Thursday, December 4, 2025
HomeStateLocal News : 3 ವರ್ಷ ಕಳೆದರೂ ಅಪೂರ್ಣ ಕಾಮಗಾರಿ: "ಅಂಬೇಡ್ಕರ್ ವಸತಿ ಶಾಲೆ"ಗೆ ವಿದ್ಯಾರ್ಥಿಗಳ...

Local News : 3 ವರ್ಷ ಕಳೆದರೂ ಅಪೂರ್ಣ ಕಾಮಗಾರಿ: “ಅಂಬೇಡ್ಕರ್ ವಸತಿ ಶಾಲೆ”ಗೆ ವಿದ್ಯಾರ್ಥಿಗಳ ಪ್ರವೇಶ – ಕೊರತೆಗಳ ರಾಶಿ!

Local News : ಚಿಕ್ಕಬಳ್ಳಾಪುರ ತಾಲೂಕಿನ ಬೊಮ್ಮಗಾನಹಳ್ಳಿ ಗ್ರಾಮದ ಬಳಿ, ₹25 ಕೋಟಿಗೂ ಹೆಚ್ಚು ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯ ನೂತನ ಕಟ್ಟಡವು ಕಾಮಗಾರಿ ಪೂರ್ಣವಾಗುವ ಮೊದಲೇ ತರಾತುರಿಯಲ್ಲಿ ಉದ್ಘಾಟನೆಗೊಂಡಿದೆ. ವಿದ್ಯಾರ್ಥಿಗಳು ಸಂತೋಷದಿಂದ ಪ್ರವೇಶಿಸಿದ್ದರೂ, ಕುಡಿಯುವ ನೀರು, ಬಿಸಿ ನೀರು, ಆಟದ ಮೈದಾನ, ಮತ್ತು ಹಾಸಿಗೆಯಂತಹ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಗೊಂಡಿದ್ದಾರೆ.

Local News

​Local News – ಅವಸರದ ಉದ್ಘಾಟನೆ

​ಸುಮಾರು 8 ಎಕರೆ ಪ್ರದೇಶದಲ್ಲಿ, ₹25.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ನೂತನ ಕಟ್ಟಡವನ್ನು ಇತ್ತೀಚೆಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಉದ್ಘಾಟಿಸಿದರು. ಜಿಲ್ಲಾಡಳಿತ ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.
​ಶಾಸಕರ ನಡೆ: ವೇದಿಕೆಗಿಲ್ಲ, ದಾರಿಯಲ್ಲೇ ಸನ್ಮಾನ!
​ಶಾಸಕರು ನೂತನ ಶಾಲಾ ಕೊಠಡಿಗಳು ಮತ್ತು ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಹೆಚ್ಚುವರಿ ಕಾಮಗಾರಿಗಳಿಗೆ ಅನುದಾನ ಒದಗಿಸುವ ಭರವಸೆ ನೀಡಿದ ಶಾಸಕರು, ಶಾಲೆ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸದೆ, ದಾರಿಯಲ್ಲೇ ಸನ್ಮಾನ ಸ್ವೀಕರಿಸಿ ಹೊರಟು ಹೋದರು. ಇದರಿಂದ ಶಾಸಕರ ಜೊತೆಗಿದ್ದ ಅಧಿಕಾರಿಗಳು ಮತ್ತು ಮುಖಂಡರೂ ವೇದಿಕೆಯತ್ತ ಸುಳಿಯಲಿಲ್ಲ.
​ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲಾ ಸುದ್ದಿ, ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ, ಶಿಕ್ಷಣ ಸೌಲಭ್ಯ

ಮೂಲಭೂತ ಸೌಕರ್ಯಗಳ ಕೊರತೆ: ವಿದ್ಯಾರ್ಥಿಗಳಿಗೆ ಕಾದ ಕಷ್ಟ!

​ಕಳೆದ 3 ವರ್ಷಗಳಿಂದ ಗುತ್ತಿಗೆದಾರರು ನಡೆಸುತ್ತಿರುವ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ. ಒಟ್ಟು 6 ರಿಂದ 10ನೇ ತರಗತಿಯ 228 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಅವರಿಗೆ ಎದುರಾಗಿರುವ ಪ್ರಮುಖ ಸಮಸ್ಯೆಗಳ ಪಟ್ಟಿ ಹೀಗಿದೆ:

local news



ವಿದ್ಯಾರ್ಥಿಗಳಿಗೆ ಕಾಡುತ್ತಿರುವ ಪ್ರಮುಖ ಕೊರತೆಗಳು:

​ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು.
​ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ ಕಲ್ಪಿಸದಿರುವುದು.
​ಹಾಸಿಗೆ ಮತ್ತು ದಿಂಬು ಇನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ.
​ಆಟವಾಡಲು ಮೈದಾನದ ಕೊರತೆ.
​ಹಳೆಯ ಕಟ್ಟಡದ ಸೋಲಾರ್‌ಗಳನ್ನು ಹೊಸ ಕಟ್ಟಡದಲ್ಲಿ ಅಳವಡಿಸಲು ಇಟ್ಟಿರುವುದು.
​ಶಿಕ್ಷಕರು ಮತ್ತು ಇತರೆ ಸಿಬ್ಬಂದಿಗಾಗಿ (ಬೋಧಕ-ಬೋಧಕೇತರ) ನಿರ್ಮಿಸಲಾಗಿರುವ ವಸತಿ ನಿಲಯಗಳು ಇನ್ನೂ ಅಪೂರ್ಣ.

​ಸುರಕ್ಷತಾ ಪ್ರಶ್ನೆಗಳು: ತಂತಿ ಬೇಲಿ ಮತ್ತು ಅಪಾಯಕಾರಿ ನೀರಿನ ಹಳ್ಳ

​ಶಾಲೆಯು ಊರಿನಿಂದ ಹೊರಗೆ, ಬೆಟ್ಟ-ಗುಡ್ಡಗಳ ನಡುವೆ ನಿರ್ಮಾಣವಾಗಿದೆ. ಕಟ್ಟಡದ ಮುಂಭಾಗ ಮಾತ್ರ ಕಾಂಪೌಂಡ್ ಇದ್ದು, ಉಳಿದ ಮೂರು ಕಡೆಗಳಲ್ಲಿ ಕೇವಲ ತಂತಿ ಬೇಲಿ ಅಳವಡಿಸಲಾಗಿದೆ.

ತೆರೆದ ಅಪಾಯಕಾರಿ ನೀರಿನ ತೊಟ್ಟಿ

​ಬಾಲಕರ ವಸತಿ ನಿಲಯದ ಹಿಂಭಾಗದಲ್ಲಿ ಆಳ ಮತ್ತು ಹಗಲವಾದ ಅಪಾಯಕಾರಿ ನೀರಿನ ತೊಟ್ಟಿ ಮುಚ್ಚದೆ ತೆರೆದಿದೆ. ಪೋಷಕರು, “ಶಾಲೆಯ ಸಮೀಪವೇ ಗುಡಿಬಂಡೆ ಕೆರೆ ಇದ್ದು, ವಿದ್ಯಾರ್ಥಿಗಳು ತಂತಿ ಬೇಲಿ ದಾಟಿ ನೀರಿನಲ್ಲಿ ಆಟವಾಡಲು ಹೋಗುವ ಅಥವಾ ಈ ಹಳ್ಳದಲ್ಲಿ ಅನಾಹುತವಾಗುವ ಭಯವಿದೆ. ಇಂತಹ ಅಪಾಯಗಳಿಗೆ ಯಾರು ಹೊಣೆ?” ಎಂದು ಪ್ರಶ್ನಿಸಿದ್ದಾರೆ.

local news

​ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ್ ಆರ್ ಪಟೇಲ್, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.
​ಸದ್ಯ, ಕಾಮಗಾರಿ ಪೂರ್ಣವಾಗುವ ಮೊದಲೇ ಶಾಲೆ ಪ್ರಾರಂಭಿಸಿರುವ ಜಿಲ್ಲಾಡಳಿತವು, ವಿದ್ಯಾರ್ಥಿಗಳ ಮೂಲಭೂತ ಸೌಕರ್ಯಗಳ ಕೊರತೆಗಳನ್ನು ಎಷ್ಟು ಬೇಗ ನೀಗಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular