Illegal Relationship – ನಂಬಿಕೆ, ಪ್ರೀತಿಯ ಅಡಿಪಾಯದ ಮೇಲೆ ನಿಂತಿರುವ ಸಂಸಾರದಲ್ಲಿ ಅನ್ಯ ಸಂಬಂಧವೊಂದು ಕಾಲಿಟ್ಟರೆ, ಆ ಕುಟುಂಬದ ಕಥೆಯೇನು? ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದ್ದೇ ದುರಂತ ಘಟನೆಯೊಂದು ನಡೆದಿದ್ದು, ಇಬ್ಬರು ಮಕ್ಕಳ ತಾಯಿಯಾದ ಪತ್ನಿ, ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದನೆಂದು ಸ್ವತಃ ತನ್ನ ತಾಳಿಕಟ್ಟಿದ ಗಂಡನನ್ನೇ ಕೊಲೆ ಮಾಡಿದ್ದಾಳೆ.

ವೀರಣ್ಣ ಮತ್ತು ಶಿವಮ್ಮ 13 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳೂ ಇದ್ದರು. ಹೊರಗಿನವರಿಗೆ, ಇದು ಸುಖಿ ಸಂಸಾರವೇ ಆಗಿತ್ತು. ಆದರೆ, ನಾಲ್ಕು ವರ್ಷಗಳ ಹಿಂದೆ, ಶಿವಮ್ಮನಿಗೆ ಹೆಚ್.ಡಿ.ಕೋಟೆಯ ಬಲರಾಮ ಎಂಬಾತನ ಪರಿಚಯವಾಯಿತು. ಈ ಪರಿಚಯ ಕ್ರಮೇಣ ಅಕ್ರಮ ಸಂಬಂಧಕ್ಕೆ ತಿರುಗಿದ್ದು, ಶಿವಮ್ಮನ ಜೀವನವನ್ನೇ ಬೇರೆ ದಿಕ್ಕಿಗೆ ಕೊಂಡೊಯ್ದಿದೆ.
Illegal Relationship – ಅಡ್ಡಿಯಾದ ಪತಿ: ನ್ಯಾಯ ಪಂಚಾಯಿತಿಯ ಎಚ್ಚರಿಕೆಯೂ ಲೆಕ್ಕಕ್ಕಿಲ್ಲ
ಪತ್ನಿ ಶಿವಮ್ಮನ ಅಕ್ರಮ ಸಂಬಂಧದ ವಿಚಾರ ಪತಿ ವೀರಣ್ಣನಿಗೆ ತಿಳಿದಾಗ, ಆತ ತೀವ್ರ ಆಘಾತಕ್ಕೆ ಒಳಗಾಗಿ ವಿರೋಧ ವ್ಯಕ್ತಪಡಿಸಿದ್ದಾನೆ. ಈ ವಿಚಾರದಲ್ಲಿ ಊರಿನಲ್ಲಿ ನ್ಯಾಯ ಪಂಚಾಯಿತಿಯೂ ನಡೆದಿದ್ದು, ಬಲರಾಮನ ಸಂಪರ್ಕವನ್ನು ಬಿಡುವಂತೆ ಶಿವಮ್ಮಳಿಗೆ ಹಲವು ಬಾರಿ ಬುದ್ಧಿ ಹೇಳಲಾಗಿತ್ತು. ಆದರೂ, ಶಿವಮ್ಮ ತನ್ನ ಸಂಬಂಧವನ್ನು ಮುಂದುವರಿಸಿದ್ದಳು. ವೀರಣ್ಣ ಅದೆಷ್ಟೇ ತಡೆದರೂ, ಪ್ರೀತಿ ಮತ್ತು ನಂಬಿಕೆಯ ಜಾಗದಲ್ಲಿ ಅನುಮಾನ ಮತ್ತು ಆತಂಕ ಮನೆ ಮಾಡಿತ್ತು.
Illegal Relationship – ಕೊಲೆ ಮತ್ತು ಆತ್ಮಹತ್ಯೆಯ ನಾಟಕ: ಬಯಲಾಯ್ತು ಪತ್ನಿಯ ಅಸಲಿ ಮುಖ
ಕಳೆದ ಶುಕ್ರವಾರ (ನವೆಂಬರ್ 09) ರಾತ್ರಿ ಬಲರಾಮ ಮತ್ತು ಶಿವಮ್ಮ ನಡುವೆ ಫೋನ್‌ನಲ್ಲಿ ಮಾತುಕತೆ ನಡೆದಿದೆ. ಇದರಿಂದಾಗಿ ಪತಿ-ಪತ್ನಿ ನಡುವೆ ಮತ್ತೆ ದೊಡ್ಡ ಜಗಳವಾಗಿದೆ. ರಾತ್ರಿ ಊಟ ಮಾಡಿ ವೀರಣ್ಣ ನಿದ್ದೆಗೆ ಜಾರುತ್ತಿದ್ದಂತೆಯೇ, ಶಿವಮ್ಮ ಆತನ ಹತ್ಯೆಗೆ ಸಂಚು ರೂಪಿಸಿದ್ದಾಳೆ. ಬಡಿಗೆಯಿಂದ ಮರ್ಮಾಂಗಕ್ಕೆ ಹೊಡೆದು ವೀರಣ್ಣನನ್ನು ಕೊಂದು ಹಾಕಿದ್ದಾಳೆ. Read this also : ಮದುವೆಯಾಗಿ 8 ತಿಂಗಳಲ್ಲೇ ಪತಿ ಸಾವಿಗೆ ಶರಣು; ಪತ್ನಿ ವಿರುದ್ಧ ಗಂಭೀರ ಆರೋಪ, ಬೆಂಗಳೂರಿನಲ್ಲಿ ನಡೆದ ಘಟನೆ…!
ಕೊಲೆ ಮಾಡಿದ ಬಳಿಕ ಆಕೆ ಸುಮ್ಮನೆ ಕೂರಲಿಲ್ಲ. ತನ್ನ ಅಪರಾಧವನ್ನು ಮುಚ್ಚಿ ಹಾಕಲು ದೊಡ್ಡ ಹೈಡ್ರಾಮಾ ಶುರುಮಾಡಿದಳು! ತಕ್ಷಣವೇ ಆಕೆ ವೀರಣ್ಣನ ಕುತ್ತಿಗೆಗೆ ಸೀರೆಯಿಂದ ನೇಣು ಹಾಕಿ, ನಂತರ ಮನೆಯಿಂದ ಹೊರಗೆ ಓಡೋಡಿ ಬಂದು, ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಜೋರಾಗಿ ಅಳಲು ಶುರುಮಾಡಿದ್ದಳು.
Illegal Relationship – ಪೊಲೀಸರ ಚಾಣಾಕ್ಷ ತನಿಖೆ: ಬಂಧನಕ್ಕೊಳಗಾದ ಶಿವಮ್ಮ
ಸ್ಥಳಕ್ಕೆ ಆಗಮಿಸಿದ ಹುಲ್ಲಹಳ್ಳಿ ಠಾಣೆಯ ಪೊಲೀಸರು ಪರಿಸ್ಥಿತಿಯನ್ನು ಗಮನಿಸಿದರು. ಕುತ್ತಿಗೆಯಲ್ಲಿ ಸೀರೆ ಇದ್ದರೂ, ವೀರಣ್ಣನ ದೇಹದ ಮೇಲಿದ್ದ ಗಾಯಗಳು ಮತ್ತು ಘಟನೆಯ ವಿವರಗಳು ಪೊಲೀಸರಿಗೆ ಅನುಮಾನ ಹುಟ್ಟಿಸಿತು. ಪತ್ನಿ ಶಿವಮ್ಮಳ ಮೇಲೆ ಅನುಮಾನಗೊಂಡ ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿದಾಗ, ಕೊನೆಗೂ ಆಕೆಯ ನವರಂಗಿ ಆಟ ಬಯಲಾಯಿತು.

ಬಲರಾಮನೊಂದಿಗಿನ ತನ್ನ ಅಕ್ರಮ ಸಂಬಂಧ ಮುಂದುವರಿಸಲು ಪತಿ ವೀರಣ್ಣ ಅಡ್ಡಿಯಾಗಿದ್ದ ಕಾರಣ ತಾನೇ ಆತನನ್ನು ಕೊಲೆ ಮಾಡಿರುವುದಾಗಿ ಶಿವಮ್ಮ ಒಪ್ಪಿಕೊಂಡಿದ್ದಾಳೆ. ಸದ್ಯ ಶಿವಮ್ಮನನ್ನು ಪೊಲೀಸರು ಬಂಧಿಸಿದ್ದು, ಆಕೆಗೆ ಯಾರಾದರೂ ಸಹಾಯ ಮಾಡಿದ್ದಾರಾ ಅಥವಾ ಈ ಕೃತ್ಯದಲ್ಲಿ ಬಲರಾಮನ ಪಾತ್ರವಿದೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
