Protest – ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯ ಮೂರ್ತಿ ಗವಾಯಿರವರ ಮೇಲೆ ವಕೀಲ ಕಿಶೋರ್ ರಾಕೇಶ್ ರವರು ಶೂ ಎಸೆತ ಮಾಡಿರುವಂತವರನ್ನು ದೇಶ ದ್ರೋಹಿ ಕಾಯ್ದೆಯಡಿ ಪ್ರಕರಣವನ್ವು ದಾಖಲು ಮಾಡಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಗುಡಿಬಂಡೆ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಪ್ರತಿಭಟನೆಯನ್ನು ನಡೆಸಿ ಬಳಿಕ ರಾಷ್ಟ್ರಪತಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

Protest – ಪ್ರಜಾಪ್ರಭುತ್ವದ ಮೂರನೇ ಅಂಗದ ಮೇಲೆ ಖಂಡನಾರ್ಹ
ಈ ವೇಳೆ ದಲಿತ ಮುಖಂಡ ಎಲ್.ಎನ್.ಈಶ್ವರಪ್ಪ ಮಾತನಾಡಿ, ಸಂವಿಧಾನಕ್ಕೆ ಅಪಾಯವಾದರೇ ಕೇವಲ ದಲಿತರಿಗೆ ಮಾತ್ರ ತೊಂದರೇಯಾಗಲ್ಲ ಇದರಿಂದ ದೇಶದ ಪ್ರತಿಯೋಬ್ಬ ಮನುಷ್ಯನಿಗೂ ಸಹ ತೊಂದರೇಯಾಗುತ್ತೆ, ಅದನ್ನು ತಿಳಿದುಕೊಳ್ಳುತ್ತಿಲ್ಲ. ನೆಪ ಮಾತ್ರಕ್ಕೆ ಅವರನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಪೋಲೀಸರು ಯಾಕೆ ಸುಮೋಟ್ ಕೇಸ್ ದಾಖಲಿಸಿಕೊಂಡು ಅವರ ಮೇಲೆ ಯಾಕೆ ಕಾನೂನು ರೀತಿಯಲ್ಲಿ ಕ್ರಮವನ್ನು ವಹಿಸಲಿಲ್ಲ. ಪ್ರಜಾಪ್ರಭುತ್ವದ ಮೂರನೇ ಅಂಗದ ಮೇಲೆ ದಾಳಿಯಾಗಿರುವುದನ್ನು ದೇಶದ ಜನ ಕ್ಷಮಿಸಲ್ಲ. ಈ ರೀತಿಯ ದಾಳಿಗಳನ್ನು ಮಾಡಲು ಬಿಡಬಾರದು. ಈ ರೀತಿಯ ದಾಳಿಯನ್ನು ಮಾಡುವ ಮನಸುಗಳನ್ನು ಸರ್ಕಾರಗಳು ಕಡಿವಾಣ ಹಾಕಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ದೇಶದ ಸಾಮಾನ್ಯ ಜನರಿಗೆ ಬಾರಿ ದೊಡ್ಡ ಮಟ್ಟದಲ್ಲಿ ತೊಂದರೆಗಳಾಗುತ್ತವೆ ಎಂದರು.
Protest – ಕಠಿಣ ಕಾನೂನು ಕ್ರಮ ಜರುಗಿಸಬೇಕು
ಬಳಿಕ ದಲಿತ ಮುಖಂಡರಾದ ಗಂಗಪ್ಪ, ಜೀವಿಕ ನಾರಾಯಣಸ್ವಾಮಿ, ಪ್ರೆಸ್ ಸುಬ್ಬರಾಯಪ್ಪ ರವರು ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ನ್ಯಾಯಾಧೀಶರ ಮೇಲೆ ಹಲ್ಲೆ ಮಾಡಲು ಯತ್ನಿಸಿದಂತಹ ವಕೀಲ ಈ ದೇಶದ ಸಂವಿದಾನದಡಿಯಲ್ಲೇ ಬದುಕುತ್ತಿರುವುದು. ಅದನ್ನುಮರೆತ ವಕೀಲ ಈ ರೀತಿಯ ಕೆಲಸಕ್ಕೆ ಕೈ ಹಾಕಿದ್ದಾನೆ. ದೇಶದ ಜನರು ಶಾಂತವಾಗಿ ಬದುಕುವುದನ್ನು ಸಹಿಸೊಲ್ಲ. ಮನುವಾದಿಗಳಿಗೆ ಮುಸ್ಲೀಂರು ವಿರೋಧಿಗಳಲ್ಲ, ದಲಿತ ಜನಾಂಗದವರು, ದಲಿತರ ಮೇಲೆ ನಿರಂತರ ದಾಳಿಗಳು ನಡೆಯುತ್ತಿದೆ. ಈ ಕುರಿತು ಕಠಿಣ ಕಾನೂನು, ಕಠಿಣ ಕ್ರಮಗಳು ನಡೆಯಬೇಕು ಎಂದರು. Read this also : ಮಳೆ ನಡುವೆ ಕಾಯುತ್ತಿದ್ದ ಅಜ್ಜಿಯ ಕಣ್ಣೀರು ಒರೆಸಿದ ವ್ಯಕ್ತಿ, ಹೃದಯ ಸ್ಪರ್ಶಿಸಿದ ವಿಡಿಯೋ ವೈರಲ್…!

ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಚನ್ನರಾಯಪ್ಪ, ಎಂ ಎನ್ ನಾರಾಯಣಪ್ಪ, ನರಸಿಂಹಪ್ಪ, ಗಂಗರಾಜು, ನರಸಿಂಹಮೂರ್ತಿ, ಮಾದೇಶ, ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ, ಜೀವಿಕ ಅಮರಾವತಿ, ಕೃಷ್ಣಪ್ಪ ಸೇರಿದಂತೆ ಹಲವರು ಇದ್ದರು.
