Local News – ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕೇವಲ ಓದು ಅಥವಾ ದೈಹಿಕ ಕ್ರೀಡೆಗಳಷ್ಟೇ ಸಾಲದು, ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವ ಆಟಗಳೂ ಅತ್ಯಗತ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚೆಸ್, ಕೇರಂನಂತಹ ಏಕಾಗ್ರತೆ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸುವ ಕ್ರೀಡೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಮೆದುಳಿನ ಶಕ್ತಿಯನ್ನು ಚುರುಕುಗೊಳಿಸಿಕೊಳ್ಳಬೇಕು ಎಂದು ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

Local News – ಬುದ್ದಿ ಶಕ್ತಿ ಚುರುಕುಗೊಳಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಲು ಶಾಸಕರ ಸಲಹೆ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಜೆ.ಪಿ. ನಗರದ ಆದರ್ಶ ವಿದ್ಯಾಲಯದಲ್ಲಿ ತಾಲೂಕು ಪಂಚಾಯತಿ ಹಾಗೂ ತಿರುಮಣಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ 14 ವರ್ಷದೊಳಗಿನ ಮಕ್ಕಳ ಚೆಸ್ ಹಾಗೂ ಕೇರಂ ಕ್ರೀಡಾಕೂಟ ಹಾಗೂ ಬಾಲ್ಯ ವಿವಾಹದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳು ಕೇವಲ ಖೋಖೊ, ವಾಲಿಬಾಲ್, ಕಬ್ಬಡಿ, ರನ್ನಿಂಗ್ ಸೇರಿದಂತೆ ಹಲವು ದೈಹಿಕ ಕ್ರೀಡೆಗಳಲ್ಲಿ ಮಾತ್ರ ಆಸಕ್ತಿರಾಗಿರುತ್ತಾರೆ ಜೊತೆಗೆ ಅಂತಹ ಕ್ರೀಡೆಗಳಲ್ಲಿಯೇ ಹೆಚ್ಚಾಗಿ ಭಾಗವಹಿಸುತ್ತಾರೆ. ಆದರೆ ಬುದ್ದಿನ ಶಕ್ತಿ ಹೆಚ್ಚಿಸುವಂತಹ ಚೆಸ್, ಕೇರಂ ನಂತಹ ಆಟಗಳಲ್ಲಿ ಹೆಚ್ಚಾಗಿ ಭಾಗವಹಿಸುವುದಿಲ್ಲ. ಬುದ್ದಿ ಶಕ್ತಿಯನ್ನು ಹೆಚ್ಚಿಸುವಂತಹ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಭಾಗವಹಿಸಬೇಕು ಜೊತೆಗೆ ಶಿಕ್ಷಕರೂ ಸಹ ಮಕ್ಕಳಿಗೆ ಈ ಕ್ರೀಡೆಗಳನ್ನು ಚೆನ್ನಾಗಿ ಕಲಿಸಬೇಕು ಎಂದರು.
Local News – ಬಾಲ್ಯ ವಿವಾಹದ ಕುರಿತು ಜಾಗೃತಿ ಅಗತ್ಯ
ಇದೇ ಸಮಯದಲ್ಲಿ ಬಾಲ್ಯ ವಿವಾಹದ ಕುರಿತು ಮಾತನಾಡುತ್ತಾ, ಇತ್ತೀಚಿಗೆ ಈ ಭಾಗದಲ್ಲಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ನಡೆಯುತ್ತಿರುವುದು ವಿಷಾದನೀಯವಾದ ಸಂಗತಿ. ಬಾಲ್ಯ ವಿವಾಹಗಳಿಂದ ಅನೇಕ ದುಷ್ಪರಿಣಾಮಗಳು ಉದ್ಬವಿಸಲಿದೆ. ದೊಡ್ಡ ಸಾಧನೆ ಮಾಡಬೇಕೆಂಬ ಕನಸ್ಸನ್ನು ಹೊತ್ತಿರುವ ಮಕ್ಕಳ ಭಚಿಷ್ಯ ಹಾಳಾಗುತ್ತದೆ. ಪೊಲೀಸ್ ಠಾಣೆಗಳಲ್ಲಿ ಅತೀ ಹೆಚ್ಚು ಪೋಕ್ಸೋ ಪ್ರಕರಣಗಳೇ ದಾಖಲಾಗುತ್ತಿವೆ. ಇದೆಲ್ಲದಕ್ಕೂ ಶಿಕ್ಷಣ ಒಂದೇ ಮೂಲ ಮಂತ್ರವಾಗಿದೆ. ಶಿಕ್ಷಣದಿಂದ ಮಾತ್ರ ಎಲ್ಲವನ್ನೂ ಹೋಗಲಾಡಿಸಬಹುದು. ವಿದ್ಯಾರ್ಥಿಗಳಾದ ತಾವುಗಳು ಯಾವುದೇ ಕೆಟ್ಟ ಆಲೋಚನೆ ಮಾಡದೇ, ಓದಿನ ಕಡೆಗೆ ಗಮನ ಹರಿಸಿ, ತಾವು ಓದಿದ ಶಾಲೆಗಳಿಗೆ ಅಧಿಕಾರಿಯಾಗಿ, ಶಿಕ್ಷಕರಾಗಿ ಬಂದು ಸೇವೆ ಸಲ್ಲಿಸುವಂತಾಗಬೇಕೆಂದರು. Read this also : ಗೋವಿನ ಕಣ್ಣು-ಕೊಂಬು ಕಿತ್ತು, ರಕ್ತಾಭಿಷೇಕ, ಕ್ಷುದ್ರ ಪೂಜೆಗಾಗಿ ಮೂಕ ಪ್ರಾಣಿಯ ಬಲಿ? ಅಮಾವಾಸ್ಯೆಗೂ ಮುನ್ನ ನಡೆದ ಕರಾಳ ಘಟನೆ..!

Local News – ಸೋಲು ಗೆಲುವು ಸಮನಾಗಿ ಸ್ವೀಕರಿಸಿ
ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಮಾತನಾಡಿದ ತಾಪಂ ಇಒ ನಾಗಮಣಿ, ವಿದ್ಯಾರ್ಥಿಗಳಲ್ಲಿನ ಬುದ್ದಿ ಶಕ್ತಿಯನ್ನು ಹೆಚ್ಚಿಸಲು ಚೆಸ್, ಕೇರಂ ನಂತಹ ಆಟಗಳು ಸಹಕಾರಿಯಾಗಿದೆ. ಈ ಕ್ರೀಡೆಗಳ ಕುರಿತು ಈ ಭಾಗದಲ್ಲಿ ಹೆಚ್ಚು ಪ್ರಚಾರ ಮಾಡಬೇಕಿದೆ. ವಿದ್ಯಾರ್ಥಿಗಳು ಈ ರೀತಿಯ ಸ್ಪರ್ಧೆಗಳನ್ನು ಆಯೋಜಿಸುವಾಗ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕು. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು. ಜೊತೆಗೆ ಬಾಲ್ಯ ವಿವಾಹದ ಕುರಿತು ಜಾಗೃತಾಗಬೇಕು. ಬಾಲ್ಯವಿವಾಹಕ್ಕೆ ತಮ್ಮ ಪೋಷಕರು ಮುಂದಾದರೇ ಅವರಿಗೆ ತಿಳಿಹೇಳಬೇಕು. ಕಠಿಣ ಪರಿಶ್ರಮದಿಂದ ಓದಿ ಒಳ್ಳೆಯ ಸ್ಥಾನ ಪಡೆದುಕೊಂಡು ತಾವು ಹುಟ್ಟಿದ ನಾಡಿನ ಸೇವೆ ಮಾಡಬೇಕು ಎಂದರು.

Local News – ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರು
ಇನ್ನೂ ಚೆಸ್, ಕೇರಂ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಈ ಸಮಯದಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಅತಿಕ್ ಪಾಷ, ತಿರುಮಣಿ ಗ್ರಾಪಂ ಅಧ್ಯಕ್ಷೆ ಮಮತಾ, ಸೋಮೇನಹಳ್ಳಿ ಗ್ರಾಪಂ ಅಧ್ಯಕ್ಷೆ ಸುಮಂಗಲಮ್ಮ, ತಿರುಮಣಿ ಪಿಡಿಒ ಶ್ರೀನಿವಾಸಮೂರ್ತಿ, ಸೋಮೇನಹಳ್ಳಿ ಪಿಡಿಒ ನರಸಿಂಹಮೂರ್ತಿ, ದಪ್ಪರ್ತಿ ಪಿಡಿಒ ರಾಮಾಂಜಿ, ಬಿಇಒ ಕೃಷ್ಣಕುಮಾರಿ, ಆದರ್ಶ ಶಾಲೆಯ ಮುಖ್ಯಶಿಕ್ಷಕಿ ಕೃಷ್ಣಕುಮಾರಿ, ನೌಕರರ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ, ಕಾರ್ಯದರ್ಶಿ ಬಿ.ಆರ್.ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಲಾಜಿ, ಶ್ರೀರಾಮಪ್ಪ, ಜಿಪಿಟಿ ಶಿಕ್ಷಕರ ಸಂಘದ ರಾಜಶೇಖರ್, ಪ್ರೌಢಶಾಲಾ ಶಿಕ್ಷಕರ ಸಂಘದ ಲಕ್ಷ್ಮೀನರಸಿಂಹಗೌಡ, ಸಿಡಿಪಿಒ ರಫೀಕ್ ಸೇರಿದಂತೆ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಹಲವು ಇದ್ದರು.
