Friendship – ನಿಜವಾದ ಸ್ನೇಹಿತರಿಗಾಗಿ ಇಡೀ ಜೀವಮಾನವನ್ನು ಮೀಸಲಿಟ್ಟರೂ ಸಾಲದು. ಜೀವನದ ಯಾವುದೇ ಸಂದರ್ಭವಿರಲಿ, ಕಷ್ಟವಿರಲಿ ಅಥವಾ ಸುಖವಿರಲಿ, ಒಬ್ಬ ನಿಸ್ವಾರ್ಥ ಸ್ನೇಹಿತ ಜೊತೆಗಿದ್ದರೆ ಜೀವನವೇ ಸುಂದರ. ಸ್ನೇಹ ಎಂದರೆ ಕೇವಲ ಮಾತುಗಳಲ್ಲ, ಅದು ಇಬ್ಬರು ಆತ್ಮಗಳ ನಡುವಿನ ಭಾವನಾತ್ಮಕ ಬಂಧ. ಇಂತಹ ಅಮೂಲ್ಯ ಸ್ನೇಹದ ಮಹತ್ವವನ್ನು ಸಾರುವ ಒಂದು ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಕಣ್ಣಾಲಿಗಳು ಒದ್ದೆಯಾಗಿವೆ. ಇಂತಹ ಸ್ನೇಹಿತರು ಸಿಗುವುದು ನಿಜಕ್ಕೂ ಅದೃಷ್ಟ ಎಂದೂ ಹಲವರು ಕಾಮೆಂಟ್ ಮಾಡುತ್ತಿದ್ದಾರೆ.

Friendship – ಸ್ನೇಹಿತನಿಗೆ ‘ಕೊನೆಯ ಗಿಫ್ಟ್’ ತಂದ ವೃದ್ಧನ ನೋವು
ಈ ಹೃದಯವಿದ್ರಾವಕ ಕಥೆ ನಡೆದಿರುವುದು ರಾಜಸ್ಥಾನದಲ್ಲಿ. ಇಲ್ಲಿನ ಪ್ರಖ್ಯಾತ ಬಿಜೆಪಿ ನಾಯಕ ಮತ್ತು ಮಾಜಿ ಸಚಿವರಾದ ದಿವಂಗತ ನಂದಲಾಲ್ ಮೀನಾ ಅವರ ಗೆಳೆತನದ ಕಥೆ ಇದು. ನಂದಲಾಲ್ ಮೀನಾ ಅವರ ಬಾಲ್ಯದ ಸ್ನೇಹಿತರೊಬ್ಬರು, ಅವರ ಅನಾರೋಗ್ಯದ ಸುದ್ದಿ ಕೇಳಿ ಅವರನ್ನು ನೋಡಲು ದೂರದ ಹಳ್ಳಿಯಿಂದ ಬರುತ್ತಾರೆ. ವೀಡಿಯೋದಲ್ಲಿ ಕಂಡುಬರುವಂತೆ, ಆ ವೃದ್ಧ ಸ್ನೇಹಿತರು ತಮ್ಮ ಹೊಲದಲ್ಲಿ ಬೆಳೆದ ತಾಜಾ ಸೊರಕಾಯಿಗಳನ್ನು ತಮ್ಮ ಪ್ರೀತಿಯ ಗೆಳೆಯ ನಂದಲಾಲ್ ಮೀನಾ ಅವರಿಗೆ ಉಡುಗೊರೆಯಾಗಿ ಕೊಡಲು ತರುತ್ತಾರೆ. ತಮ್ಮ ಗೆಳೆಯ ಗುಣಮುಖರಾಗುತ್ತಾರೆಂಬ ಭರವಸೆಯೊಂದಿಗೆ, ಉಲ್ಲಾಸದಿಂದ ಹೆಜ್ಜೆ ಹಾಕುತ್ತಾ ಬರುತ್ತಿದ್ದ ಆ ಸ್ನೇಹಿತನಿಗೆ ಮುಂದೆ ಕಾದಿದ್ದು ಭಾರಿ ಆಘಾತ!
Friendship – ಸುದ್ದಿ ಕೇಳಿ ಕಂಬನಿ ಮಿಡಿದ ಹಳೆಯ ಗೆಳೆಯ
ನಂದಲಾಲ್ ಮೀನಾ ಅವರ ಮನೆ ತಲುಪಿದ ಮೇಲೆ, ಅವರಿಗೆ ಎದುರಾದ ಸನ್ನಿವೇಶ ನೋಡಿ ಆ ಸ್ನೇಹಿತ ತೀವ್ರ ಆಘಾತಕ್ಕೆ ಒಳಗಾಗುತ್ತಾರೆ. ಸುದ್ದಿ ತಿಳಿದುಬಂದದ್ದು ಏನೆಂದರೆ, ಅವರ ಪ್ರೀತಿಯ ಗೆಳೆಯ, ಏಳು ಬಾರಿ ಶಾಸಕ, ಮಾಜಿ ಸಚಿವ ನಂದಲಾಲ್ ಮೀನಾ ಅವರು ಇನ್ನು ಇಲ್ಲ. ಅವರು ನಿಧನರಾಗಿದ್ದಾರೆ! ಈ ಸುದ್ದಿ ಕೇಳಿದ ತಕ್ಷಣ ಆ ವೃದ್ಧ ಸ್ನೇಹಿತರು ತಮ್ಮ ದುಃಖವನ್ನು ತಡೆದುಕೊಳ್ಳಲಾಗದೆ ನೆಲದ ಮೇಲೆ ಕುಳಿತುಬಿಡುತ್ತಾರೆ. ಮುಂದೆ ಅವರು ಮಾಡಿದ್ದೇ ಅಲ್ಲಿ ನೆರೆದಿದ್ದ ಎಲ್ಲರ ಕಣ್ಣಲ್ಲಿ ನೀರು ತರಿಸಿತ್ತು.
Read this also : ಸೋಫಾದಲ್ಲಿ ನಿದ್ರಿಸುತ್ತಿದ್ದ ಗರ್ಭಿಣಿ ತಾಯಿಗೆ ಪುಟ್ಟ ಮಗುವಿನ ಅಮೂಲ್ಯ ಆರೈಕೆ, ವಿಡಿಯೋ ವೈರಲ್…!
Friendship – ಕೊನೆಯ ಕ್ಷಣದ ನೋವಿನ ಉಡುಗೊರೆ
ವೃದ್ಧ ಸ್ನೇಹಿತರು ತಮ್ಮ ಚೀಲದಿಂದ ತಮ್ಮ ಗೆಳೆಯನಿಗೆ ನೀಡಲು ತಂದಿದ್ದ ಆ ಸೊರಕಾಯಿಗಳ ಗಿಫ್ಟ್ ಅನ್ನು ಹೊರತೆಗೆದು, ತಮ್ಮ ಗೆಳೆಯನ ಭಾವಚಿತ್ರದ ಮುಂದೆ ನಿಂತು ಕಣ್ಣೀರು ಹಾಕುತ್ತಾರೆ. ಆ ಕೊನೆಯ ಉಡುಗೊರೆಯನ್ನು ಅವರು ಪ್ರೀತಿಯಿಂದ ಹಿಡಿದುಕೊಂಡಿದ್ದ ರೀತಿ, ಮತ್ತು ಸುರಿಯುತ್ತಿದ್ದ ಕಣ್ಣೀರು ಅಲ್ಲಿ ನೆರೆದಿದ್ದ ಎಲ್ಲರ ಹೃದಯವನ್ನು ಕಲಕಿತು ಎನ್ನಬಹುದಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಸ್ನೇಹದ ಈ ಗಟ್ಟಿತನ ಮತ್ತು ಭಾವನಾತ್ಮಕ ದೃಶ್ಯದ ವೀಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ 25 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದು ವೈರಲ್ ಆಗಿದೆ. ಈ ಮನಕಲಕುವ ವೀಡಿಯೋಗೆ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ. “ಇದು ನಿಜವಾದ ಸ್ನೇಹ. ಇಂತಹ ಕರುಣೆ ಮತ್ತು ಪ್ರೀತಿಯನ್ನು ನೋಡಿ ನನ್ನ ಕಣ್ಣುಗಳು ತುಂಬಿ ಬಂದವು” ಎಂದು ಒಬ್ಬ ಬಳಕೆದಾರರು ಬರೆದರೆ, ಮತ್ತೊಬ್ಬರು, “ಅವರಿಗೆ ಆ ಕ್ಷಣ ಬಹಳ ಕಷ್ಟವಾಗಿರಬಹುದು. ನಿಮ್ಮ ಸ್ನೇಹಕ್ಕೆ ಒಂದು ಸಲ್ಯೂಟ್!” ಎಂದು ಪ್ರತಿಕ್ರಿಯಿಸಿದ್ದಾರೆ.
