೇರ ಮತ್ತು ಖಡಕ್ ಎಚ್ಚರಿಕೆ ನೀಡುತ್ತದೆ. ಡ್ರೈವರ್‌ಗಳು ಎದುರಿಸುವ ಸಾಮಾನ್ಯ ಕಿರಿಕಿರಿಯನ್ನು ಇವು ತಿಳಿಸುತ್ತವೆ. ಆ 7 ನಿಯಮಗಳು ಇಲ್ಲಿವೆ:
- ನೀವು ಕ್ಯಾಬ್ನ ಮಾಲೀಕರಲ್ಲ. (You are not the owner of the cab.)
- ಕ್ಯಾಬ್ ಚಾಲನೆ ಮಾಡುವ ವ್ಯಕ್ತಿಯೇ ಕ್ಯಾಬ್ನ ಮಾಲೀಕ. (The person driving the cab is the owner of the cab.)
- ಸಭ್ಯವಾಗಿ ಮಾತನಾಡಿ ಮತ್ತು ಗೌರವದಿಂದ ನಡೆದುಕೊಳ್ಳಿ. (Speak politely and behave with respect.)
- ನಿಧಾನವಾಗಿ ಕ್ಯಾಬ್ ಬಾಗಿಲನ್ನು ಮುಚ್ಚಿ. (Close the cab door slowly.)
- ನಿಮ್ಮ ವರ್ತನೆಯನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ. ದಯವಿಟ್ಟು ಅದನ್ನು ನಮಗೆ ತೋರಿಸಬೇಡಿ, ಏಕೆಂದರೆ ನೀವು ನಮಗೆ ಹೆಚ್ಚು ಹಣ ನೀಡುತ್ತಿಲ್ಲ. (Keep your attitude in your pocket. Please don’t show it to us because you are not paying us extra.)
- ನನ್ನನ್ನು ಭಯ್ಯಾ ಅಂತ ಕರೆಯಬೇಡ. (Don’t call me bhaiya.)
- ವೇಗವಾಗಿ ಓಡಿಸು ಎಂದು ಹೇಳಬೇಡಿ. (Don’t tell me to drive fast.)

Cab Driver – ಸಾಮಾಜಿಕ ಜಾಲತಾಣದಲ್ಲಿ ಚರ್ಚೆ: ಸಪೋರ್ಟ್ ಮತ್ತು ವಿರೋಧ!
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, (Cab Driver) ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಹೆಚ್ಚಿನ ನೆಟ್ಟಿಗರು ಈ ಚಾಲಕನ ಪ್ರಾಮಾಣಿಕತೆಯನ್ನು ಮತ್ತು ಧೈರ್ಯವನ್ನು ಮೆಚ್ಚಿದ್ದಾರೆ. Read this also : ಆಟೋ ಚಾಲಕ-ಪ್ರಯಾಣಿಕರ ಬಿಗ್ ಫೈಟ್ : 10 ನಿಮಿಷ ಕಾಯಿಸಿದ್ದಕ್ಕೆ ಬೆಂಗಳೂರಿನಲ್ಲಿ ನಡೆದಿದೆ ಮಹಾ ಜಗಳ..!
- ಒಬ್ಬ ನೆಟ್ಟಿಗರು, “ಕೆಲವು ಪ್ರಯಾಣಿಕರು ಕ್ಯಾಬ್‌ಗಳನ್ನು ತಮ್ಮ ಸ್ವಂತ ಆಸ್ತಿಯಂತೆ ಭಾವಿಸುತ್ತಾರೆ. ಈ ಪೋಸ್ಟ್‌ನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ,” ಎಂದು ಕಮೆಂಟ್ ಮಾಡಿದ್ದಾರೆ.
- “ನಿಮ್ಮ ವರ್ತನೆಯನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ” ಎಂಬ ನಿಯಮವನ್ನು ನೋಡಿ ಒಬ್ಬರು, “ಇದು ತುಂಬಾ ಕಠಿಣವಾಗಿರಬಹುದು, ಆದರೆ ನೂರಕ್ಕೆ ನೂರು ಪ್ರಾಮಾಣಿಕವಾದ ಮಾತು,” ಎಂದು ನಗೆಯೊಂದಿಗೆ (Cab Driver) ಪ್ರತಿಕ್ರಿಯಿಸಿದ್ದಾರೆ.
- “ಶಾರ್ಟ್‌ಕಟ್ ಇದೆಯಾ? ವೇಗವಾಗಿ ಹೋಗಿ!” ಎಂದು ಕಿರಿಕಿರಿ ಮಾಡುವ ಪ್ರಯಾಣಿಕರಿಗೆ ಈ ಪೋಸ್ಟ್ ಸರಿಯಾದ ಉತ್ತರ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ : Click Here
ಆದರೆ, 6ನೇ ನಿಯಮದ ಬಗ್ಗೆ ಕೆಲವರು ಗೊಂದಲ ವ್ಯಕ್ತಪಡಿಸಿದ್ದಾರೆ. “ಎಲ್ಲಾ ಓಕೆ, ಆದರೆ ‘ಭಯ್ಯಾ’ ಅಂತ ಯಾಕೆ ಕರೆಯಬಾರದು ಎಂಬುದು ಅರ್ಥವಾಗಲಿಲ್ಲ. ಗೌರವ ಕೊಡುವುದಕ್ಕಾಗಿ ಹೀಗೆ ಕರೆಯುತ್ತೇವೆ,” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಈ ಏಳು ನಿಯಮಗಳು ಕ್ಯಾಬ್ ಚಾಲಕರು (Cab Driver) ಮತ್ತು ಪ್ರಯಾಣಿಕರ ನಡುವಿನ ಸಂಬಂಧ ಹೇಗಿರಬೇಕು ಎಂಬುದರ ಬಗ್ಗೆ ಗಂಭೀರ ಚರ್ಚೆಗೆ ನಾಂದಿ ಹಾಡಿದೆ. ನೀವು ಕೂಡ ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಈ ನಿಯಮಗಳನ್ನು ಅನುಸರಿಸುತ್ತೀರಾ? ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ ತಿಳಿಸಿ.
