Honey Trap – ಉಡುಪಿ ಜಿಲ್ಲೆಯ ಬೆಳ್ಮಣ್ ಸಮೀಪದ ಸೂರಜ್ ಕಂಫರ್ಟ್ಸ್ ಲಾಡ್ಜ್‌ನಲ್ಲಿ ಇತ್ತೀಚೆಗೆ ನಡೆದ ಒಂದು ಮನಕಲಕುವ ಘಟನೆ ಕರಾವಳಿ ಭಾಗದ ಜನರನ್ನು ಬೆಚ್ಚಿಬೀಳಿಸಿದೆ. ನಿಟ್ಟೆ ಗ್ರಾಮದ 25 ವರ್ಷದ ಯುವಕ ಅಭಿಷೇಕ್ ದುರಂತವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹಿಂದೆ ಗಂಭೀರವಾದ ಹನಿಟ್ರ್ಯಾಪ್ ಮತ್ತು ಬ್ಲಾಕ್‌ಮೇಲ್ ಜಾಲ ಇರುವುದು ಬೆಳಕಿಗೆ ಬಂದಿದೆ. ಲೇಡಿಘೋಶನ್ ಆಸ್ಪತ್ರೆಯಲ್ಲಿ ಕೆಎಂಸಿ ಗುತ್ತಿಗೆ ಆಧಾರದ ಮೇಲೆ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಯುವಕನ ಸಾವಿನ ಸುತ್ತ ಹಲವು ಅನುಮಾನಗಳು ಮನೆ ಮಾಡಿವೆ.

Honey Trap – ಸೂಸೈಡ್ ನೋಟ್‌ನಲ್ಲಿ ಆಘಾತಕಾರಿ ಸತ್ಯಗಳು
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ, ಅಭಿಷೇಕ್ ಅವರು ತಾವು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ವಾಟ್ಸಾಪ್ ಗ್ರೂಪ್‌ನಲ್ಲಿ ಕೆಲವು ಧ್ವನಿ ಮತ್ತು ಪಠ್ಯ ಸಂದೇಶಗಳು, ಒಂದು ವಿಡಿಯೋ ಹಾಗೂ ಸೂಸೈಡ್ ನೋಟ್ ಅನ್ನು ಹಂಚಿಕೊಂಡಿದ್ದರು.
ಪೊಲೀಸರ ತನಿಖೆಯ ವೇಳೆ ಅಭಿಷೇಕ್ ಬರೆದಿದ್ದ ಸೂಸೈಡ್ ನೋಟ್‌ನಲ್ಲಿನ ವಿಷಯಗಳು ನಿಜಕ್ಕೂ ಆತಂಕಕಾರಿಯಾಗಿವೆ. ಒಂದು ಯುವತಿ ಮತ್ತು ಆಕೆಯ ಸ್ನೇಹಿತರು ಸೇರಿಕೊಂಡು, ಅಭಿಷೇಕ್ ಅವರ ಖಾಸಗಿ ಕ್ಷಣಗಳ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಾ ಪದೇ ಪದೇ ಹಣ ವಸೂಲಿ ಮಾಡುತ್ತಿದ್ದರು. ಈ ಒತ್ತಡವನ್ನು ತಾಳಲಾರದೆ ಯುವಕ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾನೆ ಎಂದು ನೋಟ್‌ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಘಟನೆ ಯುವಕರನ್ನು ಟಾರ್ಗೆಟ್ ಮಾಡುವ ಒಂದು ಸಂಘಟಿತ ಅಪರಾಧ ಜಾಲದ ಕಡೆಗೆ ಬೆರಳು ಮಾಡಿ ತೋರಿಸುತ್ತಿದೆ.
Honey Trap – ಪೊಲೀಸರ ತನಿಖೆ: ಮೂವರ ಬಂಧನ, ಮೊಬೈಲ್ ವಶ
ಪ್ರಕರಣದ ಗಂಭೀರತೆಯನ್ನು ಮನಗಂಡಿರುವ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಅಭಿಷೇಕ್ ಸಾವಿಗೆ ಪ್ರಚೋದನೆ ನೀಡಿದ ಆರೋಪದಡಿ (Abetment to Suicide Section) ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
- ಮೂವರು ಆರೋಪಿಗಳ ಗುರುತು ಪತ್ತೆ: ನಾಲ್ವರ ಪೈಕಿ ಈಗಾಗಲೇ ಮೂವರು ಆರೋಪಿಗಳನ್ನು ಗುರುತಿಸಲಾಗಿದೆ.
- ತಾಂತ್ರಿಕ ಸಾಕ್ಷ್ಯಗಳ ಸಂಗ್ರಹ: ಆರೋಪಿಗಳ ಮತ್ತು ಮೃತನ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು, ಅವುಗಳಲ್ಲಿರುವ ಫೋಟೋಗಳು, ವಿಡಿಯೋಗಳು ಮತ್ತು ಸಂದೇಶಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ.
- ಎಫ್‌ಎಸ್‌ಎಲ್‌ಗೆ ರವಾನೆ: ಹೆಚ್ಚಿನ ವೈಜ್ಞಾನಿಕ ಸಾಕ್ಷ್ಯಗಳಿಗಾಗಿ ಫೋನ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ತನಿಖೆಯ ನೇತೃತ್ವವನ್ನು ಕಾರ್ಕಳದ ಸಹಾಯಕ ಪೊಲೀಸ್ ಅಧೀಕ್ಷಕ ಹರ್ಷ ಪ್ರಿಯಮದ ಅವರು ವಹಿಸಿದ್ದಾರೆ.
Honey Trap – ಸಂಪೂರ್ಣ ತನಿಖೆಗೆ ಒತ್ತಾಯ
ಈ ಪ್ರಕರಣ ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ, ಇದರ ಹಿಂದೆ ದೊಡ್ಡ ಬ್ಲಾಕ್‌ಮೇಲ್ ದಂಧೆ ಅಡಗಿರಬಹುದು ಎಂಬ ಆತಂಕ ವ್ಯಕ್ತವಾಗಿದೆ. ವಿಶ್ವಕರ್ಮ ಒಕ್ಕೂಟ, ರಾಜಕೀಯ ಮುಖಂಡರು ಮತ್ತು ಹಲವು ಸಂಘಟನೆಗಳು ತಕ್ಷಣವೇ ಸಮಗ್ರ ತನಿಖೆ ನಡೆಸಿ, ಇಡೀ ಜಾಲವನ್ನು ಬಯಲಿಗೆಳೆಯಲು ಒತ್ತಾಯಿಸಿ ಮನವಿ ಸಲ್ಲಿಸಿವೆ. Read this also : ಆನ್ ಲೈನ್ ಡೇಟಿಂಗ್ ಬಲೆ: ಒಂದೇ ಕ್ಲಿಕ್, ಬ್ಯಾಂಕ್ ಖಾತೆಯಿಂದ ₹6.5 ಲಕ್ಷ ಮಾಯ..!

Honey Trap – ಉಡುಪಿ ಎಸ್‌ಪಿ ಹೇಳಿದ್ದೇನು?
ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ಮಾಧ್ಯಮಗಳೊಂದಿಗೆ ಮಾತನಾಡಿ, ತನಿಖೆಯ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಇದು ಪ್ರೀತಿ ವೈಫಲ್ಯದ ಪ್ರಕರಣದಂತೆ ಕಂಡರೂ, ಸೂಸೈಡ್ ನೋಟ್‌ನಲ್ಲಿರುವ ವಿಷಯಗಳನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕಿದೆ. ನಾವು ಈಗಲೇ ಯಾವುದೇ ತೀರ್ಮಾನಕ್ಕೆ ಬರುವುದಿಲ್ಲ. ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆತ್ಮಹತ್ಯೆಯ ಹಿಂದಿನ ನೈಜತೆಯನ್ನು ಪತ್ತೆ ಹಚ್ಚುತ್ತೇವೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದವರು ಯಾರೇ ಇರಲಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ತನಿಖೆ ಪಾರದರ್ಶಕವಾಗಿ ನಡೆಯಲಿದೆ. ಎಂದು ಅವರು ಭರವಸೆ ನೀಡಿದ್ದಾರೆ. ಇನ್ನೂ ಪ್ರಕರಣದ ಕುರಿತು ಇನ್ನಷ್ಟು ಪ್ರಮುಖ ವ್ಯಕ್ತಿಗಳು ಮತ್ತು ಆರೋಪಿಯ ಸ್ನೇಹಿತರ ವಿಚಾರಣೆ ಮುಂದುವರಿದಿದೆ.
