HIV Awareness – ಮಹಾಮಾರಿ ಹೆಚ್.ಐ.ವಿ ಏಡ್ಸ್ ಬಗ್ಗೆ ಅರಿವು ಪಡೆದುಕೊಂಡು, ಇತರರಿಗೂ ಅರಿವು ಮೂಡಿಸಿ, ಈ ಮಾರಕ ಕಾಯಿಲೆಯನ್ನು ತಡೆಗಟ್ಟಲು ಎಲ್ಲರೂ ಸಹಕರಿಸಬೇಕೆಂದು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯ ಐ.ಸಿ.ಟಿ.ಸಿ ಕೇಂದ್ರದ ಆಪ್ತ ಸಮಾಲೋಚಕ ಸುದರ್ಮನ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಸೇರಿದಂತೆ ತಾಲೂಕಿನ ವರ್ಲಕೊಂಡ, ಸೋಮೇಶ್ವರ, ಸೋಮೇನಹಳ್ಳಿ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಹಾಗೂ ನಿಯಂತ್ರಣ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಹೆಚ್.ಐ.ವಿ ಏಡ್ಸ್ ಕುರಿತು ಬೀದಿ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು.

HIV Awareness – ಹೆಚ್.ಐ.ವಿ ಏಡ್ಸ್ ಕುರಿತು ಜಾಗೃತಿ ಅಗತ್ಯ
ಯಾವುದೇ ರೋಗ ಬರುವುದಕ್ಕೂ ಮುನ್ನವೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೇ ರೋಗಗಳಿಂದ ಪಾರಾಗಬಹುದು. ಅದೇ ಮಾದರಿಯಲ್ಲಿ ಹೆಚ್.ಐ.ವಿ ಏಡ್ಸ್ ಎಂಬ ಕಾಯಿಲೆ ಮಾರಕ ಕಾಯಿಲೆಯಾಗಿದೆ. ಒಬ್ಬರಿಂದ ಒಬ್ಬರಿಗೆ ಹರಡುವಂತಹುದಾಗಿದೆ. ಈ ಕಾಯಿಲೆ ಬರುವುದಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕು. ಹೆಚ್.ಐ.ವಿ ಬಾದಿತರನ್ನು ಗೌರವಯುತವಾಗಿ ಕಾಣಬೇಕಿದೆ, ಸಮಾಜದಲ್ಲಿ ಬಾಳ್ವೇಯನ್ನು ಮಾಡಬೇಕು. ವರ್ಷ ಪೂರ್ತಿ ಕಾರ್ಯಕ್ರಮಗಳಲ್ಲಿ ತಿಳುವಳಿಕೆ ಮತ್ತು ಅರಿವು ಮೂಡಿಸಿ ಮುಂದಿನ ಪೀಳಿಗೆಗೆ ಏಡ್ಸ್ ಮುಕ್ತ ಆರೋಗ್ಯಕರ ಸಮಾಜವನ್ನು ಸೃಷ್ಟಿಸುವಂತಹ ಜವಾಬ್ದಾರಿ ನಮ್ಮೆಲ್ಲರಾದಾಗಿದೆ ಎಂದರು.
HIV Awareness – ಸೋಂಕಿನ ಕುರಿತು ಅರಿವು ಮೂಡಿಸಿ
ಕಾರ್ಯಕ್ರಮದಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ದಪ್ಪರ್ತಿ ನಂಜುಂಡ ಮಾತನಾಡಿ, ಎಚ್‌ಐವಿ ಸೋಂಕಿನ ಬಗ್ಗೆ ಯುವಜನತೆ ಎಚ್ಚರ ವಹಿಸಬೇಕು. ಹಾಗೆಯೇ ಏಡ್ಸ್ ನಂತಹ ಮಾರಕ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಜನರಲ್ಲಿ ಈ ಬಗ್ಗೆ ವ್ಯಾಪಕ ಅರಿವು ಮೂಡಿಸಲು ಆಂದೋಲನ ಹಮ್ಮಿಕೊಂಡಿರುವುದು ಉತ್ತಮವಾದ ಕೆಲಸವಾಗಿದೆ. ಗ್ರಾಮೀಣ ಭಾಗಗಳ ಜನತೆಯಲ್ಲಿ ಹೆಚ್ ಐ ವಿ ಏಡ್ಸ್ ಕುರಿತು ಮಾಹಿತಿಯ ಕೊರತೆ ಹೆಚ್ಚಾಗಿದ್ದು, ಅವರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಈ ಕಾರ್ಯಕ್ರಮವನ್ನು ಗ್ರಾಮೀಣ ಜನತೆ ಸದ್ಬಳಕೆ ಮಾಡಿಕೊಳ್ಳಬೇಕು. ಜನರು ತಾವು ಪಡೆದುಕೊಂಡ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಂಡು ಏಡ್ಸ್ ತಡೆಗಟ್ಟಬೇಕು ಎಂದರು. Read this also : ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಿ : ಅತಿಕ್ ಪಾಷ

HIV Awareness – ಬೀದಿ ನಾಟಕದ ಮೂಲಕ ಅರಿವು
ಮಂಡ್ಯ ಮೂಲದ ಶ್ರೀ ಅರುಣೋದಯಾ ಕಲಾತಂಡದವರು ಗುಡಿಬಂಡೆ ಪಟ್ಟಣ ಸೇರಿದಂತೆ ತಾಲೂಕಿನ ವರ್ಲಕೊಂಡ, ಸೋಮೇಶ್ವರ, ಸೋಮೇನಹಳ್ಳಿ ಗ್ರಾಮಗಳಲ್ಲಿ ಬೀದಿ ನಾಟಕಗಳ ಮೂಲಕ ಹೆಚ್.ಐ.ವಿ ಏಡ್ಸ್ ಕುರಿತು ಅರಿವು ಮೂಡಿಸಿದರು. ಈ ವೇಳೆ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರದೀಪ್, ವೈದ್ಯರಾದ ಡಾ.ಗಿರೀಶ್, ಡಾ.ಅನುಷಾ, ಡಾ.ಆಶಾ, ಆರೋಗ್ಯ ರಕ್ಷಾ ಸಮಿತಿಯ ಕೆ.ಟಿ.ನಂಜುಂಡಪ್ಪ, ಬುಲೆಟ್ ಶ್ರೀನಿವಾಸ್, ರಮೇಶ್, ರಹಮತ್, ಆರೋಗ್ಯ ಇಲಾಖೆಯ ನಾಗರಾಜ್, ಗಂಗಾಧರ್, ಮಮತಾ, ಮಂಜುಳಾ ಸೇರಿದಂತೆ ಮಂಡ್ಯ ಮೂಲದ ಶ್ರೀ ಅರುಣೋದಯಾ ಕಲಾತಂಡದವರು ಹಾಜರಿದ್ದರು.
