Sunday, August 31, 2025
HomeNationalಪತಿ ಲೈಂಗಿಕ ಕ್ರಿಯೆ ನಡೆಸಿ ಎರಡು ವರ್ಷ ಆಯ್ತು ಎಂದು ಪತಿ ವಿರುದ್ದ ಧರಣಿ ಕುಳಿತ...

ಪತಿ ಲೈಂಗಿಕ ಕ್ರಿಯೆ ನಡೆಸಿ ಎರಡು ವರ್ಷ ಆಯ್ತು ಎಂದು ಪತಿ ವಿರುದ್ದ ಧರಣಿ ಕುಳಿತ ಪೊಲೀಸ್ ಪತ್ನಿ….!

ತನ್ನ ಪತಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಎರಡು ವರ್ಷ ಆಗಿದೆ ಎಂದು ಮೇ.21ರ ರಾತ್ರಿಯಿಂದ ನ್ಯಾಯಕ್ಕಾಗಿ ಆಗ್ರಹಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಕೊಮುರವಳ್ಳಿಯ ಪೊಲೀಸ್ ಠಾಣೆ ಎದುರು ಮಾನಸ ಎಂಬಾಕೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೂ ಮಾನಸ ಪತಿ ನಾಗರಾಜು ಕೊಮುರವಳ್ಳಿಯ ಪೊಲೀಸ್ ಠಾಣೆಯಲ್ಲಿ ಎಸ್.ಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ತೆಲಂಗಾಣದ ಕರೀಂನಗರ ಜಿಲ್ಲೆಯ ನಾಗರಾಜು ಹಾಗೂ ಮಾನಸ ಕಳೆದ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಕಳೆದ ಎರಡು ವರ್ಷಗಳಿಂದ ನನ್ನೊಂದಿಗೆ ಪತಿ ಲೈಂಗಿಕ ಕ್ರಿಯೆ ನಡೆಸುತ್ತಿಲ್ಲ ಜೊತೆಗೆ ನನ್ನ ಇಬ್ಬರೂ ಮಕ್ಕಳನ್ನು ನನ್ನಿಂದ ದೂರು ಇಟ್ಟಿದ್ದಾರೆ ಎಂದು ಪತಿಯ ವಿರುದ್ದ ಮಾನಸ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಗಂಡ ಎರಡನೇ ಮದುವೆಯಾಗಿರುವ ಕಾರಣ ನನ್ನನ್ನು ದೂರ ಮಾಡಿದ್ದು, ಗಂಡನಿಂದ ನನಗೆ ನ್ಯಾಯ ಕೊಡಿಸಿ ಎಂದು ಮಾನಸ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

Police wife protest

ಈ ಕುರಿತು ಮಾದ್ಯಮಗಳಿಗೆ ಹೇಳಿಕೆ ನೀಡಿರುವ ಮಾನಸ ನನ್ನ ಪತಿ ಎರಡು ವರ್ಷಗಳ ಹಿಂದೆ ಮಹಿಳೆಯೊಬ್ಬರ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು. ಈ ಕಾರಣದಿಂದ ಆತ ಮನೆಗೆ ಬರೋದು ಕಡಿಮೆ ಮಾಡಿದ್ದ. ನಾನು ಹಾಗೂ ನನ್ನ ಮಕ್ಕಳು ಕರೀಂನಗರದಲ್ಲಿ ವಾಸವಾಗಿದ್ದೆವು. ಆಗಾಗ ಬಂದು ಹೋಗುತ್ತಿದ್ದ. ಎರಡು ತಿಂಗಳ ಹಿಂದೆ ಕರೀಂನಗರಕ್ಕೆ ಬಂದ ನಾಗರಾಜು ನನ್ನ ಮಕ್ಕಳನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ಈಗ ಮಕ್ಕಳು ಎಲ್ಲಿದ್ದಾರೆ ಎಂಬ ವಿಷಯ ಸಹ ಹೇಳುತ್ತಿಲ್ಲ. ಇದೀಗ ಡಿವೋರ್ಸ್ ನೀಡುವಂತೆ ಒತ್ತಾಯ ಮಾಡುತ್ತಿದ್ದಾನೆ. ನನಗೆ ಇದೀಗ ಉಳಿದಿರೋದು ಆತ್ಮಹತ್ಯೆ ಮಾಡಿಕೊಳ್ಳುವುದು ಒಂದೇ ಎಂದು ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನೂ ಪತಿಯ ವಿರುದ್ದ ಸಿದ್ದಿಪೇಟೆ ಸಿಪಿ, ಕರೀಂನಗರ ಮಹಿಳಾ ಪೊಲೀಸ್ ಠಾಣೆ ಹಾಗೂ ಚೆರ್ಯಾಲ ಸಿಐ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದೇನೆ. ಆದರೂ ಆತನ ವಿರುದ್ದ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮಾನಸ ಗಂಭಿರ ಆರೋಪ ಮಾಡಿದ್ದಾರೆ. ನನಗೆ ಮಕ್ಕಳು ಹಾಗೂ ನ್ಯಾಯ ಸಿಗುವವರೆಗೂ ಪ್ರತಿಭಟನೆ ಕೈ ಬಿಡಲ್ಲ ಎಂದು ಮಾನಸ ಆಗ್ರಹಿಸಿದ್ದಾರೆ. ಈ ಕುರಿತು ಕೊಮುರವಳ್ಳೀ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್‍ ಶ್ರೀನು ಮೇಲಾಧಿಕಾರಿಗಳ ಆದೇಶದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗು‌ತ್ತದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular