Auto Driver – ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವಿನ ಕಿರಿಕಿರಿಗಳು ಹೊಸತೇನಲ್ಲ. ಆಟೋ ದರ, ಮೀಟರ್, ಕ್ಯಾನ್ಸಲ್ ವಿಚಾರಗಳಿಗೆ ದಿನನಿತ್ಯ ಎಷ್ಟೋ ವಿವಾದಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹುದೇ ಒಂದು ಘಟನೆ ಮತ್ತೆ ವೈರಲ್ ಆಗಿದ್ದು, ’10 ನಿಮಿಷ ಕಾಯಿಸಿದ್ದಕ್ಕೆ’ ಮಹಿಳಾ ಪ್ರಯಾಣಿಕರು ಮತ್ತು ಆಟೋ ಚಾಲಕರ ನಡುವೆ ದೊಡ್ಡ ಜಗಳವೇ ನಡೆದಿದೆ.

Auto Driver – 10 ನಿಮಿಷ ಕಾಯಿಸಿದ ದರ: ಯಾರದ್ದು ತಪ್ಪು?
ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ ಈ ವಿವಾದ ಬಯಲಾಗಿದೆ. ಘಟನೆಯ ವಿವರ ಹೀಗಿದೆ: ಒಬ್ಬ ಮಹಿಳೆ ಆ್ಯಪ್ ಮೂಲಕ ಆಟೋ ಬುಕ್ ಮಾಡಿದ್ದಾರೆ. ಆಟೋ ಚಾಲಕರು ಲೊಕೇಶನ್‌ಗೆ ಬಂದು, ಮಹಿಳೆಗೆ ಕರೆ ಮಾಡಿ ‘ಬಂದಿದ್ದೇನೆ’ ಎಂದು ತಿಳಿಸಿದ್ದಾರೆ. ಅದಕ್ಕೆ ಮಹಿಳೆ ‘ಬರುತ್ತೇನೆ, ಮನೆಗೆ ಬೀಗ ಹಾಕುತ್ತಿದ್ದೇನೆ’ ಎಂದು ಹೇಳಿದ್ದಾರೆ. ಆದರೆ, ಹೇಳಿದಂತೆ ಬರದೆ ಸುಮಾರು 10 ನಿಮಿಷಗಳ ಕಾಲ ಚಾಲಕರನ್ನು ಕಾಯಿಸಿದ್ದಾರೆ. 10 ನಿಮಿಷದ ನಂತರ ಬಂದ ಮಹಿಳೆಗೆ, ಆಟೋ ಚಾಲಕರು “ಮೇಡಂ, ನನ್ನನ್ನು ಕಾಯಿಸಿದ್ದಕ್ಕಾಗಿ ನೀವು ಹೆಚ್ಚುವರಿ ಹಣ ಪಾವತಿಸಬೇಕು” ಎಂದು ಕೇಳಿದ್ದಾರೆ. ಇಲ್ಲೇ ಶುರುವಾಗಿದ್ದು ಬಿಗ್ ಫೈಟ್!
Auto Driver – ವಾದ-ವಿವಾದ: ಕ್ಯಾನ್ಸಲ್ ಮಾಡಬೇಕಾಗಿದ್ದು ಯಾರು?
ಚಾಲಕರ ಮಾತಿಗೆ ಮಹಿಳೆ ಒಪ್ಪದೆ, “ನಾನು ಯಾವುದೇ ಕಾರಣಕ್ಕೂ ಹೆಚ್ಚಿನ ಪಾವತಿ ಮಾಡುವುದಿಲ್ಲ. ಕಾಯಿಸಿದ್ದು ತಪ್ಪು ಎಂದು ನಿಮಗೆ ಅನಿಸಿದರೆ, ನೀವೇ ಬುಕಿಂಗ್ ಅನ್ನು ಕ್ಯಾನ್ಸಲ್ ಮಾಡಬೇಕಿತ್ತು” ಎಂದು ವಾದಿಸಿದ್ದಾರೆ. ಆದರೆ, ಚಾಲಕರು “ನಾನು ಯಾಕೆ ರದ್ದು ಮಾಡಬೇಕು? ನೀವೇ ರದ್ದು ಮಾಡಬೇಕಿತ್ತು” ಎಂದು ಪಟ್ಟು ಹಿಡಿದಿದ್ದಾರೆ. ಕೊನೆಗೆ ಇಬ್ಬರೂ ತಮ್ಮ ವಾದವನ್ನು ನಿಲ್ಲಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ. Read this also : ‘ಇಲ್ಲಿ ರೊಮ್ಯಾನ್ಸ್ ಬೇಡ, ಇದು OYO ಅಲ್ಲ’ – ಆಟೋ ಡ್ರೈವರ್ ಖಡಕ್ ಪೋಸ್ಟರ್..!
Auto Driver – ಸಾಮಾಜಿಕ ಜಾಲತಾಣದಲ್ಲಿ ಆಟೋ ವಿವಾದಕ್ಕೆ ಕಮೆಂಟ್ ಸುರಿಮಳೆ!
ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
- ಚಾಲಕನ ಪರ ನಿಂತವರು ಹೇಳುವುದೇನು?: “ಚಾಲಕರ ಸಮಯಕ್ಕೆ ಬೆಲೆ ಇದೆ. 10 ನಿಮಿಷ ಕಾಯಿಸುವುದು ಸರಿಯಲ್ಲ” ಎಂದು ಹಲವರು ಚಾಲಕರಿಗೆ ಬೆಂಬಲ ನೀಡಿದ್ದಾರೆ. ಒಬ್ಬ ಬಳಕೆದಾರ “ಮನೆಯಿಂದ ಹೊರಟ ಮೇಲೆ ಮಾತ್ರ ಆಟೋ ಬುಕ್ ಮಾಡಬೇಕು. ಮತ್ತೊಬ್ಬರನ್ನು ಕಾಯಿಸಬಾರದು” ಎಂದು ಹೇಳಿದ್ದಾರೆ.
- ಪ್ರಯಾಣಿಕರ ಪರ ವಾದವೇನು?: ಇನ್ನು ಕೆಲವರು “ಇದು ಕಮ್ಯುನಿಕೇಷನ್ ಮತ್ತು ಹೊಂದಾಣಿಕೆಯ ಕೊರತೆ. 10 ನಿಮಿಷ ಕಾಯಿಸುವಿಕೆ ಕೆಲವೊಮ್ಮೆ ಕೆಲಸದ ಭಾಗವಾಗಿರಬಹುದು” ಎಂದು ಹೇಳುವ ಮೂಲಕ ಮಹಿಳಾ ಪ್ರಯಾಣಿಕರ ಪರವಾಗಿ ನಿಂತಿದ್ದಾರೆ.
