ರಾಜಧಾನಿ ಬೆಂಗಳೂರಿನಲ್ಲಿ (Bengaluru) ಒಂದು ಅತ್ಯಂತ ಗಂಭೀರ ಅಪರಾಧ ಪ್ರಕರಣ ವರದಿಯಾಗಿದೆ. ದಕ್ಷಿಣ ಕನ್ನಡದ ಪುತ್ತೂರು (Puttur) ಮೂಲದ ತಕ್ಷಿತ್ (20) ಎಂಬ ಯುವಕ, ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ‘ಗ್ರ್ಯಾಂಡ್ ಚಾಯ್ಸ್’ ಲಾಡ್ಜ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಈ ಯುವಕ ಕೊಡಗಿನ ರಕ್ಷಿತಾ ಎಂಬ ಯುವತಿ ಜೊತೆ 8 ದಿನಗಳ ಕಾಲ ಲಾಡ್ಜ್ ನಲ್ಲಿ ತಂಗಿದ್ದ. ಆದರೆ, ಯುವಕ ಸಾವನ್ನಪ್ಪುವ ಮುನ್ನವೇ ಯುವತಿ ಲಾಡ್ಜ್‌ನಿಂದ ಹೊರ ಹೋಗಿದ್ದಾಳೆ ಎಂದು ಮೂಲಗಳಿಂದ ತಿಳಿದುಬಂದಿದೆ.

Bengaluru Crime – ಲಾಡ್ಜ್‌ನಲ್ಲಿ ನಡೆದಿದ್ದೇನು?
ಪುತ್ತೂರು (Puttur) ಮೂಲದ ತಕ್ಷಿತ್ (20) ಎಂಬ ಯುವಕ, ವಿರಾಜಪೇಟೆಯ ರಕ್ಷಿತಾ ಎಂಬ ಯುವತಿ ಜೊತೆ ಅಕ್ಟೋಬರ್ 9 ರಂದು ಮಡಿವಾಳದ ಗ್ರ್ಯಾಂಡ್ ಚಾಯ್ಸ್ ಲಾಡ್ಜ್ಗೆ ಬಂದಿದ್ದ. ಕಾಲೇಜು ಕೆಲಸದ ನೆಪ ಹೇಳಿ ಇಬ್ಬರೂ ಒಟ್ಟಿಗೆ ತಂಗಿದ್ದರು. ಇಲ್ಲಿ ಇಬ್ಬರೂ ಬರೋಬ್ಬರಿ 8 ದಿನಗಳ ಕಾಲ ಉಳಿದುಕೊಂಡಿದ್ದರು.
Bengaluru Crime – 8 ದಿನಗಳ ಜೀವನಶೈಲಿ ಮತ್ತು ದುರಂತದ ರಾತ್ರಿ
ಲಾಡ್ಜ್ ಸಿಬ್ಬಂದಿ ನೀಡಿದ ಮಾಹಿತಿ ಪ್ರಕಾರ, ತಕ್ಷಿತ್ ಮತ್ತು ರಕ್ಷಿತಾ ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿಸುತ್ತಿದ್ದರು ಮತ್ತು ಹೊರಗಿನಿಂದಲೇ ಊಟ-ತಿಂಡಿ (Food) ತರಿಸಿಕೊಂಡು ಒಟ್ಟಿಗೆ ಇರುತ್ತಿದ್ದರು. ಆದರೆ, ಅಕ್ಟೋಬರ್ 17 ರಂದು ಅವರ ಜೀವನದ ಕಥೆಯೇ ಬದಲಾಯಿತು. ಘಟನೆ ನಡೆದ ರಾತ್ರಿ ಇಬ್ಬರೂ ಸ್ವಿಗ್ಗಿ (Swiggy) ಮೂಲಕ ಊಟ ಆರ್ಡರ್ ಮಾಡಿ ಸೇವಿಸಿದ್ದರು.
ಊಟ ಮಾಡಿದ ನಂತರ ಇಬ್ಬರಿಗೂ ಫುಡ್ ಪಾಯ್ಸಿನ್ (Food Poison) ಆದಂತೆ ಅನಿಸಿದೆ ಎನ್ನಲಾಗಿದೆ. ಕೂಡಲೇ ಇಬ್ಬರೂ ಮೆಡಿಕಲ್‌ಗೆ ಹೋಗಿ ಮಾತ್ರೆಗಳನ್ನು ತಂದು ಸೇವಿಸಿದ್ದಾರೆ. ಆರೋಗ್ಯ ಸ್ವಲ್ಪ ಸುಧಾರಿಸಿದ ನಂತರ ಯುವತಿ ರಕ್ಷಿತಾ ಲಾಡ್ಜ್‌ನಿಂದ ಹೊರಗೆ ಹೋಗಿದ್ದಾಳೆ. ದುರದೃಷ್ಟವಶಾತ್, ರೂಮಿನಲ್ಲಿ ಮಲಗಿದ್ದ ತಕ್ಷಿತ್ ಮಾತ್ರ ಮರುದಿನ ಬೆಳಗ್ಗೆ ಎದ್ದಿಲ್ಲ. ಆತ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

Bengaluru Crime – ಮಡಿವಾಳ ಪೊಲೀಸರಿಂದ ತನಿಖೆ ಚುರುಕು
ಯುವಕನ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೃತ ತಕ್ಷಿತ್ ಮತ್ತು ರಕ್ಷಿತಾ ಕೇವಲ ಪ್ರೇಮಿಗಳಾಗಿದ್ದರಾ? ಅಥವಾ ಬೇರೇನಾದರೂ ಸಮಸ್ಯೆ ಇತ್ತಾ? ಲಾಡ್ಜ್‌ನಿಂದ ಯುವತಿ ಹೊರಗೆ ಹೋಗಲು ಕಾರಣವೇನು? ತಕ್ಷಿತ್ ಸಾವು ಕೇವಲ ಅಜೀರ್ಣ ಅಥವಾ ವಿಷಾಹಾರದಿಂದಲೇ ಸಂಭವಿಸಿದೆಯೇ, ಅಥವಾ ಇದರ ಹಿಂದೆ ಬೇರೆ ಯಾವುದಾದರೂ ರಹಸ್ಯ ಅಡಗಿದೆಯೇ?
Read this also : ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆ: 24 ಗಂಟೆಯೊಳಗೆ ‘ಸೈಕೋ ಕಿಲ್ಲಿಂಗ್’ ಆರೋಪಿ ವಿಘ್ನೇಶ್ ಅಂದರ್!
ಮಡಿವಾಳ ಪೊಲೀಸರು (Police) ಈ ಕುರಿತು ಯುಡಿಆರ್ (UDR – Unnatural Death Report) ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು, ಯುವತಿ ರಕ್ಷಿತಾಳ ವಿಚಾರಣೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಸದ್ಯಕ್ಕೆ, ತಕ್ಷಿತ್ ಸಾವಿಗೆ ನಿಖರ ಕಾರಣ ಏನು ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.
