Traffic Police – ದೇಶದ ಟೆಕ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಸಂಚಾರ ಪೊಲೀಸರ ದರ್ಪ ಮಿತಿಮೀರುತ್ತಿದೆ ಎಂಬ ಆರೋಪಗಳು ಮತ್ತೆ ಕೇಳಿ ಬಂದಿವೆ. ಸಂಚಾರ ನಿಯಂತ್ರಣ ಮತ್ತು ಸುರಕ್ಷತೆ ಕಾಪಾಡಬೇಕಾದ ಪೊಲೀಸರು, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರ ಮೇಲೆ ಹಲ್ಲೆ ನಡೆಸುತ್ತಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ, ರಸ್ತೆ ಮಧ್ಯೆಯೇ ಒಬ್ಬ ಕ್ಯಾಬ್ ಚಾಲಕನಿಗೆ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.

Traffic Police – ಪಾರ್ಕಿಂಗ್ ವಿಚಾರಕ್ಕೆ ಮಾತಿನ ಚಕಮಕಿ, ನಂತರ ಕೈ ಕೈ ಮಿಲಾಯಿಸಿ ಹಲ್ಲೆ
ವೈರಲ್ ವಿಡಿಯೋದಲ್ಲಿರುವ ಮಾಹಿತಿ ಪ್ರಕಾರ, ಈ ಘಟನೆ ನಗರದ ಆರ್.ಟಿ. ನಗರ ಫ್ಲೈಓವರ್ ಸಮೀಪದ ಶೆಲ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಕ್ಯಾಬ್ ಚಾಲಕ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದ್ದಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಆತನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಕೋಪಗೊಂಡ ಟ್ರಾಫಿಕ್ ಪೊಲೀಸ್ ಅಧಿಕಾರಿ ಸಾರ್ವಜನಿಕರ ಎದುರೇ ಚಾಲಕನಿಗೆ ಕೈ ಮಾಡಿದ್ದಾರೆ.
ಈ ದೃಶ್ಯವನ್ನು ಅಲ್ಲಿ ನೆರೆದಿದ್ದವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆದ ಕೂಡಲೇ, ನೆಟ್ಟಿಗರು ಟ್ರಾಫಿಕ್ ಪೊಲೀಸರ ಈ ವರ್ತನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹಲ್ಲೆ ನಡೆಸಿದ ಅಧಿಕಾರಿಯ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. (Traffic Police)
Traffic Police – ಸಾರ್ವಜನಿಕರಿಂದ ಪ್ರಶ್ನೆಗಳ ಸುರಿಮಳೆ
ಸಂಚಾರಿ ಪೊಲೀಸ್ ಅಧಿಕಾರಿಯ ಈ ದರ್ಪದ ವರ್ತನೆ ಬಗ್ಗೆ ಸಾರ್ವಜನಿಕರು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ: Click here
- ಸಮವಸ್ತ್ರದ ಉದ್ದೇಶವೇನು?: “ಪೊಲೀಸ್ ಸಮವಸ್ತ್ರ ಇರುವುದು ಜನರಿಂದ ಭಯ ಗಳಿಸಲು ಅಲ್ಲ, ಗೌರವ ಗಳಿಸಲು. ಸಣ್ಣ ಪಾರ್ಕಿಂಗ್ ವಿವಾದಕ್ಕೆ ಹಲ್ಲೆ ಮಾಡುವುದು ಅಧಿಕಾರ ದುರುಪಯೋಗ” (Traffic Police) ಎಂದು ಹಲವರು ಕಮೆಂಟ್ ಮಾಡಿದ್ದಾರೆ.
- ಕಾನೂನು ಹೇಳುವುದೇನು?: “ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದರೆ ದಂಡ ಹಾಕಬೇಕು, ಅದು ಕಾನೂನು ಹೇಳುವುದು. ಆದರೆ, ರಸ್ತೆಯಲ್ಲೇ ಹಲ್ಲೆ ನಡೆಸುವುದು ಕಾನೂನಾ? ಇಂತಹ ಗೂಂಡಾಗಿರಿ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಅಗತ್ಯ” ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. Read this also : ನಿಮಗೆ ಸಲಾಂ ಮೇಡಂ! ಲೇಡಿ ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ….!

ಈ ಹಿಂದೆ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಬೈಕ್ ಸವಾರನೊಬ್ಬನಿಗೆ ಪೊಲೀಸ್ ಕಪಾಳಮೋಕ್ಷ ಮಾಡಿದ್ದ ಘಟನೆ ಕೂಡ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇಂತಹ ಘಟನೆಗಳು (Traffic Police) ಬೆಂಗಳೂರು ಸಂಚಾರಿ ಪೊಲೀಸ್ ವಿಭಾಗದ ಮೇಲಿನ ಸಾರ್ವಜನಿಕ ನಂಬಿಕೆ ಕುಗ್ಗುವಂತೆ ಮಾಡುತ್ತಿದ್ದು, ಇಲಾಖೆಯ ಉನ್ನತ ಅಧಿಕಾರಿಗಳು ಶಿಸ್ತುಕ್ರಮಕ್ಕೆ ಮುಂದಾಗಬೇಕಿದೆ.
