ಸಾಲ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಸಿಬಿಲ್ ಸ್ಕೋರ್ (CIBIL Score) ಎಷ್ಟು ಮುಖ್ಯ ಅನ್ನೋದನ್ನ ಎಲ್ಲರಿಗೂ ಗೊತ್ತಿರುವ ವಿಷಯ. ನಿಮ್ಮ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಮಾತ್ರ ಬ್ಯಾಂಕ್‌ಗಳು ನಿಮಗೆ ಸುಲಭವಾಗಿ ಸಾಲ ನೀಡಲು ಆಸಕ್ತಿ ತೋರಿಸುತ್ತವೆ. ಸ್ಕೋರ್ ಕಡಿಮೆ ಇದ್ದರೆ ಸಾಲ ಸಿಗುವುದು ಕಷ್ಟ, ಸಿಕ್ಕರೂ ಹೆಚ್ಚಿನ ಬಡ್ಡಿ ದರ ವಿಧಿಸುತ್ತಾರೆ. ಹಾಗಾಗಿ, ಸಿಬಿಲ್ ಸ್ಕೋರ್ ಅನ್ನು ಯಾವಾಗಲೂ ಉತ್ತಮವಾಗಿ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು.

ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇದ್ದರೆ, ಚಿಂತಿಸಬೇಕಾಗಿಲ್ಲ. ಕೇವಲ ಕೆಲವು ತಿಂಗಳುಗಳಲ್ಲಿ ನಿಮ್ಮ ಸ್ಕೋರ್ ಅನ್ನು 100 ಪಾಯಿಂಟ್‌ಗಳಿಗಿಂತ ಹೆಚ್ಚು ಹೆಚ್ಚಿಸಲು ಸಹಾಯ ಮಾಡುವ 6 ಪ್ರಮುಖ ಟಿಪ್ಸ್‌ಗಳು ಇಲ್ಲಿವೆ.
CIBIL Score ಅಂದ್ರೇನು?
ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ (Credit Score) ಎಂಬುದು ಕ್ರೆಡಿಟ್ ಬ್ಯೂರೋ ಸಂಸ್ಥೆಗಳು ನೀಡುವ ಮೂರು-ಅಂಕಿಯ ಸಂಖ್ಯೆ (300 ರಿಂದ 900 ರವರೆಗೆ). ನಿಮ್ಮ ಹಿಂದಿನ ಕ್ರೆಡಿಟ್ ಕಾರ್ಡ್ ವಹಿವಾಟುಗಳು, ಸಾಲ ಮರುಪಾವತಿಗಳು ಮತ್ತು ಇತರ ಹಣಕಾಸಿನ ವ್ಯವಹಾರಗಳ ಆಧಾರದ ಮೇಲೆ ಇದನ್ನು ಲೆಕ್ಕ ಹಾಕಲಾಗುತ್ತದೆ. ಸಾಲವನ್ನು ಮರುಪಾವತಿ ಮಾಡುವಲ್ಲಿ ನೀವು ಎಷ್ಟು ಜವಾಬ್ದಾರಿಯುತರು ಎಂಬುದನ್ನು ಈ ಸ್ಕೋರ್ ಸಾಲದಾತರಿಗೆ ತಿಳಿಸುತ್ತದೆ.

CIBIL Score ಹೆಚ್ಚಿಸಲು 6 ಮುಖ್ಯ ಟಿಪ್ಸ್‌ಗಳು
ಸಿಬಿಲ್ ಸ್ಕೋರ್ ಒಂದೇ ತಿಂಗಳಲ್ಲಿ ಹೆಚ್ಚಾಗದಿರಬಹುದು, ಆದರೆ ಈ ಕ್ರಮಗಳನ್ನು ಅನುಸರಿಸಿದರೆ, ಖಂಡಿತಾ ಸುಧಾರಣೆ ಕಾಣುತ್ತದೆ:
1. ಆಗಾಗ ಚೆಕ್ ಮಾಡಿ!
ಕ್ರೆಡಿಟ್ ಬ್ಯೂರೋ ಸಂಸ್ಥೆಗಳ ಅಧಿಕೃತ ವೆಬ್‌ಸೈಟ್ ಮೂಲಕ ನಿಮ್ಮ ಕ್ರೆಡಿಟ್ ರಿಪೋರ್ಟ್ (Credit Report) ಅನ್ನು ಆಗಾಗ ಪರಿಶೀಲಿಸುತ್ತಾ ಇರಿ. ವರದಿಯಲ್ಲಿ ಏನಾದರೂ ತಪ್ಪುಗಳು (Errors) ಇದ್ದರೆ, ಉದಾಹರಣೆಗೆ, ನೀವು ಈಗಾಗಲೇ ಮುಗಿಸಿದ ಸಾಲವು ಇನ್ನೂ ಬಾಕಿ ಇದೆ ಎಂದು ತೋರಿಸುತ್ತಿದ್ದರೆ, ತಕ್ಷಣ ಅದನ್ನು ಸರಿಪಡಿಸಲು ರಿಪೋರ್ಟ್ ಮಾಡಿ. ಈ ತಪ್ಪು ಸರಿಪಡಿಸಿದ ತಕ್ಷಣ ನಿಮ್ಮ ಸ್ಕೋರ್ ಸುಧಾರಿಸುತ್ತದೆ.
2. ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ
ನಿಮ್ಮ ಪಾವತಿ ಇತಿಹಾಸ (Payment History) ನಿಮ್ಮ ಸ್ಕೋರ್ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. (CIBIL Score) ಕ್ರೆಡಿಟ್ ಕಾರ್ಡ್ ಬಿಲ್‌ಗಳು, ಸಾಲದ ಇಎಂಐಗಳನ್ನು (EMIs) ಮತ್ತು ಇತರ ಬಿಲ್‌ಗಳನ್ನು ನಿಗದಿತ ದಿನಾಂಕದೊಳಗೆ ಪಾವತಿಸಿ. ಕೇವಲ ಒಂದೇ ಒಂದು ಪಾವತಿ ತಡವಾದರೂ ನಿಮ್ಮ ಸ್ಕೋರ್ ಕಡಿಮೆಯಾಗಬಹುದು.
3. 30% ಒಳಗೆ ಬಳಸಿ!
ಕ್ರೆಡಿಟ್ ಯುಟಿಲೈಸೇಶನ್ ರೇಶಿಯೋ (Credit Utilization Ratio – CUR) ನೇರವಾಗಿ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಪ್ರಭಾವಿಸುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ ಒಂದು ಲಕ್ಷ ರೂಪಾಯಿ ಆಗಿದ್ದರೆ, ಪ್ರತಿ ತಿಂಗಳು ₹30,000 ಕ್ಕಿಂತ ಕಡಿಮೆ (ಶೇ. 30ರ ಒಳಗೆ) ಮಾತ್ರ ಬಳಸಿ. ಇದರಿಂದ ನಿಮ್ಮ (CIBIL Score) ಆರ್ಥಿಕ ಶಿಸ್ತು ಉತ್ತಮವಾಗಿದೆ ಎಂದು ಸಾಬೀತಾಗುತ್ತದೆ.
4. ಕ್ರೆಡಿಟ್ ಮಿತಿ ಹೆಚ್ಚಿಸಿಕೊಳ್ಳಿ!
CUR ಅನ್ನು ಉತ್ತಮಗೊಳಿಸಲು, ನಿಮ್ಮ ಬ್ಯಾಂಕ್‌ಗೆ ಮನವಿ ಮಾಡಿ ನಿಮ್ಮ ಕ್ರೆಡಿಟ್ ಕಾರ್ಡ್‌ನ ಮಿತಿ (Credit Limit) ಹೆಚ್ಚಿಸಲು ಕೇಳಿ. ಮಿತಿ ಹೆಚ್ಚಿದರೂ ನೀವು ಖರ್ಚು ಮಾಡುವ ಮೊತ್ತ ಒಂದೇ ರೀತಿ ಇದ್ದರೆ, ನಿಮ್ಮ CUR ಕಡಿಮೆಯಾಗುತ್ತದೆ. ಇದರಿಂದ ಸಿಬಿಲ್ ಸ್ಕೋರ್ ಹೆಚ್ಚಾಗುತ್ತದೆ. ಆದರೆ, ಖರ್ಚನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
5. ಹಳೆಯ ಖಾತೆಗಳನ್ನು ಕ್ಲೋಸ್ ಮಾಡಬೇಡಿ!
ಬಹಳಷ್ಟು ಜನರು ಬಳಸದ ಹಳೆಯ ಬ್ಯಾಂಕ್ ಖಾತೆಗಳು ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಮುಚ್ಚುತ್ತಾರೆ. ಆದರೆ, ಹಳೆಯ ಕ್ರೆಡಿಟ್ ಕಾರ್ಡ್‌ಗಳನ್ನು ಮುಚ್ಚದೆ ಸಕ್ರಿಯವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಇದು ನಿಮ್ಮ ಒಟ್ಟು ಕ್ರೆಡಿಟ್ ಮಿತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಕ್ರೆಡಿಟ್ ಇತಿಹಾಸದ ಅವಧಿ (Length of Credit History) ಹೆಚ್ಚಾಗಲು ಸಹಾಯ ಮಾಡುತ್ತದೆ. ಇದರಿಂದ ಸಿಬಿಲ್ ಸ್ಕೋರ್ (CIBIL Score) ಸುಧಾರಿಸುತ್ತದೆ.
6. ಹೆಚ್ಚು ಸಾಲ ಮತ್ತು ಕಾರ್ಡ್‌ಗಳಿಗೆ ಅಪ್ಲೈ ಮಾಡಬೇಡಿ!

ಒಂದೇ ಬಾರಿಗೆ ಅಥವಾ ಕಡಿಮೆ ಅವಧಿಯಲ್ಲಿ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳು ಅಥವಾ ಸಾಲಗಳಿಗಾಗಿ ಅರ್ಜಿ ಸಲ್ಲಿಸಬೇಡಿ. ಪ್ರತಿ ಅರ್ಜಿಯನ್ನೂ ಬ್ಯಾಂಕ್‌ಗಳು ‘ಹಾರ್ಡ್ ಕ್ರೆಡಿಟ್ ಎನ್‌ಕ್ವೈರಿ’ (Hard Credit Enquiry) ಮೂಲಕ ಪರಿಶೀಲಿಸುತ್ತವೆ. ಹೆಚ್ಚು ಎನ್‌ಕ್ವೈರಿಗಳಾದರೆ ನಿಮ್ಮ ಸಿಬಿಲ್ ಸ್ಕೋರ್ ಕುಸಿಯುತ್ತದೆ. ಆದ್ದರಿಂದ, ಹೊಸ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಎಚ್ಚರಿಕೆ ವಹಿಸಿ. Read this also : ನಿಮ್ಮ CIBIL ಸ್ಕೋರ್ ಇದ್ದಕ್ಕಿದ್ದಂತೆ ಇಳಿದಿದೆಯೇ? ಇದರ ಹಿಂದಿನ ಕಾರಣ ಮತ್ತು ದೂರು ಸಲ್ಲಿಸುವುದು ಹೇಗೆ?
ಉತ್ತಮ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಿ ಮತ್ತು ನಿಮ್ಮ ಕ್ರೆಡಿಟ್ ಯುಟಿಲೈಸೇಶನ್ ರೇಶಿಯೋ ಮೇಲೆ ಗಮನ (CIBIL Score) ಕೊಡಿ. ಇದರಿಂದ ನಿಮ್ಮ ಸಿಬಿಲ್ ಸ್ಕೋರ್ ಸುಲಭವಾಗಿ ಹೆಚ್ಚಾಗುತ್ತದೆ ಮತ್ತು ನಿಮಗೆ ಸುಲಭವಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲಗಳು ಹಾಗೂ ಕ್ರೆಡಿಟ್ ಕಾರ್ಡ್‌ಗಳು ಸಿಗುತ್ತವೆ.
