Bagar Hukum – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಾದ್ಯಂತ ಭೂಮಿ ಒಡೆತನ ಹಕ್ಕಿಗಾಗಿ ಅರ್ಜಿ ಸಲ್ಲಿಸಿರುವ ರೈತರಿಗೆ ಜಮೀನು ಮಂಜೂರು ಮಾಡುವ ನಿಟ್ಟಿನಲ್ಲಿ ಪ್ರತಿ ತಿಂಗಳು ಬಗರ್ ಹುಕುಂ ಸಮಿತಿ ಸಭೆಯನ್ನು ನಡೆಸಬೇಕೆಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ಗುಡಿಬಂಡೆ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಆಗ್ರಹಿಸಲಾಯಿತು.

Bagar Hukum – 20 ವರ್ಷವಾದರೂ ‘ಸಾಗುವಳಿ ಚೀಟಿ’ ಇಲ್ಲ!
ಈ ವೇಳೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಗುಡಿಬಂಡೆ ತಾಲೂಕು ಸಮಿತಿಯ ಸಂಯೋಜಕಿ ಸೌಭಾಗ್ಯಮ್ಮ ಮಾತನಾಡಿ, ತಾಲೂಕಿನಲ್ಲಿರುವ ಅನೇಕ ಭೂ ರಹಿತ ರೈತರು ಸರ್ಕಾರದ ಬಗರ್ ಹುಕುಂ ಯೋಜನೆಯಡಿ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸಿಕೊಳ್ಳುತ್ತಿದ್ದಾರೆ. ತಮಗೆ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಫಾರಂ.50, 53 ಹಾಗೂ 57 ರಲ್ಲಿ ಅರ್ಜಿಗಳನ್ನು (Bagar Hukum) ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿ ಸುಮಾರು 15-20 ವರ್ಷಗಳು ಕಳೆದರೂ ಇಲ್ಲಿಯವರೆಗೂ ಫಾರಂ ನಂ 50 ಹಾಗೂ 53 ರಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಇಂದಿಗೂ ಸಾಗುವಳಿ ಚೀಟಿ ನೀಡಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಸಮಿತಿಯ ಅಧ್ಯಕ್ಷರಾದ ಶಾಸಕ ಸುಬ್ಬಾರೆಡ್ಡಿಯವರು ಪ್ರತಿ ತಿಂಗಳು ಸಭೆ ನಡೆಸಿ ತ್ವರಿತವಾಗಿ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕು ಎಂದರು.
Bagar Hukum – ತಂತ್ರಾಂಶದಲ್ಲಿ ಮಾಯವಾದ ರೈತರ ಹೆಸರುಗಳು
ಇನ್ನೂ ಫಾರಂ ನಂ 57 ರಲ್ಲಿ ಅರ್ಜಿ ಸಲ್ಲಿಸಿ ಅನೇಕ ರೈತರ ಹೆಸರುಗಳು ತಂತ್ರಾಂಶದಲ್ಲಿ ಲಭ್ಯವಾಗುತ್ತಿಲ್ಲ. ಕೈ ಬರಹದ ಅರ್ಜಿ ನಕಲು ಪ್ರತಿಗಳು ರೈತರ ಬಳಿಯಿದೆ. ಕೈಬರಹದ ಅರ್ಜಿಗಳನ್ನು ಗಣಕೀಕರಣ ಮಾಡುವ ಜವಾಬ್ದಾರಿ ಅಧಿಕಾರಿಗಳಿಗೆ ಸೇರಿದ್ದು, ಆದರೆ ಈ ಕೆಲಸ ಅಧಿಕಾರಿಗಳು ಮಾಡಿಲ್ಲ. ಇದರಿಂದ ಅನೇಕ ರೈತರಿಗೆ ಅನ್ಯಾಯವಾಗಲಿದೆ. Read this also : NHAI ನಲ್ಲಿ ಭರ್ಜರಿ ಉದ್ಯೋಗಾವಕಾಶ! MBA, CA ಓದಿದವರಿಗೆ ಸುವರ್ಣಾವಕಾಶ…!

ಜೊತೆಗೆ ಕೆಲವೊಂದು ಜಮೀನುಗಳು ಪರಿಭಾವಿತ ಅರಣ್ಯ ಎಂದು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಅರಣ್ಯ ಇಲಾಖೆಯವರು ರೈತರು (Bagar Hukum) ಉಳುಮೆ ಮಾಡುತ್ತಿರುವ ಜಮೀನಿನ ಮೇಲೆ ಬೀಳುತ್ತಿದ್ದಾರೆ. ಕಂದಾಯ ಇಲಾಖೆಯವರು ಅರಣ್ಯ ಇಲಾಖೆಯ ಎನ್.ಒ.ಸಿ ಕೇಳುತ್ತಾರೆ. ಅದನ್ನು ಕಂದಾಯ ಇಲಾಖೆಯ ಅಧಿಕಾರಿಗಳೇ ಪಡೆದುಕೊಳ್ಳಬೇಕು. ಸಾಮಾನ್ಯ ರೈತರಿಗೆ ಈ ಕೆಲಸ ಮಾಡಲು ಆಗುವುದಿಲ್ಲ. ಇದರ ಜೊತೆಗೆ ಫಾರಂ ನಂ 50, 53 ರಲ್ಲಿ ಅರ್ಜಿ ಸಲ್ಲಿಸಿದ ರೈತರ ವಿವರಗಳನ್ನು ತಾಲೂಕು ಕಚೇರಿಯ ನೊಟೀಸ್ ಬೋರ್ಡ್ ನಲ್ಲಿ ಪ್ರಕಟಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಲಲಿತಮ್ಮ, ರಾಮಸ್ವಾಮಿ, ನಾರಾಯಣಪ್ಪ, ಗೌಸ್ ಪೀರ್, ಪ್ರಮೀಳಮ್ಮ, ಮಾಧವಿ, ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಸಿಬ್ಬಂದಿಯಾದ ಸಂತೋಷ್ ಕುಮಾರ್ ಹಾಗೂ ಅನುಷಾ ಸೇರಿದಂತೆ ಹಲವರು ಇದ್ದರು.
