Monday, January 19, 2026
HomeNationalWedding Fraud : ಮದುವೆಯ ಹೆಸರಿನಲ್ಲಿ 'ಲಕ್ಷ' ಲೂಟಿ: ಫಸ್ಟ್‌ ನೈಟ್‌ ಮರುದಿನವೇ ವಧು ಪರಾರಿ,...

Wedding Fraud : ಮದುವೆಯ ಹೆಸರಿನಲ್ಲಿ ‘ಲಕ್ಷ’ ಲೂಟಿ: ಫಸ್ಟ್‌ ನೈಟ್‌ ಮರುದಿನವೇ ವಧು ಪರಾರಿ, 10ಕ್ಕೂ ಹೆಚ್ಚು ಯುವಕರಿಗೆ ಬೃಹತ್ ವಂಚನೆ!

Wedding Fraud – ಮದುವೆ ಅಂದ್ರೆ ನೂರಾರು ಕನಸು, ಸಂಭ್ರಮ. ಆದ್ರೆ, ಇಲ್ಲೊಂದು ಗ್ಯಾಂಗ್‌ ಮದುವೆಯನ್ನೇ ವಂಚನೆಯ ಅಸ್ತ್ರವನ್ನಾಗಿ ಬಳಸಿಕೊಂಡು, ಮದುವೆಯಾದ ಮರುದಿನವೇ ವರ ಮತ್ತು ಆತನ ಕುಟುಂಬವನ್ನು ಬೀದಿಗೆ ತಂದಿದೆ. ಉತ್ತರ ಪ್ರದೇಶದ ಅಲಿಗಢದಲ್ಲಿ ಒಂದು ಅಘಾತಕಾರಿ ಸತ್ಯ ಬಯಲಾಗಿದೆ. ಮದುವೆಯಾಗಿ ಫಸ್ಟ್‌ ನೈಟ್‌ ಕಳೆದು ಬೆಳಗಾಗುವಷ್ಟರಲ್ಲಿ ವಧು ಹಣ ಮತ್ತು ಚಿನ್ನಾಭರಣದೊಂದಿಗೆ ಪರಾರಿ ಆಗುತ್ತಾಳೆ. ಇದು ಒಬ್ಬ ಯುವಕನ ಕಥೆಯಲ್ಲ, ಈ ಗ್ಯಾಂಗ್‌ ಗೆ 10ಕ್ಕೂ ಹೆಚ್ಚು ಯುವಕರು ಬಲಿಯಾಗಿದ್ದಾರೆ!

Bride flees with cash and gold jewelry in Aligarh wedding fraud

Wedding Fraud – ಮದುವೆ ನೆಪದಲ್ಲಿ ಬಲೆ ಬೀಸಿದ ಗ್ಯಾಂಗ್‌ನ ಹೊಸ ಮಾರ್ಗ!

ಯಾವುದೋ ಕಾರಣಕ್ಕೆ ಮದುವೆಯಾಗಲು ಸಾಧ್ಯವಾಗದ ಏಕಾಂಗಿ ಯುವಕರೇ ಈ ಗ್ಯಾಂಗ್‌ನ ಟಾರ್ಗೆಟ್. ಆಕರ್ಷಕ ಹುಡುಗಿಯರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ತೋರಿಸಿ ಅವರನ್ನು ಮದುವೆಯಾಗುವುದಾಗಿ ನಂಬಿಸಿ ಬಲೆಗೆ ಬೀಳಿಸಲಾಗುತ್ತದೆ.

Wedding Fraud – ಊಟದಲ್ಲಿ ಮಾದಕ ವಸ್ತು ಬೆರೆಸಿ, ಲಕ್ಷ ಲಕ್ಷ ಲೂಟಿ!

ಫಸ್ಟ್‌ ನೈಟ್‌ ದಿನ ವಧು ಮನೆಯ ಎಲ್ಲ ಸದಸ್ಯರಿಗೂ ಮತ್ತಿನ ಔಷಧಿ ಬೆರೆಸಿದ ಆಹಾರ ನೀಡುತ್ತಾಳೆ. ಮನೆಯವರೆಲ್ಲ ಪ್ರಜ್ಞೆ ತಪ್ಪಿದ ನಂತರ, ಮನೆಯಲ್ಲಿದ್ದ ಎಲ್ಲ ಹಣ, ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ ವಧು ಪರಾರಿಯಾಗುತ್ತಾಳೆ. ಬೆಳಗ್ಗೆ ಎದ್ದಾಗ ವಧು ನಾಪತ್ತೆ! ಜೊತೆಗೆ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳೂ ಮಾಯ! ಇದೇ ರೀತಿ ವಂಚನೆಗೊಳಗಾದ ಕನಿಷ್ಠ 10 ಯುವಕರು ದೂರು ನೀಡಿದಾಗ, ಇದೊಂದು ಸಂಘಟಿತ ವಂಚನೆ ಜಾಲ ಎಂಬುದು ಬೆಳಕಿಗೆ ಬಂದಿದೆ.

Wedding Fraud – ಮುಕೇಶ್ ಗುಪ್ತಾನೇ ಈ ವಂಚನೆ ಗ್ಯಾಂಗ್‌ನ ಸೂತ್ರಧಾರ!

ಈ ಇಡೀ ವಂಚನೆಯ ಹಿಂದೆ ಮುಕೇಶ್ ಗುಪ್ತಾ ಎಂಬಾತನ ಕೈವಾಡವಿದೆ ಎಂದು ಯುವಕರು ಆರೋಪಿಸಿದ್ದಾರೆ. ಮದುವೆ ಮಾಡಿಸುವುದಾಗಿ ಹೇಳಿ, ಪ್ರತಿಯೊಬ್ಬ ವರನಿಂದಲೂ ಈತ ₹1.25 ಲಕ್ಷ ರೂಪಾಯಿ ಪಡೆದಿದ್ದಾನೆ ಎನ್ನಲಾಗಿದೆ. ಅಲಿಗಢದ ನಿವಾಸಿ ಪ್ರತೀಕ್ ಶರ್ಮಾ ಕೂಡ ಈ ವಂಚನೆಗೊಳಗಾದವರಲ್ಲಿ ಒಬ್ಬರು. ಕರ್ವಾ ಚೌತ್‌ನ ಮರುದಿನ, ಅವರ ಪತ್ನಿ ಶೋಭಾ ಎಂಬಾಕೆ ಮನೆಯಿಂದ ₹4.01 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ. ಈ ಶೋಭಾ ಕೂಡ ಆರೋಪಿ ಮುಕೇಶ್ ಗುಪ್ತಾ ಮೂಲಕವೇ ಪರಿಚಯವಾಗಿದ್ದು, ಇವಳು ಬಿಹಾರ ಮೂಲದವಳು ಎಂದು ಹೇಳಲಾಗಿದೆ. Read this also : ಮದುವೆಗೂ ಮುನ್ನ ನಾಪತ್ತೆಯಾದ ವಧು: ‘ಮುಂದಿನ ಜನ್ಮದಲ್ಲಿ ಸಿಗೋಣ’ ಮೆಸೇಜ್ ಕಳುಹಿಸಿ ನಾಪತ್ತೆಯಾದ ಯುವತಿ!

‘ಪರಾರಿಯಾದ ನಂತರ ಆಕೆ ಬಿಟ್ಟುಹೋದ ಮೊಬೈಲ್‌ಗೆ ಇದೇ ಗ್ಯಾಂಗ್‌ಗೆ ಸೇರಿದ ಹಲವು ನಂಬರ್‌ಗಳಿಂದ ಕರೆಗಳು ಬರುತ್ತಿರುವುದನ್ನು ನಾವು ಪತ್ತೆ ಮಾಡಿದ್ದೇವೆ’ ಎಂದು ಪ್ರತೀಕ್ ಶರ್ಮಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Bride flees with cash and gold jewelry in Aligarh wedding fraud

Wedding Fraud – ಕರ್ವಾ ಚೌತ್‌ ಹತ್ತಿರದಲ್ಲಿ ಅವಸರದ ಮದುವೆಗಳ ಹಿಂದಿನ ಮರ್ಮ!

ಈ ಗ್ಯಾಂಗ್ ವಂಚನೆಗಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ಸಮಯವೂ ಕುತೂಹಲಕಾರಿಯಾಗಿದೆ. ಕರ್ವಾ ಚೌತ್‌ ಹಬ್ಬದ ಸನಿಹದಲ್ಲಿಯೇ ಬಹುತೇಕ ಮದುವೆಗಳನ್ನು ಅವಸರದಲ್ಲಿ ದೇವಾಲಯ, ಮನೆ ಅಥವಾ ಸಣ್ಣ ಹಾಲ್‌ಗಳಲ್ಲಿ ನಡೆಸುತ್ತಿದ್ದರು. ಹೀಗೆ ಅವಸರದಲ್ಲಿ ಮದುವೆ ಮಾಡಿಸುವುದರಿಂದ ಯುವಕರಿಗೆ ಮತ್ತು ಅವರ ಕುಟುಂಬಕ್ಕೆ ವಿಚಾರ ಮಾಡಲು ಅವಕಾಶವೇ ಸಿಗುತ್ತಿರಲಿಲ್ಲ. ಗ್ರಾಮೀಣ ಪ್ರದೇಶದ ಯುವಕರೇ ಹೆಚ್ಚು ವಂಚನೆಗೆ ಒಳಗಾಗಿದ್ದು, ಅವಮಾನದ ಭಯದಿಂದ ಅನೇಕರು ಪೊಲೀಸರಿಗೆ ದೂರು ನೀಡಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಮಾಜಿ ಮೇಯರ್ ಶಕುಂತಲಾ ಭಾರತಿ ಅವರ ಗಮನಕ್ಕೂ ಈ ಪ್ರಕರಣ ಬಂದಿದ್ದು, ಅನೇಕ ಯುವಕರು ಹಣ ಮತ್ತು ಆಭರಣಗಳನ್ನು ಕಳೆದುಕೊಂಡಿರುವುದಾಗಿ ದೂರು ನೀಡಿದ್ದಾರೆ.

ಈ ಮದುವೆ ಹೆಸರಿನ ದೊಡ್ಡ ವಂಚನೆ ಜಾಲದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನಾದರೂ ಯಾರಾದರೂ ವಂಚನೆಗೊಳಗಾಗಿದ್ದರೆ, ಭಯಪಡದೆ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಮದುವೆ ಪ್ರಸ್ತಾಪಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಆಫರ್‌ಗಳ ಬಗ್ಗೆ ಎಚ್ಚರದಿಂದಿರಿ!

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular