Honeytrap : ಕೈತುಂಬಾ ಸಂಬಳ, ಆದರೂ ವಂಚನೆ : ‘ಡೇಟಿಂಗ್ ಆ್ಯಪ್’ ನಲ್ಲಿ ಹನಿಟ್ರ್ಯಾಪ್ ಮಾಡಿ ಸಿಕ್ಕಿಬಿದ್ದ ಟೆಕ್ಕಿ ಲವ್ ಬರ್ಡ್ಸ್…!

Honeytrap – ಟೆಕ್ ಸಿಟಿ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳೆಂದರೆ ಕೈತುಂಬಾ ಸಂಬಳ, ವೀಕೆಂಡ್ ಪಾರ್ಟಿ, ಹೈ-ಫೈ ಜೀವನ! ಆದರೆ, ಇಲ್ಲೊಂದು ಐಟಿ ಕಂಪನಿಯ ಜೋಡಿ, ಎಲ್ಲಾ ಸೌಲಭ್ಯಗಳಿದ್ದರೂ ದುರಾಸೆಗೆ ಬಿದ್ದು, ಅಡ್ಡದಾರಿಯಲ್ಲಿ ಸುಲಭವಾಗಿ ಹಣ ಮಾಡುವ ಅಡ್ಡದಾರಿ ಹಿಡಿದು ಈಗ ಪೊಲೀಸರ ಅತಿಥಿಯಾಗಿದ್ದಾರೆ.

Arrested techie couple in Bengaluru involved in dating app honeytrap scam, police holding recovered gold jewellery, crime investigation scene

Honeytrap – ಚೆನ್ನಾಗಿ ದುಡಿಯುತ್ತಿದ್ದರೂ ವಂಚನೆಯ ದಾರಿ ಏಕೆ?

ತಮಿಳುನಾಡು ಮೂಲದ ಕವಿಪ್ರಿಯಾ ಮತ್ತು ಆಕೆಯ ಬಾಯ್‌ಫ್ರೆಂಡ್ ಹರ್ಷವರ್ಧನ ಇಬ್ಬರೂ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಒಳ್ಳೆಯ ಕೆಲಸ, ಕೈ ತುಂಬಾ ಸಂಬಳ ಇತ್ತು. ಆದರೆ ವೀಕೆಂಡ್ ಪಾರ್ಟಿ, ಮೋಜು-ಮಸ್ತಿಗಾಗಿ ಹಣದ ವ್ಯಾಮೋಹ ಬೆಳೆಯಿತು. ಇದ್ದಬದ್ದ ಹಣವನ್ನು ಐಷಾರಾಮಿ ಜೀವನಕ್ಕಾಗಿ ಖರ್ಚು ಮಾಡಿದ ಈ ಜೋಡಿ, ಮತ್ತೆ ಹಣ ಹೊಂದಿಸಲು ಸುಲಭ ದಾರಿಯನ್ನು ಹುಡುಕಿತು. ಅದುವೇ ‘ಡೇಟಿಂಗ್ ಆ್ಯಪ್ ವಂಚನೆ’ (Dating App Fraud)!

Honeytrap – ಡೇಟಿಂಗ್ ಆ್ಯಪ್‌ನಲ್ಲಿ ‘ಪ್ರೀತಿಯ ಬಲೆ’

ಪುಲ್ ಆ್ಯಕ್ಟಿವ್ ಆಗಿದ್ದ ಈ ಜೋಡಿ, ಹಣದಾಸೆಗೆ ಸಿಲುಕಿ ಡೇಟಿಂಗ್ ಆ್ಯಪ್​ಗಳಲ್ಲಿ ಅಮಾಯಕರನ್ನು ಹುಡುಕುತ್ತಿದ್ದರು. ಇವರ ಗಾಳಕ್ಕೆ ಸಿಕ್ಕಿದವರು ಕೂಡ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಯುವಕ. ಆತನ ಬಗ್ಗೆ ಮಾಹಿತಿ ಕಲೆಹಾಕಿದ ಕವಿಪ್ರಿಯಾ, ಆತನೊಂದಿಗೆ ಸ್ನೇಹ ಬೆಳೆಸಿದ್ದಾಳೆ. ಒಂದು ತಿಂಗಳ ಪರಿಚಯದ ನಂತರ, ನವೆಂಬರ್ 11 ರಂದು ಇಂದಿರಾನಗರದ ಲಾಡ್ಜ್‌ವೊಂದರಲ್ಲಿ ಇಬ್ಬರೂ ಭೇಟಿಯಾಗಿದ್ದಾರೆ.

Arrested techie couple in Bengaluru involved in dating app honeytrap scam, police holding recovered gold jewellery, crime investigation scene

ಒಟ್ಟಿಗೆ ಊಟ, ಪಾರ್ಟಿ ಮಾಡಿದರು. ಸ್ವಲ್ಪ ಹೊತ್ತಿನ ನಂತರ ಯುವಕ ಪ್ರಜ್ಞೆ ತಪ್ಪಿ ಮಲಗಿದ್ದ. ಈ ಅವಕಾಶಕ್ಕಾಗಿ ಕಾಯುತ್ತಿದ್ದ ಕವಿಪ್ರಿಯಾ ಮತ್ತು ಹರ್ಷವರ್ಧನ, ಆತನ ಮೇಲಿದ್ದ ಬ್ರಾಸ್‌ಲೈಟ್, ಚಿನ್ನದ ಚೈನ್, ಹೆಡ್‌ಸೆಟ್ ಮತ್ತು ನಗದು ದೋಚಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. Read this also : ಲಿವ್-ಇನ್ ಪಾಲುದಾರನನ್ನೇ ಕೊ**ಲೆ ಮಾಡಿದ ಪ್ರೇಯಸಿ: ವಿಜಯಪುರದಲ್ಲಿ ನಡೆದಿದ್ದೇನು?

Honeytrap – 6.89 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ತಮಿಳುನಾಡಿಗೆ ಪರಾರಿ!

ಈ ಹೈಟೆಕ್ ಜೋಡಿ ದೋಚಿದ್ದು ಬರೋಬ್ಬರಿ 6.89 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 12 ಸಾವಿರ ರೂ. ಮೌಲ್ಯದ ಹೆಡ್‌ಸೆಟ್ ಹಾಗೂ 10 ಸಾವಿರ ರೂಪಾಯಿ ನಗದು. ದೋಚಿದ ಚಿನ್ನಾಭರಣದಲ್ಲಿ ಕೆಲವನ್ನು ಬೆಂಗಳೂರಿನಲ್ಲಿ ಅಡವಿಟ್ಟು, ನಂತರ ತಮಿಳುನಾಡಿಗೆ ಪರಾರಿಯಾಗಿದ್ದರು. ಮೋಸ ಹೋದ ಯುವಕ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ ನಂತರ, ಪೊಲೀಸರು ತನಿಖೆ ನಡೆಸಿ, ಹನಿಟ್ರ್ಯಾಪ್ (Honey Trap) ಮಾಡಿದ ಈ ಟೆಕ್ಕಿ ಜೋಡಿಯನ್ನು ತಮಿಳುನಾಡಿನಿಂದ ಬಂಧಿಸಿ ಕರೆತಂದಿದ್ದಾರೆ.

Arrested techie couple in Bengaluru involved in dating app honeytrap scam, police holding recovered gold jewellery, crime investigation scene

ಪೊಲೀಸರ ವಿಚಾರಣೆ ವೇಳೆ, ಕವಿಪ್ರಿಯಾ ಮತ್ತು ಹರ್ಷವರ್ಧನ ಸೇರಿ ಈ ಸಂಪೂರ್ಣ ವಂಚನೆಯನ್ನು ಯೋಜಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಜೋಡಿಯನ್ನು ಬಂಧಿಸಿದ್ದು, ಚೆನ್ನೈನಲ್ಲಿ ಅಡವಿಟ್ಟಿದ್ದ ಆಭರಣಗಳನ್ನು ಜಪ್ತಿ ಮಾಡಲು ತೆರಳಿದ್ದಾರೆ. ಕೈತುಂಬಾ ಸಂಬಳ ಬರ್ತಿದ್ದರೂ ಸುಖಾಸುಮ್ಮನೆ ಮೋಜು-ಮಸ್ತಿಗೆ ಬಲಿಯಾದ ಈ ಟೆಕ್ಕಿ ಜೋಡಿ ಈಗ ಜೈಲು ಪಾಲಾಗಿದ್ದು, ದುರಾಸೆಯು ಹೇಗೆ ಒಳ್ಳೆಯ ಜೀವನವನ್ನೂ ಹಾಳುಮಾಡುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ.

Leave a Comment

Your email address will not be published. Required fields are marked *

Scroll to Top