Ahmedabad Murder – ಸಿನೆಮಾಗಳಲ್ಲಿ ನೋಡಿದಂತಹ ಘಟನೆಯೊಂದು ನಿಜ ಜೀವನದಲ್ಲಿ ನಡೆದರೆ ಹೇಗಿರುತ್ತದೆ? ಗುಜರಾತ್‌ನ ಅಹಮದಾಬಾದ್‌ನಲ್ಲಿ (ಅಹಮದಾಬಾದ್ ಕೊಲೆ) ಅಂತಹದ್ದೇ ಬೆಚ್ಚಿ ಬೀಳಿಸುವ ಕಥೆ ಹೊರಬಿದ್ದಿದೆ. ‘ದೃಶ್ಯಂ’ (ದೃಶ್ಯಂ ಶೈಲಿ) ಸಿನೆಮಾದ ಮಾದರಿಯಲ್ಲಿ ಪತಿಯನ್ನು ಕೊಲೆ ಮಾಡಿ, ಆತನ ದೇಹವನ್ನು ಒಂದು ವರ್ಷದ ಕಾಲ ರಹಸ್ಯವಾಗಿ ಬಚ್ಚಿಟ್ಟಿದ್ದ ಕೃತ್ಯವನ್ನು ಪೊಲೀಸರು ಭೇದಿಸಿದ್ದಾರೆ.

Ahmedabad Murder – ಒಂದು ವರ್ಷದ ಮಿಸ್ಸಿಂಗ್ ಕೇಸ್
ಅಹಮದಾಬಾದ್‌ನ ಸಮೀರ್ ಅನ್ಸಾರಿ (35) ಎಂಬ ವ್ಯಕ್ತಿ 2024ರಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಸುಮಾರು ಒಂದು ವರ್ಷದವರೆಗೂ ಆತನ ಸುಳಿವೇ ಸಿಗಲಿಲ್ಲ. ಆರಂಭದಲ್ಲಿ ಪೊಲೀಸರಿಗೆ ಇದು ಸಾಮಾನ್ಯ ಮಿಸ್ಸಿಂಗ್ ಕೇಸ್ ಎಂದು ಅನಿಸಿತ್ತು. ಆದರೆ, ಮೂರು ತಿಂಗಳ ಹಿಂದೆ ಈ ಪ್ರಕರಣ ಕ್ರೈಂ ಬ್ರಾಂಚ್ ಕೈಗೆ ಬಂದಾಗ, ಕೊಲೆಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರಿಗೆ ಅನುಮಾನ ಶುರುವಾಯಿತು. ಸಮೀರ್ ಪತ್ನಿ ರೂಬಿ ಮತ್ತು ಆಕೆಯ ಪ್ರಿಯಕರ ಇಮ್ರಾನ್ ನಡುವಿನ ಅಕ್ರಮ ಸಂಬಂಧದಿಂದಾಗಿ ಈ ಜಗಳ ಆರಂಭವಾಗಿತ್ತು. ಇದರಿಂದಲೇ ಸಮೀರ್‌ರನ್ನು ಶಾಶ್ವತವಾಗಿ ದೂರ ಮಾಡಲು ರೂಬಿ ನಿರ್ಧರಿಸಿದ್ದಳು.
ದೇಹ ಬಚ್ಚಿಟ್ಟಿದ್ದು ಎಲ್ಲಿ ಗೊತ್ತಾ?
ಪೊಲೀಸರು ತನಿಖೆ ಶುರು ಮಾಡಿದಾಗ, ಸಮೀರ್ ಮೊಬೈಲ್ 14 ತಿಂಗಳಿಂದ ಸ್ವಿಚ್ ಆಫ್ ಆಗಿತ್ತು. ಆತ ತನ್ನ ಸ್ನೇಹಿತರನ್ನಾಗಲಿ, ಸಂಬಂಧಿಕರನ್ನಾಗಲಿ ಸಂಪರ್ಕಿಸಿಯೇ ಇರಲಿಲ್ಲ. ಈ ಸುಳಿವು ಹಿಡಿದು ಪೊಲೀಸರು ಇಮ್ರಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಸಿನಿಮಾ ಕಥೆ ಬಯಲಾಗಿದೆ. (Ahmedabad Murder) ದೃಶ್ಯಂ ಸಿನಿಮಾದಂತೆಯೇ, ಪತ್ನಿ ರೂಬಿ, ತನ್ನ ಪ್ರಿಯಕರ ಇಮ್ರಾನ್ ಮತ್ತು ಆತನ ಇಬ್ಬರು ಸ್ನೇಹಿತರ ಸಹಾಯದಿಂದ ತನ್ನ ಪತಿ ಸಮೀರ್ ಅನ್ಸಾರಿಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದಳು.
ಬೆಚ್ಚಿ ಬೀಳಿಸುವ ರಹಸ್ಯ
ಕೊಲೆಯಾದ ನಂತರ ಸಮೀರ್ ದೇಹವನ್ನು ಹೇಗಾದರೂ ಮಾಡಿ ಶಾಶ್ವತವಾಗಿ ಮರೆಮಾಚಲು ಪ್ಲಾನ್ ಮಾಡಿದ್ದರು. ರೂಬಿ ಮತ್ತು ಆಕೆಯ ಪ್ರಿಯಕರ ಸೇರಿ ಸಮೀರ್ ದೇಹವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಅದೇ ಮನೆಯ ಅಡುಗೆಮನೆಯ ನೆಲದಡಿಯಲ್ಲಿ ಟೈಲ್ಸ್ ಹಾಕಿ ಹೂತು ಹಾಕಿದ್ದರು! ಒಂದು ವರ್ಷದ ನಂತರವೂ ಯಾವುದೇ ಸುಳಿವು ಸಿಗದಂತೆ ಅವರು (Ahmedabad Murder) ಬಹಳ ಸೂಕ್ಷ್ಮವಾಗಿ ಈ ಕೆಲಸ ಮಾಡಿದ್ದರು.

ತಪ್ಪೊಪ್ಪಿಗೆಯಿಂದ ಬಯಲಾದ ಸತ್ಯ: ಅಡುಗೆ ಮನೆಯಿಂದ ಅಸ್ತಿಪಂಜರ ವಶ!
ರೂಬಿ ಮೇಲೆ ಪೊಲೀಸರಿಗೆ ಅನುಮಾನ ಬಂದರೂ, ಆಕೆಯ ವಿರುದ್ಧ ಯಾವುದೇ ಗಟ್ಟಿ ಪುರಾವೆ ಇರಲಿಲ್ಲ. ಆದರೆ, ಕೊನೆಗೂ ಪ್ರಿಯಕರ ಇಮ್ರಾನ್ ಪೊಲೀಸರ ಮುಂದೆ ಮಂಡಿ ಊರಿ, ಇಡೀ ಕೊಲೆ ಕಥೆಯನ್ನು ಒಪ್ಪಿಕೊಂಡ. ರೂಬಿ ಹೇಗೆ ಕೊಲೆಗೆ ಪ್ಲಾನ್ ಮಾಡಿದಳು, ಪತಿಯನ್ನು ಕಟ್ಟಿ ಹಾಕಿ ಚಾಕುವಿನಿಂದ ಇರಿದು, (Ahmedabad Murder) ನಂತರ ದೇಹವನ್ನು ತುಂಡು ಮಾಡಿ ಅಡುಗೆಮನೆಯ ನೆಲದಡಿಯಲ್ಲಿ ಹೂತರು ಎಂಬುದನ್ನು ವಿವರಿಸಿದ್ದಾನೆ. Read this also : ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆ : 38ರ ಮಹಿಳೆ-19ರ ಯುವಕನ ಅಕ್ರಮ ಸಂಬಂಧ, ನಿರಂತರ ಪೀಡನೆಗೆ ಬೇಸತ್ತು ಯುವಕನ ದುರಂತ ಅಂತ್ಯ..!
ಇಮ್ರಾನ್‌ನ ಹೇಳಿಕೆಯ ಆಧಾರದ ಮೇಲೆ, ಅಹಮದಾಬಾದ್ ಕ್ರೈಂ ಬ್ರಾಂಚ್ ಪೊಲೀಸರು ಆ ಮನೆಯ ಅಡುಗೆಮನೆಯ ನೆಲವನ್ನು ಅಗೆದು, ಸಮೀರ್ ಅನ್ಸಾರಿಯ ಅಸ್ತಿಪಂಜರದ ಅವಶೇಷಗಳನ್ನು (ಅಸ್ತಿಪಂಜರ ಪತ್ತೆ) ವಶಪಡಿಸಿಕೊಂಡಿದ್ದಾರೆ. ರೂಬಿ ಸೇರಿದಂತೆ ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
