Sunday, November 16, 2025
HomeNationalVideo : ನ್ಯಾಯಯುತ ದುಡಿಮೆಗಾಗಿ ರೈಲಿನ ಹಿಂದೆ ಓಡಿದ ಕೂಲಿ! ಮಾನವೀಯತೆ ಮರೆತ ಪ್ರಯಾಣಿಕನ ಅಮಾನವೀಯ...

Video : ನ್ಯಾಯಯುತ ದುಡಿಮೆಗಾಗಿ ರೈಲಿನ ಹಿಂದೆ ಓಡಿದ ಕೂಲಿ! ಮಾನವೀಯತೆ ಮರೆತ ಪ್ರಯಾಣಿಕನ ಅಮಾನವೀಯ ಕೃತ್ಯ!

Video – ನಿಯತ್ತು ಮತ್ತು ಬೆವರು ಸುರಿಸಿ ದುಡಿಯುವ ಕೈಗಳಿಗೆ ದ್ರೋಹ ಬಗೆಯಬಾರದು ಎಂಬುದು ಲೋಕ ನೀತಿ. ಆದರೆ, ಇಲ್ಲೊಂದು ಅಮಾನವೀಯ ಘಟನೆ ನಡೆದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ನಡೆದಿರುವುದು ಬಾಂಗ್ಲಾದೇಶದ ರಾಜಧಾನಿ ಢಾಕಾ ರೈಲು ನಿಲ್ದಾಣದಲ್ಲಿ. ಪ್ರಯಾಣಿಕನೊಬ್ಬ ರೈಲ್ವೆ ನಿಲ್ದಾಣದ ಪ್ರಾಮಾಣಿಕ ಕೂಲಿಯೊಬ್ಬನಿಗೆ ತಾನು ದುಡಿಸಿಕೊಂಡಿದ್ದ ಹಣವನ್ನು ಕೊಡದೇ ಮೋಸ ಮಾಡಿದ್ದಾನೆ. ಪಾಪ, ಆ ಕೂಲಿ ತನ್ನ ನ್ಯಾಯಯುತ ದುಡಿಮೆಯ ಹಣಕ್ಕಾಗಿ ಓಡುತ್ತಿದ್ದ ರೈಲಿನ ಹಿಂದೆ ಜೀವದ ಹಂಗು ತೊರೆದು ಓಡಿದ್ದಾನೆ.

Railway vendor running behind a moving train after a passenger refused to pay for his service, captured in a viral video

Video – ‘ಸರ್​​ಪ್ಲೀಸ್​​ ನನ್ನ ಹಣ ನೀಡಿ’

ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ, ನೋಡಿದವರ ಕಣ್ಣಂಚಲ್ಲಿ ನೀರು ತರಿಸುವಂತಿದೆ. ಕೂಲಿ ಎಷ್ಟೇ ಅಂಗಲಾಚಿದರೂ, ಎಷ್ಟೇ ಕೇಳಿಕೊಂಡರೂ, ಆ ಪ್ರಯಾಣಿಕನ ಹೃದಯ ಕರಗಲಿಲ್ಲ. ಆತ ನಿರ್ದಯತೆಯಿಂದ ವರ್ತಿಸುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು. ದುರದೃಷ್ಟವಶಾತ್, ಪಕ್ಕದಲ್ಲಿ ನಿಂತಿದ್ದ ಯಾರೂ ಕೂಡ ಆ ಕೂಲಿಯ ಸಹಾಯಕ್ಕೆ ಬರದಿರುವುದು ಮತ್ತಷ್ಟು ನೋವಿನ ಸಂಗತಿ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ : Click Here

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸೋಜೋಲ್ ಅಲಿ ಎಂಬುವವರು, “ನಿಮ್ಮ ಫೋನ್ ನಂಬರ್ ಹೇಳಿ, ನಾನು ಹಣ ಹಾಕುವೆ,” ಎಂದು ಕೂಲಿಗೆ ಹೇಳಿದರೂ, ಆತ ಪ್ರತಿಕ್ರಿಯೆ ನೀಡಲಿಲ್ಲ. ಕೇವಲ ಒಬ್ಬ ವ್ಯಕ್ತಿ ಮಾಡಿದ ಮೋಸ ಇಡೀ ಮನುಕುಲದ ಮೇಲೆ ಕಪ್ಪು ಚುಕ್ಕೆ ಇಟ್ಟಂತೆ ಭಾಸವಾಗುತ್ತದೆ.

Video – ನೆಟ್ಟಿಗರ ಆಕ್ರೋಶ: “ಮನುಷ್ಯ ಮೊದಲು ಮಾನವೀಯತೆ ಕಲಿಬೇಕು”

ಈ ವಿಡಿಯೋ ನೋಡಿದ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಿಯತ್ತಿನಿಂದ ದುಡಿಯುವ ಇಂತಹ ಕೂಲಿಗಳಿಗೆ ಮೋಸ ಮಾಡುವುದು ಸರಿಯಲ್ಲ. ಮೋಸ ಮಾಡುವ ಇಂತಹ ಜನರಿಗೆ ಸರಿಯಾದ ಶಿಕ್ಷೆ ಆಗಬೇಕು” ಎಂದು ಒತ್ತಾಯಿಸಿದ್ದಾರೆ.

Railway vendor running behind a moving train after a passenger refused to pay for his service, captured in a viral video

ಈ ಘಟನೆ ಮನುಷ್ಯತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಾವು ಮೊದಲು ಮಾನವೀಯತೆಯನ್ನು ಕಲಿಯಬೇಕು. ಪ್ರತಿಯೊಬ್ಬ ದುಡಿಮೆಗಾರನನ್ನು ಗೌರವದಿಂದ ಮತ್ತು ನ್ಯಾಯಯುತವಾಗಿ ನಡೆಸಿಕೊಳ್ಳುವ ಅಗತ್ಯವಿದೆ ಎಂಬ ಸಂದೇಶವನ್ನು ಈ ವೈರಲ್ ವಿಡಿಯೋ ಜಗತ್ತಿಗೆ ಸಾರಿದೆ.

 

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular