CCTV – ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಒಂದು ಆಘಾತಕಾರಿ ಘಟನೆಯು ಎಲ್ಲೆಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಮನೆಗೆಲಸದವಳು ಮುದ್ದಿನ ನಾಯಿಮರಿಯೊಂದನ್ನು ನೆಲಕ್ಕೆ ಬಡಿದು ಬರ್ಬರವಾಗಿ ಕೊಲೆ ಮಾಡಿರುವ ಮನಕಲಕುವ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಅಮಾನವೀಯ ಕೃತ್ಯ ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

CCTV – ಆರೈಕೆಗೆ ನೇಮಕಗೊಂಡಿದ್ದವಳಿಂದಲೇ ಕ್ರೂರ ಕೃತ್ಯ
ರಾಶಿ ಪೂಜಾರಿ ಎಂಬುವವರಿಗೆ ಸೇರಿದ ‘ಗೂಫಿ’ (Goofy) ಎಂಬ ಪುಟ್ಟ ನಾಯಿಮರಿಯು ಈ ಕ್ರೌರ್ಯಕ್ಕೆ ಬಲಿಯಾಗಿದೆ. ಆರೋಪಿ ಪುಷ್ಪಲತಾ (Pupalatha) ಎಂಬ ಮಹಿಳೆಯನ್ನು ಗೂಫಿಯ ಆರೈಕೆಗಾಗಿಯೇ ನಿರ್ದಿಷ್ಟವಾಗಿ ನೇಮಿಸಲಾಗಿತ್ತು. ಆಕೆಗೆ ಮಾಲೀಕರ ಮನೆಯಲ್ಲಿ ವಸತಿ, ಊಟದ ಜೊತೆಗೆ ಸಂಬಳವನ್ನೂ ನೀಡಲಾಗುತ್ತಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ಅಕ್ಟೋಬರ್ 31 ರಂದು ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಆಕೆ ಈ ಘೋರ ಕೃತ್ಯ ಎಸಗಿದ್ದಾಳೆ. ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ.
CCTV – ಸಿಸಿಟಿವಿ ದೃಶ್ಯಾವಳಿಯಲ್ಲಿ ಭಯಾನಕ ಸತ್ಯ ಬಹಿರಂಗ!
ನಾಯಿಮರಿಯನ್ನು ಕೊಂದ ನಂತರ ಪುಷ್ಪಲತಾ, ‘ಲಿಫ್ಟ್‌ನಿಂದ ಹೊರಗೆ ಬರುವಾಗ ಆಕಸ್ಮಿಕವಾಗಿ ಬಿದ್ದು ಸತ್ತಿದೆ’ ಎಂದು ಮಾಲೀಕರಿಗೆ ಸುಳ್ಳು ಹೇಳಿದ್ದಳು. ಆದರೆ, ನಾಯಿಮಾಲೀಕರಾದ ರಾಶಿ ಪೂಜಾರಿ ಅವರು ಭದ್ರತಾ ಸಿಬ್ಬಂದಿಯನ್ನು ವಿಚಾರಿಸಿದಾಗ ಸಂಶಯ ಮೂಡಿತು.
ತಕ್ಷಣ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ನಿಜವಾದ ಕ್ರೌರ್ಯ ಬಯಲಾಯಿತು. ಲಿಫ್ಟ್‌ನೊಳಗೆ ಆ ಮಹಿಳೆ ಶ್ವಾನದ ಪಟ್ಟಿಯನ್ನು ಹಿಡಿದು ಅದನ್ನು ಪದೇ ಪದೇ ನೆಲಕ್ಕೆ ಬಡಿದು ಕೊಲ್ಲುವ ಭಯಾನಕ ದೃಶ್ಯ ಸೆರೆಯಾಗಿದೆ. ಹತ್ಯೆ ಮಾಡಿದ ನಂತರ ಆಕೆ ಯಾವುದೇ ಭಯವಿಲ್ಲದೆ ಸತ್ತ ನಾಯಿಮರಿಯನ್ನು ಒಂದು ಕೈಯಲ್ಲಿ ಹಿಡಿದು ಲಿಫ್ಟ್‌ನಿಂದ ಹೊರಗೆ ಹೋಗುತ್ತಿರುವುದು ಸಹ ವಿಡಿಯೋದಲ್ಲಿ ದಾಖಲಾಗಿದೆ. Read this also : “ಫೇಮಸ್ ಆಗ್ಬೇಕು” ಅಂತ ಸ್ಕೂಟರ್ ಮೇಲೆ ಸ್ಟಂಟ್ ಮಾಡಿದ್ರು… ಆದರೆ ಆಗಿದ್ದು ಬೇರೆ, ವಿಡಿಯೋ ನೋಡಿ..!

CCTV – ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ, ಪೊಲೀಸರಿಗೆ ದೂರು
ಸಿಸಿಟಿವಿ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಾಣಿಪ್ರಿಯರು ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಂಬಿಕೆ ಇಟ್ಟು ಕೆಲಸಕ್ಕೆ ಇರಿಸಿಕೊಂಡವರೇ ಇಂತಹ ಕ್ರೂರ ಕೃತ್ಯ ಎಸಗಿರುವುದು ದಿಗ್ಭ್ರಮೆ ಮೂಡಿಸಿದೆ. ನಾಯಿಮಾಲೀಕ ರಾಶಿ ಪೂಜಾರಿ ಅವರು ತಕ್ಷಣ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪುಷ್ಪಲತಾ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಾಣಿ ಕಲ್ಯಾಣ ಕಾರ್ಯಕರ್ತರು ಈ ಕೃತ್ಯವನ್ನು ಕಠಿಣವಾಗಿ ಖಂಡಿಸಿದ್ದು, ಆರೋಪಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ : Click Here
ಸದ್ಯ ಬಾಗಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಈ ಕೃತ್ಯದ ಹಿಂದೆ ಬೇರೆ ಯಾವುದೇ ಕಾರಣಗಳಿವೆಯೇ ಅಥವಾ ಇಂತಹ ವರ್ತನೆಗೆ ಪ್ರಚೋದನೆ ಏನು ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಾಲೀಕರು ಈ ಮೊದಲು ಪುಷ್ಪಲತಾ ವಿರುದ್ಧ ಯಾವುದೇ ಸಮಸ್ಯೆ ಇರಲಿಲ್ಲ ಎಂದು ತಿಳಿಸಿದ್ದಾರೆ.
